ರಾಜೀವ್ ಗಾಂಧಿ ಹಂತಕಿಗೆ ಒಂದು ತಿಂಗಳು ಪರೋಲ್

By Web DeskFirst Published Jul 25, 2019, 2:01 PM IST
Highlights

ರಾಜೀವ್ ಗಾಂಧಿ ಹಂತಕಿಗೆ ಒಂದು ತಿಂಗಳು ಪರೋಲ್| ಮಗಳ ಮದುವೆ ತಯಾರಿಗೆ 6 ತಿಂಗಳು ಪರೋಲ್ ಕೇಳಿದ್ದ ನಳಿನಿ| ದೋಷಿ ಮನವಿಗೆ ಕೇವಲ ಒಂದು ತಿಂಗಳ ಷರತ್ತು ಬದ್ಧ  ಪರೋಲ್‌ ನೀಡಿದ ಮದ್ರಾಸ್ ಹೈಕೋರ್ಟ್

ಮದ್ರಾಸ್[ಜು.25]: ಪುತ್ರಿ ಮದುವೆ ಸಂಬಂಧ ಅಗತ್ಯ ಸಿದ್ದತೆ ಮಾಡಿಕೊಳ್ಳಲು ಮಾಜಿ ಪಿಎಂ ರಾಜೀವ್ ಗಾಂಧಿ ಹತ್ಯೆ ಅಪರಾಧಿ ನಳಿನಿ ಶ್ರೀಹರನ್‌ ಗೆ ಮದ್ರಾಸ್‌ ಹೈಕೋರ್ಟ್‌ 30 ದಿನಗಳ ಪರೋಲ್ ನೀಡಿದೆ. 

ತನ್ನ ಪುತ್ರಿಯ ವಿವಾಹ ಸಂಬಂಧ ತಯಾರಿಗಾಗಿ 6 ತಿಂಗಳು ಪರೋಲ್‌ ನೀಡುವಂತೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅಪರಾಧಿ ನಳಿನಿ ಶ್ರೀಹರನ್‌ ಮದ್ರಾಸ್‌ ಹೈಕೋರ್ಟ್‌ಗೆ  ಅರ್ಜಿ ಸಲ್ಲಿಸಿದ್ದರು. ಜುಲೈ 5 ರಂದು ಈ ಅರ್ಜಿ ಕೋರ್ಟ್‌ ಪುಸ್ಕರಿಸಿದೆಯಾದರೂ ಕೇವಲ ಒಂದು ತಿಂಗಳ ಷರತ್ತು ಬದ್ಧ  ಪರೋಲ್‌ ಗೆ ಅನುಮತಿ ನೀಡಿದೆ. 

ಜೈಲಿನಿಂದ ಹೊರಗಿರುವ ಸಂದರ್ಭದಲ್ಲಿ ಸುದ್ದಿ ಮಾಧ್ಯಮಗಳಿಗೆ ಸಂದರ್ಶನ, ಹೇಳಿಕೆ ನೀಡಬಾರದು ಎಂದು ಮದ್ರಾಸ್ ಹೈಕೋರ್ಟ್ ಷರತ್ತು ವಿಧಿಸಿದೆ.  ಈ ಅರ್ಜಿಯನ್ನು ತಿರಸ್ಕರಿಸಿದ ಕೋರ್ಟ್‌, 30 ದಿನಗಳ ಕಾಲ ಷರತ್ತು ಬದ್ಧ ಪರೋಲ್‌ಗೆ ಅನುಮತಿ ನೀಡಿದೆ.

Nalini Sriharan, convict in Rajiv Gandhi assassination case, released on a month- long ordinary parole from Vellore central prison today, to make arrangements for her daughter's wedding. Madras High Court on 5th July granted her the parole. pic.twitter.com/Gi4p5usSu4

— ANI (@ANI)

ರಾಜೀವ್‌ ಗಾಂಧಿ ಹತ್ಯೆ ಪ್ರಕರಣದಲ್ಲಿಜೀವಾವಧಿ ಶಿಕ್ಷೆಗೊಳಗಾಗಿದ್ದ ನಳಿನಿ ಶ್ರೀಹರನ್‌ ಕಳೆದ 28 ವರ್ಷಗಳಿಂದ ವೆಲ್ಲೂರು ಸೆಂಟ್ರಲ್ ಜೈಲಿನಲ್ಲಿದ್ದರು. ಈ ಹಿಂದೆ 2016ರಲ್ಲಿ ನಳಿನಿಗೆ ಅವರ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು 12 ಗಂಟೆಗಳ ಪರೋಲ್‌ ನೀಡಲಾಗಿತ್ತು.

click me!