ಸ್ಯಾಂಕಿ ಕೆರೆಯಲ್ಲಿ ಒಂದೇ ದಿನ 22 ಸಾವಿರ ಗಣೇಶ ವಿಸರ್ಜನೆ: ಮೊದಲ ದಿನವೇ 350 ಪಿಒಪಿ ಗಣೇಶ ಮೂರ್ತಿ ವಿಸರ್ಜನೆ

Published : Aug 26, 2017, 08:37 AM ISTUpdated : Apr 11, 2018, 01:11 PM IST
ಸ್ಯಾಂಕಿ ಕೆರೆಯಲ್ಲಿ ಒಂದೇ ದಿನ 22 ಸಾವಿರ ಗಣೇಶ ವಿಸರ್ಜನೆ: ಮೊದಲ ದಿನವೇ 350 ಪಿಒಪಿ ಗಣೇಶ ಮೂರ್ತಿ ವಿಸರ್ಜನೆ

ಸಾರಾಂಶ

ವಿಜೃಂಭಣೆ ಗಣೇಶ ಹಬ್ಬ ಆಚರಣೆ ನಂತರ ನಿನ್ನೆ ತಡರಾತ್ರಿ ಸಿಲಿಕಾನ್ ಸಿಟಿಯಲ್ಲಿ ಸಾವಿರಾರು ಗಣೇಶ ಮೂರ್ತಿಗಳ ವಿಸರ್ಜನೆ ನಡೆಯಿತು.

ಬೆಂಗಳೂರು(ಆ.26): ವಿಜೃಂಭಣೆ ಗಣೇಶ ಹಬ್ಬ ಆಚರಣೆ ನಂತರ ನಿನ್ನೆ ತಡರಾತ್ರಿ ಸಿಲಿಕಾನ್ ಸಿಟಿಯಲ್ಲಿ ಸಾವಿರಾರು ಗಣೇಶ ಮೂರ್ತಿಗಳ ವಿಸರ್ಜನೆ ನಡೆಯಿತು.

ತಡರಾತ್ರಿ 12 ಗಂಟೆ ವರೆಗೂ ಗಣೇಶ ವಿಸರ್ಜನೆ ನಡೆಯಿತು. ನಗರದ ಸ್ಯಾಂಕಿ, ಹೆಬ್ಬಾಳ, ಹಲಸೂರು ಸೇರಿದಂತೆ ಬಿಬಿಎಂಪಿ ವ್ಯಾಪ್ತಿಯ 36 ಕೆರೆಗಳಲ್ಲಿ ಗಣೇಶ ವಿಸರ್ಜನೆ ನಡೆಯಿತು. ಗಣೇಶ ವಿಸರ್ಜನೆಗೆ ಬಿಬಿಎಂಪಿ 257 ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ 40 ಕಡೆ ಸಂಚಾರಿ ಟ್ಯಾಂಕರ್ ವ್ಯವಸ್ಥೆ ಮಾಡಿವೆ. ವ್ಯವಸ್ಥಿತವಾಗಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ಪುಷ್ಕರಣಿಯಲ್ಲಿ ಗಣೇಶ ವಿಸರ್ಜನೆಗೆ ಅವಕಾಶ ಕಲ್ಪಿಸಲಾಗಿದೆ.

ಸ್ಯಾಂಕಿ ಕೆರೆಯಲ್ಲಿ ಒಂದೇ ದಿನ 22 ಸಾವಿರ ಗಣೇಶ ವಿಸರ್ಜನೆಯಾಗಿವೆ. ಇನ್ನೂ ಪಿಒಪಿ ಗಣೇಶನ ಪ್ರತಿಷ್ಠಾಪನೆ  ನಿಷೇಧಿಸಲಾಗಿದೆ. ಆದರೂ ನಿನ್ನೆ  350 ಪಿಒಪಿ ಗಣೇಶ ವಿಸರ್ಜನೆಯಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅನ್ಯ ಧರ್ಮಿಯ ಜೊತೆ ಮದುವೆ: ಪುತ್ರಿಗೆ ಅಪ್ಪನ ಆಸ್ತಿಯಲ್ಲಿ ಹಕ್ಕಿಲ್ಲ- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ರಸಗೊಬ್ಬರ ಬಳಕೆ ಕಡಿಮೆ ಮಾಡಿ, ಮಣ್ಣಿನ ಆರೋಗ್ಯ ಕಾಪಾಡಿ: ಸಿಎಂ ಸಿದ್ದರಾಮಯ್ಯ ಸಲಹೆ