
ಸಾಗರ(ಜು.03): ನಾಯಿ ಮನುಷ್ಯನ ಅತ್ಯಂತ ನಂಬಿಗಸ್ಥ ಪ್ರಾಣಿ ಅಂತಾರೆ. ಆದರೆ ಈ ಕತೆಯಲ್ಲಿ ಮನುಷ್ಯನೇ ನಾಯಿಯ ನಂಬಿಗಸ್ಥ ಮಿತ್ರನಾಗಿ ಪರಿವರ್ತನೆಗೊಂಡಿದ್ದಾನೆ.
ಕೊಲೆ ಪ್ರಕರಣವೊಂದರಲ್ಲಿ ಕುಟುಂಬದ ಸದಸ್ಯರೆಲ್ಲರೂ ಜೈಲು ಸೇರಿದ್ದು, ಅನಾಥವಾದ ಸಾಕುನಾಯಿಯನ್ನು ಪೊಲೀಸರೇ ಸಾಕುತ್ತಿರುವ ವಿಚಿತ್ರ ಘಟನೆ ಮಧ್ಯಪ್ರದೇಶದ ಸಾಗರದಲ್ಲಿ ನಡೆದಿದೆ.
ಹೌದು, ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಐದು ಜನರ ಕೊಲೆ ಪ್ರಕರಣವೊಂದರಲ್ಲಿ ಒಂದೇ ಕುಟುಂಬದ 6 ಸದಸ್ಯರನ್ನು ಬಂಧಿಸಲಾಗಿತ್ತು. ಈ ವೇಳೆ ಕುಟುಂಬದ ಸಾಕುನಾಯಿ ಸುಲ್ತಾನ್ ಅನಾಥವಾಗಿತ್ತು.
ಆದರೆ ತನ್ನ ಮಾಲೀಕನನ್ನು ಬಂಧಿಸಿದ ಛೋಟಾ ಬಜಾರಿಯಾ ಪೊಲೀಸ್ ಠಾಣೆಗೆ ಬಂದ ಸಾಕುನಾಯಿ ಸುಲ್ತಾನ್, ಪೊಲೀಸ್ ಠಾಣೆ ಬಿಟ್ಟು ಕದಲುತ್ತಿಲ್ಲ. ನಾಯಿಯ ಸ್ಥಿತಿ ಕಂಡು ಮರುಗಿದ ಠಾಣಾಧಿಕಾರಿ ಮನೀಶಾ ತಿವಾರಿ ಸುಲ್ತಾನ್’ನ ಪೋಷಣೆ ಮಾಡುತ್ತಿದ್ದಾರೆ.
ಪೊಲೀಸ್ ಠಾಣೆಯನ್ನೇ ತನ್ನ ಹೊಸ ವಾಸ್ತವ್ಯವನ್ನಾಗಿ ಮಾಡಿಕೊಂಡಿರುವ ಸುಲ್ತಾನ್, ಠಾಣೆಯ ಪೊಲೀಸರ ಸ್ನೇಹ ಸಂಪಾದಿಸಿದೆ. ಸುಲ್ತಾನ್ ಊಟ, ಉಪಚಾರವನ್ನು ಮನೀಶಾ ತಿವಾರಿ ಅವರೇ ನೋಡಿಕೊಳ್ಳುತ್ತಿದ್ದು, ಸುಲ್ತಾನ್ ಇದೀಗ ಠಾಣೆಯ ಓರ್ವ ಸದಸ್ಯನಾಗಿದ್ದಾನೆ ಎಂದು ನಗು ಬೀರುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.