ಬಾಬಾ ಬೆಂಬಲಿಗರ ಗೂಂಡಾಗಿರಿಗೆ 32ಕ್ಕೂ ಹೆಚ್ಚು ಬಲಿ: ಮೂರು ರಾಜ್ಯಗಳಲ್ಲಿ ಹೊತ್ತಿಕೊಂಡಿದೆ ಆಕ್ರೋಶದ ‘ಕಿಚ್ಚು’

Published : Aug 26, 2017, 08:53 AM ISTUpdated : Apr 11, 2018, 12:53 PM IST
ಬಾಬಾ ಬೆಂಬಲಿಗರ ಗೂಂಡಾಗಿರಿಗೆ 32ಕ್ಕೂ ಹೆಚ್ಚು ಬಲಿ: ಮೂರು ರಾಜ್ಯಗಳಲ್ಲಿ ಹೊತ್ತಿಕೊಂಡಿದೆ ಆಕ್ರೋಶದ ‘ಕಿಚ್ಚು’

ಸಾರಾಂಶ

ಸ್ವಯಂ ಘೋಷಿತ ದೇವಮಾನವ ರಾಮ್​ ರಹೀಂ ಸಿಂಗ್​ ವಿರುದ್ಧ ತೀರ್ಪು ಪ್ರಕಟವಾಗಿದೆ. ಇದರಿಂದಾಗಿ ಆತನ ಬೆಂಬಲಿಗರಿಂದ ಹರಿಯಾಣ, ಪಂಜಾಬ, ದೆಹಲಿಯಲ್ಲಿ  ಹಿಂಸಾಚಾರ ಭುಗಿಲೆದ್ದಿದೆ. ಅತ್ಯಾಚಾರಿ ಬಾಬಾ ರಹೀಂ ಬೆಂಬಲಿಗರ ಪುಂಡಾಟದಿಂದ ಅಮಾಯಕರ ಸಾವಿನ ಸಂಖ್ಯೆ ಮಾತ್ರ ಏರುತ್ತಲೇ ಇದೆ. ಈ ಕುರಿತು ಕಂಪ್ಲೀಟ್​ ಡಿಟೈಲ್​ ಇಲ್ಲಿದೆ ನೋಡಿ.

ಹರ್ಯಾಣ(ಆ.26): ಕೋರ್ಟ್​ ಬಾಬಾ ರಾಮ್ ರಹಿಮ್ ಸಿಂಗ್ ದೋಷಿ ಎಂದು ಅತ್ತ ತೀರ್ಪು ನೀಡುತ್ತಲೇ ಇತ್ತ ಬಾಬಾ ಬೆಂಬಲಿಗರ ಗೂಡಾಗಿರಿ ಶುರುವಾಗಿದೆ. ಕಂಡ ಕಂಡಲ್ಲಿ ಸಿಕ್ಕ ಸಿಕ್ಕ ವಾಹನಗಳಿಗೆ ಬೆಂಕಿಯಿಟ್ಟಿದ್ದಾರೆ. ಹರಿಯಾಣದ ಎಲ್​'ಐಸಿ ಕಚೇರಿಗೆ ಬೆಂಕಿ  ಇಟ್ಟರೆ ಐಟಿ ಕಚೇರಿ ಮೇಲೆ ದಾಳಿ ಮಾಡಿದ್ದಾರೆ. ಈ ಗೂಂಡಾಗಿರಿಯಿಂದ ಹರಿಯಾಣ, ಪಂಜಾಬ್, ದೆಹಲಿ ಅಕ್ಷರಶಃ ನಲುಗಿ ಹೋಗಿವೆ.

