ಬಿಜೆಪಿಗೆ ತಪ್ಪುತ್ತಾ ಸರ್ಕಾರ ರಚಿಸೋ ಅವಕಾಶ?: ರಾಷ್ಟ್ರಪತಿ ಆಳ್ವಿಕೆಯತ್ತ ಕರ್ನಾಟಕ?

By Web DeskFirst Published Jul 25, 2019, 1:43 PM IST
Highlights

ರಾಷ್ಟ್ರಪತಿ ಆಳ್ವಿಕೆಯತ್ತ ಸಾಗುತ್ತಿದೆಯಾ ಕರ್ನಾಟಕ..?| ಜುಲೈ 31ರೊಳಗೆ ಧನ ವಿನಿಯೋಗ ವಿಧೇಯಕ ಪಾಸಾಗಬೇಕು| ವಿಧೇಯಕ ಪಾಸ್ ಆಗದಿದ್ದರೆ ಸಂಬಳಕ್ಕೂ ಹಣ ಇರಲ್ಲ..!| ವಿಧೇಯಕದ ಹೆಸರಲ್ಲಿ ರಾಜ್ಯದಲ್ಲಿ ಬರುತ್ತಾ ರಾಷ್ಟ್ರಪತಿ ಆಳ್ವಿಕೆ..?

ಬೆಂಗಳೂರು[ಜು.25]: ಅತೃಪ್ತ ಶಾಸಕರು ಮುಂಬೈಗೆ ಹಾರಿದ ಬೆನ್ನಲ್ಲೇ ಇತ್ತ ದೋಸ್ತಿ ಸರ್ಕಾರ ಪತನಗೊಂಡಿದೆ. ವಿಶ್ವಾಸಮತದಲ್ಲಿ ಸೋತ ಎಚ್. ಡಿ ಕುಮಾರಸ್ವಾಮಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇವೆಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ರಾಜ್ಯ ಬಿಜೆಪಿ ನಾಯಕರು ಸರ್ಕಾರ ರಚಿಸಲು ಎಲ್ಲಾ ತಯಾರಿ ನಡೆಸುತ್ತಿದ್ದಾರೆ. ಆದರೀಗ ಬಿಜೆಪಿ ಸರ್ಕಾರ ರಚಿಸುತ್ತಾ ಎಂಬುವುದು ಅನುಮಾನ ಹುಟ್ಟಿಸಿದೆ. ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಲಕ್ಷಣಗಳು ದಟ್ಟವಾಗಿವೆ. ಕಾರಣವೇನು?? ಇಲ್ಲಿದೆ ವಿವರ

"

ಅತೃಪ್ತ ಶಾಸಕರೇನೋ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ ಸ್ಪೀಕರ್ ಇನ್ನೂ ಅವರ ರಾಜೀನಾಮೆ ಅಂಗೀಕರಿಸುತ್ತಾರೋ ಅಥವಾ ಅನರ್ಹಗೊಳಿಸುತ್ತಾರೋ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಹೀಗಾಗಿ ಬಿಜೆಪಿ ಸರ್ಕಾರ ರಚಿಸಲು ಮೀನಾ-ಮೇಷವೆಣಿಸಲು ಆರಂಭಿಸಿದೆ. ಏನೇ ಆದರೂ ಮುಂದೆ ಸಮಸ್ಯೆಯಾಗಬಾರದೆಂದು ಬಿಜೆಪಿ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. 

ರಾಜ್ಯದಲ್ಲಿ ಸರಕಾರವೇ ಇಲ್ಲ: ನೌಕರರಿಗೆ ವೇತನವೂ ಸಿಗೋಲ್ಲ!

ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ?

ಮತ್ತೊಂದೆಡೆ ಈ ಮೊದಲೇ ಧನ ವಿನಿಯೋಗ ಮಸೂದೆ ರಾಜ್ಯ ವಿಧಾನಸಭೆಯಲ್ಲಿ ಅಂಗೀಕಾರವಾಗಬೇಕಿತ್ತು. ಸದ್ಯ ಯಾವುದೇ ಸರ್ಕಾರ ಅಸ್ತಿತ್ವದಲ್ಲಿಲ್ಲ. ಒಂದು ವೇಳೆ  ಜುಲೈ 31ರೊಳಗೆ ಧನ ವಿನಿಯೋಗ ವಿಧೇಯಕ ಮಂಡನೆಯಾಗದಿದ್ದರೆ, ಆಗಸ್ಟ್ ನಿಂದ ಸರ್ಕಾರದ ಬಳಿ ಖರ್ಚಿಗೆ ಹಣವಿರುವುದಿಲ್ಲ. ಅಧಿಕಾರಿಗಳಿಗೆ ವೇತನ ನೀಡಲೂ ಸಾಧ್ಯವಿಲ್ಲ. ಸದ್ಯ ಮಸೂದೆ ಅಂಗೀಕಾರ ಆಗಬೇಕಾದರೆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕಾಗುತ್ತದೆ. 

ಹೌದು ರಾಜ್ಯಪಾಲರು ಈ ವಿಧೇಯಕವನ್ನು ಕೇಂದ್ರಕ್ಕೆ ಕಳುಹಿಸಿಕೊಡಬೇಕಾಗುತ್ತದೆ. ಆದರೆ ರಾಜ್ಯದಲ್ಲಿ ವಿಧಾನಸಭೆ ಅಮಾನತ್ತಿನಲ್ಲಿದ್ದಾಗ ಮಾತ್ರ ರಾಜ್ಯಪಾಲರು ಇದನ್ನು ಕೇಂದ್ರಕ್ಕೆ ಕಳುಹಿಸಬಹುದು. ಈ ಕಾರಣದಿಂದ ಒಂದಷ್ಟು ದಿನ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಸಾಧ್ಯತೆಗಳಿವೆ. 

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಕಳೆದ ಮೂರು ವಾರಗಳಿಂದ ಏನೇನಾಯ್ತು?

ಕೇವಲ ಆರು ದಿನಗಳು ಮಾತ್ರ ಬಾಕಿ

ಇನ್ನು ವಿಧೇಯಕ ಮಂಡಿಸಲು ಇನ್ನು ಕೇವಲ ಆರೇ ದಿನಗಳು ಉಳಿದಿವೆ. ಲೋಕಸಭೆ ಅಧಿವೇಶನ ನಾಳೆ 26ಕ್ಕೆ ಮುಗಿಯಬೇಕಿತ್ತು, ಕಾರಣಾಂತರಗಳಿಂದ ಇದನ್ನು ಇನ್ನೂ ಎರಡು ಮೂರು ದಿನ ವಿಸ್ತರಿಸುವ ಸಾಧ್ಯತೆಗಳಿವೆ. ಹೀಗಾಗಿ ಈ ಎಲ್ಲಾ ಕಾರಣಗಳನ್ನಿಟ್ಟುಕೊಂಡು ರಾಜ್ಯಪಾಲರು ರಾಷ್ಟಪತಿ ಆಳ್ವಿಕೆಗೆ ಶಿಫಾರಸ್ಸು ಮಾಡುವ ಎಲ್ಲಾ ಸಾಧ್ಯತೆಗಳಿವೆ.

click me!