
ಬೆಂಗಳೂರು (ನ.25): ಸುವರ್ಣ ನ್ಯೂಸ್ ಸ್ಫೋಟಕ ವರದಿ ಸಚಿವ ವಿನಯ್ ಕುಲ್ಕರ್ಣಿಗೆ ಸಂಕಷ್ಟ ತಂದೊಡ್ಡಿದೆ. ಇನ್ನು ಸಚಿವರು ವಕೀಲರಿಗೆ ಧಮ್ಕಿ ಹಾಕಿದ ಪ್ರಕರಣವನ್ನು ವಕೀಲರ ಸಂಘ ಗಂಭೀರವಾಗಿ ಪರಿಗಣಿಸಿದ್ದು, ಸಚಿವರ ರಾಜೀನಾಮೆ ಆಗ್ರಹಿಸಿ ಇಂದು ಪ್ರತಿಭಟನೆಗೆ ಧುಮುಕಲಿದೆ. ಇತ್ತ ಬಿಜೆಪಿ ಸಹ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ಮುಂದುವರಿಸಿದೆ.
ಜಿಲ್ಲಾ ಪಂಚಾಯಿತಿ ಸದಸ್ಯ ಯೋಗಿಶ್ ಗೌಡ ಕೊಲೆ ಪ್ರಕರಣದಲ್ಲಿ ಸಚಿವ ವಿನಯ್ ಕುಲಕರ್ಣಿ ಕೈವಾಡದ ಬಗ್ಗೆ ಸುವರ್ಣ ನ್ಯೂಸ್ ವರದಿ ಪ್ರಸಾರ ಮಾಡುತ್ತಿದ್ದಂತೆ ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಅಧಿವೇಶನದ ಒಳಗೆ ಹಾಗೂ ಹೊರಗೆ ಕೂಡ ಸಚಿವರ ರಾಜೀನಾಗೆ ಒತ್ತಾಯ ಕೇಳಿಬಂತು. ಇದರ ಬೆನ್ನಲ್ಲೇ ನಿನ್ನೆ ಯೋಗಿಶ್ ಗೌಡ ಕೊಲೆ ಪ್ರಕರಣದಲ್ಲಿ ಕಾನೂನು ನೆರವು ನೀಡಿದ ವಕೀಲ ಆನಂದ್'ಗೆ ಸಚಿವರು ಧಮ್ಕಿ ಹಾಕಿದ್ದ ಆಡಿಯೋ ಸುವರ್ಣ ನ್ಯೂಸ್ನಲ್ಲಿ ಬ್ರೇಕ್ ಆಯ್ತು. ಇಷ್ಟಾಗುತ್ತಲೇ ಧಾರವಾಡ ವಕೀಲರ ಸಂಘ ಸಚಿವರ ವಿರುದ್ಧ ಸಿಡಿದೆದ್ದಿದೆ. ವಕೀಲ ಆನಂದ್'ಗೆ ಜೀವ ಬೆದರಿಕೆ ಇದೆ. ರಕ್ಷಣೆ ನೀಡಿ ಎಂದು ನಿನ್ನೆ ಧಾರವಾಡ ಜಿಲ್ಲಾಧಿಕಾರಿ ಹಾಗೂ ಪೊಲೀಸ ವರಿಷ್ಠಾಧಿಕಾರಿಗೆ ಮನವಿ ಮಾಡಿದ್ದಾರೆ.
ವಕೀಲ ಆನಂದ್ಗೆ ಸಚಿವರು ಬೆದರಿಕೆ ನೀಡಿದ ಬೆನ್ನಲ್ಲೇ ಧಾರವಾಡ ವಕೀಲರೆಲ್ಲಾ ಆನಂದ್ ಬೆನ್ನಿಗೆ ನಿಂತಿದ್ದಾರೆ. ಇವತ್ತು ಧಾರವಾಡ ಹೈಕೋರ್ಟ್ ವಕೀಲರು, ಹುಬ್ಬಳ್ಳಿ, ನವಲಗುಂದ, ನರಗುಂದ ಸೇರಿದಂತೆ ಜಿಲ್ಲೆಯ ಎಲ್ಲಾ ವಕೀಲರು ಸಭೆ ನಡೆಸಲಿದ್ದಾರೆ. ಸಚಿವ ವಿನಯ್ ಕುಲಕರ್ಣಿ ರಾಜೀನಾಮೆ ಆಗ್ರಹಿಸುವ ಸಾಧ್ಯತೆಯಿದೆ. ಹೀಗಾಗಿ ಇಂದು ವಕೀಲರು ಕೋರ್ಟ್ ಕಲಾಪ ಬಹಿಷ್ಕಾರಿಸುವ ಸಾದ್ಯತೆ ಇದೆ.
ಈ ಮಧ್ಯೆ ಬಿಜೆಪಿ ಕೂಡ ಸಚಿವ ವಿನಯ್ ಕುಲ್ಕರ್ಣಿ ರಾಜೀನಾಮೆಗೆ ಪಟ್ಟು ಹಿಡಿದಿದೆ. ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ವೈ ಸುದ್ದಿಗೋಷ್ಠಿ ಮೂಲಕ ಗಣಿ ಸಚಿವರ ರಾಜೀನಾಮೆಗೆ ಆಗ್ರಹಿಸುವ ಸಾಧ್ಯತೆಯಿದೆ. ಒಟ್ಟಿನಲ್ಲಿ, ಸುವರ್ಣ ನ್ಯೂಸ್ ಮೆಗಾ ಸುದ್ದಿ ಸ್ಫೋಟ ಸಚಿವರ ಬುಡವನ್ನೇ ಅಲ್ಲಾಡಿಸುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.