ಹರಿಯಾಣದ ಮಾಲೌಟ್‌ ರೈಲ್ವೆ ನಿಲ್ದಾಣ,ಪೆಟ್ರೋಲ್‌ ಬಂಕ್​ ಗೆ ಬೆಂಕಿ ಹಚ್ಚಿ ರಾಮ್​ ರಹೀಂ ಬೆಂಬಲಿಗರು ಅಟ್ಟಹಾಸ ಮೆರೆದಿದ್ದಾರೆ. ರಾಷ್ಟ್ರೀಯ ಸುದ್ದಿವಾಹಿನಿಯ 2 ಒಬಿ ವ್ಯಾನ್​  ಕೂಡ ಸುಟ್ಟು ಕರಕಲಾಗಿವೆ. ಹರಿಯಾಣ, ದೆಹಲಿ, ಪಂಜಾಬ್, ಉತ್ತರಪ್ರದೇಶದಲ್ಲೂ ಕಲ್ಲು ತೂರಾಟ ನಡೆದಿದೆ. ಇದುವರೆಗೆ 32ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. 500ಕ್ಕೂ ಹೆಚ್ಚು ಮಂದಿ ಆಸ್ಪತ್ರೆ ಸೇರಿದ್ದಾರೆ. ಗಲಭೆ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡ್ತಿದ್ದಾರೆ. ಹೆಚ್ಚುವರಿಯಾಗಿ 25 ಸಿಆರ್​ಪಿಎಫ್ ತುಕಡಿ ನಿಯೋಜಿಸಲಾಗಿದೆ. ಹರಿಯಾಣದ 10 , ದೆಹಲಿಯ 11 ಜಿಲ್ಲೆಗಳಲ್ಲಿ ನಿಷೇಧಾಜ್ಷೆ ಜಾರಿಗೊಳಿಸಲಾಗಿದೆ.

ಇನ್ನೂ ಗಲಭೆಯಿಂದಾಗಿ ಸಂಚರಾ ಸಮಸ್ಯೆ ಕೂಡ ಉಲ್ಬಣವಾಗಿದ್ದು ,ಇಂದು ಬೆಂಗಳೂರಿನಿಂದ  ಯಶ್ವಂತಪುರ-ಚಂಡೀಗಢ ನಡುವಿನ  ಕರ್ನಾಟಕ ಸಂಪರ್ಕ ಕಾಂತಿ ಎಕ್ಸ್​'ಪ್ರೆಸ್​ ಹಾಗೂ ಯಶವಂತಪುರ-ಖಟ್ರಾ ಸುವಿಧಾ ಎಕ್ಸ್​ಪ್ರೆಸ್​ ರೈಲು ಸಂಚಾರ ರದ್ದುಗೊಳಿಸಲಾಗಿದೆ.

ಹಾನಿ ತುಂಬಿಕೊಡಲು ಡೇರಾ ಸಚ್ಚಾ ಸೌಧ ಆಸ್ತಿ ಮುಟ್ಟುಗೋಲು

ಇನ್ನೂ ಬಾಬಾ ಬೆಂಬಲಿಗರ ದಾಂಧಲೆಯಿಂದ ಸಾರ್ವಜನಿಕ ಆಸ್ತಿ ಪಾಸ್ತಿಗೆ ಅಪಾರ ಹಾನಿಯಾಗಿದೆ. ಹೀಗಾಗೇ ಹರ್ಯಾಣ ಹೈಕೋರ್ಟ್‌ ಬಾಬಾಗೆ ಮತ್ತೊಂದು ಶಾಕ್ ನೀಡಿದೆ. ಗಲಭೆಯಿಂದಾದ ನಷ್ಟ ಬರಿಸಲು ಡೇರಾ ಸಚ್ಚಾ ಸೌಧ ಆಸ್ತಿ ಮುಟ್ಟುಗೋಲಿಗೆ ಆದೇಶಿಸಿದೆ. ಈಗಾಗಲೇ 65 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಒಟ್ಟಿನಲ್ಲಿ  ಅತ್ಯಾಚಾರಿ ಬಾಬಾನ  ಬೆಂಬಲಿಗರ ಗೂಂಡಾ ವರ್ತನೆ ಮಿತಿ ಮೀರಿದ್ದು ಈಗಲೂ ಪರಿಸ್ಥಿತಿ ಸಂಪೂರ್ಣವಾಗಿ ತಣ್ಣಗಾಗಿಲ್ಲ.. ಭಯದಲ್ಲೇ ಜನ ಕಾಲಕಳೆಯುವಂತಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಹಾರಾಷ್ಟ್ರ ಸ್ಥಳೀಯ ಚುನಾವಣೆ; ಬಿಜೆಪಿ ಮೈತ್ರಿಕೂಟಕ್ಕೆ ಭರ್ಜರಿ ಮುನ್ನಡೆ, ಮಕಾಡೆ ಮಲಗಿದ MVA
ವೈರಲ್ ಆಗ್ತಿದೆ ಕನ್ನಡದಲ್ಲಿ ಮುದ್ರಣಗೊಂಡಿರುವ 1948ರ ಮುಸ್ಲಿಂ ವಿವಾಹ ಆಮಂತ್ರಣ ಪತ್ರಿಕೆ