12 ಶಾಸಕರ ಪಕ್ಷಾಂತರ - 1 ತಿಂಗಳಲ್ಲಿ ಹೊಸ ಸರ್ಕಾರದ ಸಾರಥಿ ಇವರು! ಭವಿಷ್ಯ

By Web DeskFirst Published Jun 15, 2019, 1:08 PM IST
Highlights

ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗುತ್ತದೆ. 12 ಶಾಸಕರು ಪಕ್ಷಾಂತರ ಮಾಡುತ್ತಾರೆ. ಒಂದು ತಿಂಗಳಲ್ಲಿ ರಾಜ್ಯ ರಾಜಕೀಯ ಸಂಪೂರ್ಣ ಬದಲಾಗುತ್ತದೆ ಎಂದು ಭವಿಷ್ಯ ನುಡಿಯಲಾಗಿದೆ.

ಕೊಪ್ಪಳ (ಜೂ.15) :  ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಿ ಒಂದು ದಿನ ಕಳೆಯುವ ಮೊದಲೇ ಕೊಪ್ಪಳದ ಕಾಲಜ್ಞಾನ ಸದ್ಗುರು ಸರ್ಕಾರದ ಬಗ್ಗೆ ಭವಿಷ್ಯ ನುಡಿದಿದ್ದಾರೆ. 

ರಾಜ್ಯದಲ್ಲಿ ಅಸ್ತಿತ್ವದಲ್ಲಿ ಇರುವ ಸಮ್ಮಿಶ್ರ ಸರ್ಕಾರ  26 ರಿಂದ 29 ದಿನಗಳ ಒಳಗೆ ಪತನ ಆಗುವ ಸ್ಥಿತಿಯಲ್ಲಿದೆ ಎಂದು ಭವಿಷ್ಯ ನುಡಿಯಲಾಗಿದೆ. 

'ವಂಚ ವನ ಕೆಡಿಸಿದ, ಕುಂಟ ಮನೆ ಹಾಳು ಮಾಡಿದ ಹಂಗ ಡೂಗ, ಕುಂಟ ಕುಲಗೇಡಿ ,ಡೂಗ ಅಡ್ನೇಡಿ ಎನ್ನುವ ಹಾಗೆ ಇಬ್ಬರೂ ಕೂಡಿಕೊಂಡು ತೆಗ್ಗಿಗೆ ಬಿಳುತ್ತಾರೆ . ಮುಂದೆ ಸ್ವಚ್ಛಚಾಗಿ, ನಿಶ್ಚಳವಾಗಿ ಆಡಳಿತ ನಡೆಸುವ ವ್ಯಕ್ತಿಗಳು, ಸತ್ಯವಂತರು ಹುಟ್ಟಿ ಬರುತ್ತಾರೆ. ಬಲ ಮನೆಯಲ್ಲಿರುವ ಅಣ್ಣನ ಮನಸ್ಸು, ಎಡಮನೆಯಲ್ಲಿರುವುದಿಲ್ಲ. ಇಬ್ಬರು ಹೋದರೆ, ಮೂವರು ಎದ್ದು ಬಂದಾರು. ನಡುವಿನ ಗದ್ದಲದಲ್ಲಿ, ಮತ್ತೊಬ್ಬನು ಕಿತ್ತು ಈ ಕಡೆ ಬಂದಾನು' ಎನ್ನಲಾಗಿದೆ.

