ವಿದೇಶದಲ್ಲಿರುವ ಸಿಎಂಗೆ ಹೊಸ ಟೆನ್ಶನ್, ಜೆಡಿಎಸ್ ಮುಖಂಡ ಗುಡ್ ಬೈ

By Web Desk  |  First Published Jul 3, 2019, 3:56 PM IST

ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡುತ್ತಿರುವುದು ದೊಡ್ಡ ಸುದ್ದಿಯಾಗಿದ್ದರೆ ಇತ್ತ ಸಿಎಂ ಕುಮಾರಸ್ವಾಮಿ ತವರು ಕ್ಷೇತ್ರ ರಾಮನಗರದಲ್ಲಿಯೂ ರಾಜೀನಾಮೆ ಪರ್ವ ಶುರುವಾಗಿದೆ.


ರಾಮನಗರ (ಜು. 03)   ಸಿಎಂ ಸ್ವಕ್ಷೇತ್ರ ರಾಮನಗರ ಜಿಲ್ಲೆಯಲ್ಲಿ ರಾಜೀನಾಮೆ ಪರ್ವ ಶುರುವಾಗಿದ್ದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಪಿ ಅಶೋಕ್ ಕುಮಾರ್ ತಮ್ಮ ಸ್ಥಾನದಿಂದ ನಿರ್ಗಮಿಸುವ ತೀರ್ಮಾನ ತೆಗೆದುಕೊಂಡಿದ್ದಾರೆ.

ತಮ್ಮ ರಾಜೀನಾಮೆ ಪತ್ರವನ್ನು ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿಗೆ ತಲುಪಿಸಿದ ಅಶೋಕ್ ಕುಮಾರ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಗುಡ್ ಬೈ  ಹೇಳಿದ್ದಾರೆ.

Tap to resize

Latest Videos

ಮುಖ್ಯಮಂತ್ರಿ ಕುಮಾರಸ್ವಾಮಿ ಶ್ಲಾಘಿಸಿದ ಬಿಜೆಪಿ ಶಾಸಕ ಯತ್ನಾಳ್!

ಕಳೆದ 3 ವರ್ಷಗಳಿಂದ ಜೆಡಿಎಸ್ ಜಿಲ್ಲಾಧ್ಯಕ್ಷರಾಗಿದ್ದ ಎಂ.ಪಿ ಅಶೋಕ್ ಕುಮಾರ್ ಕಾರ್ಯನಿರ್ವಹಿಸುತ್ತಿದ್ದರು.  ವೈಯಕ್ತಿಕ ಕಾರಣ ನೀಡಿ ರಾಜೀನಾಮೆ ಸಲ್ಲಿಸಿರುವ ಅಶೋಕ್ ಕುಮಾರ್ ತೀರ್ಮಾನ ಸಹಜವಾಗಿಯೇ ಸಿಎಂ ಕುಮಾರಸ್ವಾಮಿಗೆ ಹೊಸ ಟೆನ್ಶನ್ ತಂದಿದೆ.

 

click me!