ಕವರ್'ಸ್ಟೋರಿ ತಂಡದ ರಹಸ್ಯ ಕಾರ್ಯಾಚರಣೆಯಲ್ಲಿ ಮದುವೆ ಮಾಫಿಯಾದ ಬಣ್ಣ ಬಯಲು

By Suvarna Web DeskFirst Published Nov 25, 2017, 8:28 AM IST
Highlights

ಈ ಬಾರಿ ನಿಮ್ಮ ನೆಚ್ಚಿನ ಸುವರ್ಣ ನ್ಯೂಸ್​'ನ  ಕವರ್​ಸ್ಟೋರಿ ತಂಡ ಮತ್ತೊಂದು ಥ್ರಿಲ್ಲಿಂಗ್​ ಕಾರ್ಯಾಚರಣೆ ಮಾಡಿದೆ. ಈ ರಹಸ್ಯ ಕಾರ್ಯಾಚರಣೆಯಲ್ಲಿ ಮದುವೆ ಮಾಫಿಯಾದ ಬಣ್ಣ ಬಯಲು ಮಾಡಿದ್ದಲ್ಲದೆ ಅದರ ಹೆಡೆಮುರಿ ಕಟ್ಟಿದೆ.

ಬೆಂಗಳೂರು (ನ.25): ಈ ಬಾರಿ ನಿಮ್ಮ ನೆಚ್ಚಿನ ಸುವರ್ಣ ನ್ಯೂಸ್​'ನ  ಕವರ್​ಸ್ಟೋರಿ ತಂಡ ಮತ್ತೊಂದು ಥ್ರಿಲ್ಲಿಂಗ್​ ಕಾರ್ಯಾಚರಣೆ ಮಾಡಿದೆ. ಈ ರಹಸ್ಯ ಕಾರ್ಯಾಚರಣೆಯಲ್ಲಿ ಮದುವೆ ಮಾಫಿಯಾದ ಬಣ್ಣ ಬಯಲು ಮಾಡಿದ್ದಲ್ಲದೆ ಅದರ ಹೆಡೆಮುರಿ ಕಟ್ಟಿದೆ.

ಮದುವೆ ಆಸೆ ತೋರಿಸಿ ಅಮಾಯಕರ  ಬದುಕನ್ನ ಬರ್ಬಾದ್​ ಮಾಡುತ್ತಿದ್ದ ಖದೀಮರು  ಕವರ್​ಸ್ಡೋರಿ ತಂಡ ನಡೆಸಿದ ರಹಸ್ಯ ಕಾರ್ಯಾಚರಣೆಯ ಬಲೆಗೆ ಬಿದ್ದು ಈಗ ಹಾವೇರಿಯ ಹಾನಗಲ್​​ ಪೊಲೀಸರ ಅತಿಥಿಗಳಾಗಿದ್ದಾರೆ.

ಈ ಗ್ಯಾಂಗ್ ಪಕ್ಕಾ ಫಿಲ್ಮ್​​ ಸ್ಟೈಲಲ್ಲಿ ಕಾರ್ಯನಿರ್ವಹಿಸುತ್ತೆ. ಈ ಖದೀಮರು ಮದುವೆ ಬ್ಯುರೋ, ಮದುವೆ ಏಜೆಂಟರ ವೇಷ ಧರಿಸಿರ್ತಾರೆ. ಇವರ ಗ್ಯಾಂಗಲ್ಲಿ ತರಬೇತಿ ಪಡೆದ ಐವತ್ತು ಅರುವತ್ತು ಹೆಣ್ಣು ಮಕ್ಕಳು ಇರ್ತಾರೆ. ಮದುವೆಗೆ ಹೆಣ್ಣು ಬಯಸಿ ಬರುವವರಿಗೆ ಇದೇ ಹೆಣ್ಣು ಮಕ್ಕಳನ್ನ ತೋರಿಸಿ ಲಕ್ಷಾಂತರ ರೂಪಾಯಿ ಪಡೆದು ಹಾವೇರಿಯ ಅಕ್ಕಿ ಆಲೂರಿನ ವಿಶ್ವನಾಥ ಸಾಲಿಮಠ್​ ಸ್ವಾಮಿ ಅನ್ನೋ ಮಫಿಯಾ ಕಿಂಗ್​ಪಿನ್​​ ಮನೆಯಲ್ಲೇ ಮದುವೆ ಮಾಡಿಸುತ್ತಾರೆ.  ಮದುವೆಯಾದ ಬಳಿಕ ಒಂದೆರೆಡು ದಿನ ಹುಡುಗನ ಮನೆಯಲ್ಲಿ ಹೆಣ್ಣುಮಕ್ಕಳು ಇರ್ತಾರೆ. ಆ ಬಳಿಕ ಹುಡುಗನ ಮನೆಯ ಚಿನ್ನಾಭರಣಗಳನ್ನೆಲ್ಲಾ ದೋಚಿ ವಾಪಾಸ್​ ಬರ್ತಾರೆ,  ಜೊತೆಗೆ ಡೈವೋರ್ಸ್​ಗೆ ಬೇಡಿಕೆ ಇಡುತ್ತಾರೆ. ವರದಕ್ಷಿಣೆ ಕಿರುಕುಳ, ಲೈಂಗಿಕ ದೌರ್ಜನ್ಯ ಕೇಸ್​ ದಾಖಲಿಸುತ್ತೇವೆ ಅಂತ ಬ್ಲಾಕ್'​​ಮೇಲ್​ ಮಾಡಿ ಮತ್ತೆ ಲಕ್ಷಾಂತರ ರೂಪಾಯಿ ಬಾಚುತ್ತಾರೆ. ತಮಾಷೆ ಅಂದರೆ  ಈ ಗ್ಯಾಂಗ್​ನಲ್ಲಿ ಕಾರ್ಯನಿರ್ವಹಿಸೋ ಹೆಣ್ಣು ಮಕ್ಕಳಿಗೆ ಆಗಲೇ ಮದುವೆ ಆಗಿರುತ್ತೆ, ಮಕ್ಕಳಿರುತ್ತೆ, ಅಷ್ಟೇ ಅಲ್ಲ ಕೆಲವರು ವೇಶ್ಯಾವಾಟಿಕೆಯಲ್ಲೂ ತೊಡಗಿರುತ್ತಾರೆ. ಇಂಥಾ ಭಯಾನಕ ಗ್ಯಾಂಗನ್ನ  ಕವರ್​ಸ್ಟೋರಿ ತಂಡ ಹಾವೇರಿ ಎಸ್​.ಪಿ ಪರಮೇಶ್​ ಟಿ ಅವರ ಸಹಾಯದಿಂದ ಸಂತೋಷ್​ ಪವಾರ್​ ಅವರ ನೇತೃತ್ವದ ತಂಡದ ಜೊತೆ ಸೇರಿ ರೈಡ್​ ಮಾಡಿತು. ಮಾಫಿಯಾ ಮಂದಿಯ ಹೆಡೆ ಮುರಿ ಕಟ್ಟಿತು.

ವರದಿ: ವಿಜಯಲಕ್ಷ್ಮೀ ಶಿಬರೂರು

click me!