ಇಬ್ಬರ ನ್ಯಾಯ, ಮೂರನೆಯವನಿಗೆ ಆಯ ಎನ್ನುವಂತೆ  ಇವರಿಬ್ಬರು ಆ ಕಡೆ ಎದ್ದು ಹೋದಂತೆ  ಆ ಕಡೆಯಿಂದ ಮತ್ತೆ ನಾಲ್ಕು ಜನ ಈ ಕಡೆ ಎದ್ದು ಬರುವಂತಹ ಸನ್ನಿವೇಶ ಗ್ರಹ ಗತಿಯಲ್ಲಿ ಇದೆ. ಹೀಗಾಗಿ ಇದಕ್ಕೆ ಯಾರು ಏನು ಮಾಡುವರು. ಸರಕಾರ ಆಗುವ ಪರಿಸ್ಥಿತಿಯನ್ನು ಮಾತ್ರ ನಾನು ಉಲ್ಲೇಖ ಮಾಡಿದ್ದೇನೆ. ಮುಂದಿನ ಬಾರಿ ಉತ್ತರ ಕರ್ನಾಟಕದಿಂದ ಮುಖ್ಯಮಂತ್ರಿ ಎದ್ದು ಬಂದಾನು. ಬಳ್ಳಾರಿ, ಹುಬ್ಬಳ್ಳಿ ಆಗಬಹುದು ಅಥವಾ ಶಿವಮೊಗ್ಗ ಭಾಗದವರು ಮುಖ್ಯಮಂತ್ರಿ ಆಗುದ ಸಾಧ್ಯತೆಗಳು ಹೆಚ್ಚಿವೆ.

ಭುಗಿಲೆದ್ದ ಅಸಮಾಧಾನ : ಕಾಂಗ್ರೆಸ್ ತೊರೆಯುತ್ತಾರಾ ಹಿರಿಯ ಶಾಸಕ..?

ಈಗಿನ ಸರಕಾರಕ್ಕೆ ಉಜ್ವಲವಾದ ದಿವಸಗಳು ಕಡಿಮೆ ಇವೆ. ನಾವು ಯಾವುದೇ ದೇಶ ಸುತ್ತಬಹುದು, ಕೋಶ ಓದಬಹುದು. ಆದರೆ ನಿತ್ಯವ ಮಾಡುವ ಕಾಯಕದಲ್ಲಿ ಹೊತ್ತು ತರುವಂತಹ ವ್ಯಕ್ತಿಗಳು ಇವರಿಗೆ ಕುತ್ತು ತಂದಾರು. ಕಂಟಕ ಸರಕಾರಕ್ಕೆ ಕುತ್ತು ತರುವ ವ್ಯಕ್ತಿಗಳು ಹೆಚ್ಚಾಗಿದ್ದಾರೆ. ಆದರೆ ತುತ್ತು ಕೊಡುವವರು ಕಡಿಮೆ ಆಗಿದ್ದಾರೆ. ಈ ಸರಕಾರ ಬಹಳ ದಿನ ಇರುವ ಸಾಧ್ಯತೆ ಇಲ್ಲ. ಈ ಹಿಂದೆ ನಾನು ವಿಧಾನಸಭೆ ಚುನಾವಣೆಯಲ್ಲಿ ಕೈ ಕಮರಿತು, ಕಮಲ ಅರಳಿತು ಎಂದು ಹೇಳಿದ್ದೆ ಅದು ಸತ್ಯವಾಗಿದೆ ಎಂದು ಕಾಲಜ್ಞಾನ ಹೇಳಲಾಗಿದೆ.

ಭುಗಿಲೇಳುತ್ತಿರುವ ಅಸಮಾಧಾನದ ನಡುವೆ ಮೈತ್ರಿ ಸರ್ಕಾರದ ಭವಿಷ್ಯ ನುಡಿದ ಡಿಕೆಶಿ

ಮುಂದೆ ನಡೆಯುವ  ದಿನಮಾನಗಳನ್ನು ಗುರುತಿಸಿ ಭವಿಷ್ಯ ಹೇಳುತ್ತೇನೆ. ಈ ಸಾರಿ 10 ರಿಂದ 12 ಜನ ಶಾಸಕರು ಒಂದು ಪಕ್ಷವನ್ನು ಬಿಟ್ಟು ಬಂದು  ಮತ್ತೊಂದು ಪಕ್ಷಕ್ಕೆ ಸೇರಿ ಸರ್ಕಾರ ರಚನೆ ಮಾಡುತ್ತಾರೆ. ನಾನು ಇದನ್ನು ಕಾಲಜ್ಞಾನ ಆಧಾರದ ಮೇಲೆ ಹೇಳುತ್ತೇನೆ ಎಂದು ಭವಿಷ್ಯದಲ್ಲಿ ಉಲ್ಲೇಖಿಸಲಾಗಿದೆ. 

click me!