2 ನೇ ದಿನಕ್ಕೆ ಕಾಲಿಟ್ಟ ಧರ್ಮ ಸಂಸತ್; ರಾಮ ಮಂದಿರ ನಿರ್ಮಾಣ ನಿರ್ಣಯ

By Suvarna Web DeskFirst Published Nov 25, 2017, 9:06 AM IST
Highlights

ಮೊದಲ ದಿನದ ಧರ್ಮ ಸಂಸದ್'ನ ಮೊದಲ ದಿನ ರಾಮ ಜನ್ಮಭೂಮಿಗೆ ಹಕ್ಕು ಮಂಡಿಸಲಾಗಿದೆ. ಎರಡನೇ ದಿನವೂ ಸಾಧು ಸಂತರು ಧರ್ಮ ಸಂಸದ್ ನಲ್ಲಿ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ರಾಮ ಮಂದಿರದ ವಿಚಾರವೇ ಪ್ರಸ್ತಾಪಕ್ಕೆ ಬರುವ ಸಾಧ್ಯತೆ ಇದೆ.

ಉಡುಪಿ (ನ.25): ಮೊದಲ ದಿನದ ಧರ್ಮ ಸಂಸದ್'ನ ಮೊದಲ ದಿನ ರಾಮ ಜನ್ಮಭೂಮಿಗೆ ಹಕ್ಕು ಮಂಡಿಸಲಾಗಿದೆ. ಎರಡನೇ ದಿನವೂ ಸಾಧು ಸಂತರು ಧರ್ಮ ಸಂಸದ್ ನಲ್ಲಿ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ರಾಮ ಮಂದಿರದ ವಿಚಾರವೇ ಪ್ರಸ್ತಾಪಕ್ಕೆ ಬರುವ ಸಾಧ್ಯತೆ ಇದೆ.

ಉಡುಪಿಯಲ್ಲಿ ನಡೆಯುತ್ತಿರುವ ಧರ್ಮ ಸಂಸದ್​'ನ ಮೊದಲ ದಿನವಾದ ನಿನ್ನೆ  ಅಯೋದ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಬಗ್ಗೆ ನಿರ್ಣಯಕ್ಕೆ ಬರಲಾಗಿದೆ. ಎರಡನೇ ದಿನವಾದ ಇಂದೂ ಕೂಡ ಇದೇ ವಿಚಾರ ಪ್ರಸ್ತಾಪವಾಗುವ ಸಾಧ್ಯತೆ ಇದೆ. ಇದರ ಜೊತೆಗೆ ಅಸ್ಪೃಷ್ಯತೆ,  ಸಾಮಾಜಿಕ ಸಾಮರಸ್ಯ, ಮತಾಂತರ ತಡೆ ಮತ್ತು ಘರ್ ವಾಪಸಿ ಬಗ್ಗೆ ಚರ್ಚೆ ನಡೆಯಲಿದೆ..

ಇನ್ನೂ ರಾಮಮಂದಿರ ನಿರ್ಮಾಣ ವಿಚಾರವಾಗಿ ಶ್ರೀ ರವಿಶಂಕರ್ ಗುರೂಜಿ ಮಧ್ಯಸ್ಥಿಕೆಗೆ ಧರ್ಮ ಸಂಸದ್​ನಲ್ಲಿ ಅಸಮಧಾನ ವ್ಯಕ್ತವಾಗಿದೆ. ರಾಮಜನ್ಮಭೂಮಿ ಆಂದೋಲನದ ಭಾಗವಾಗಿಲ್ಲದ ವ್ಯಕ್ತಿಯೊಬ್ವರು ಮಧ್ಯಸ್ಥಿಕೆ ವಹಿಸೋದು ಎಷ್ಟು ಸರಿ ಅನ್ನೋ ಇಂಗಿತ ವ್ಯಕ್ತವಾಗಿದೆ.  ಕೋರ್ಟ್ ಮೂಲಕ ಇಲ್ಲವೇ ಮಾತುಕತೆಯ ವಿವಾದ ಇತ್ಯರ್ಥ ಮಾಡಿಕೊಳ್ಳಬೇಕು. ಇಲ್ಲಾ ವಿಶೇಷ ವಿಧೇಯಕ ಮಂಡಿಸಿ , 2019 ರ ವೇಳೆಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಲೇ ಬೇಕು.  ಉಡುಪಿಯಿಂದಲೇ ಅಡಿಗಲ್ಲು ಹಾಕಲು ನಿರ್ಧಾರಿಸಲಾಗಿದೆ.

ಧರ್ಮ ಸಂಸದ್'​ನಲ್ಲಿ ತೆಗೆದುಕೊಂಡ ನಿರ್ಣಯ ಜಾರಿಗೆ ಪ್ರಧಾನಿ ಮೋದಿ ಮೇಲೆ ಒತ್ತಡ ಹೇರಲು ನಿರ್ಧರಿಸಲಾಗಿದ್ದು, ನಾಳೆ ನಡೆಯುವ ವಿರಾಟ್ ಹಿಂದೂ ಸಮಾವೇಶದಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಭಾಗಿಯಾಗಲಿದ್ದಾರೆ.  ಅಂದು ಮಹತ್ವದ ಘೋಷಣೆಯಾಗಲಿದೆ.

click me!