ಸದ್ಯಕ್ಕಿಲ್ಲ ರಜನಿ ರಾಜಕೀಯ ಪ್ರವೇಶ?

Published : Sep 15, 2017, 06:32 PM ISTUpdated : Apr 11, 2018, 12:42 PM IST
ಸದ್ಯಕ್ಕಿಲ್ಲ ರಜನಿ ರಾಜಕೀಯ ಪ್ರವೇಶ?

ಸಾರಾಂಶ

ಹೆಸರಾಂತ ನಟ ಕಮಲ್  ಹಾಸನ್ ಅವರು ಹೊಸ ರಾಜಕೀಯ ಪಕ್ಷ ಸ್ಥಾಪನೆ ಕುರಿತು ಇಂಗಿತ ವ್ಯಕ್ತಪಡಿಸಿದ ಬೆನ್ನಲ್ಲೇ, ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನೀಕಾಂತ್ ಅವರ ರಾಜಕೀಯ ಪ್ರವೇಶ ವಿಳಂಬವಾಗಬಹುದು ಎನ್ನಲಾಗುತ್ತಿದೆ.

ಚೆನ್ನೈ: ಹೆಸರಾಂತ ನಟ ಕಮಲ್  ಹಾಸನ್ ಅವರು ಹೊಸ ರಾಜಕೀಯ ಪಕ್ಷ ಸ್ಥಾಪನೆ ಕುರಿತು ಇಂಗಿತ ವ್ಯಕ್ತಪಡಿಸಿದ ಬೆನ್ನಲ್ಲೇ, ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನೀಕಾಂತ್ ಅವರ ರಾಜಕೀಯ ಪ್ರವೇಶ ವಿಳಂಬವಾಗಬಹುದು ಎನ್ನಲಾಗುತ್ತಿದೆ.

ಕಡೇ ಪಕ್ಷ 2018ರವರೆಗೂ ಅವರು ರಾಜಕೀಯ ಪ್ರವೇಶಿಸುವ ಸಾಧ್ಯತೆ ಇಲ್ಲ ಎಂದು ಹೇಳಲಾಗಿದೆ. ರಜನೀಕಾಂತ್ ಅವರ ನಟನೆಯ ಎರಡು ಸಿನಿಮಾಗಳು ತೆರೆ ಕಾಣಬೇಕಿದೆ. ಒಂದು ವೇಳೆ ಅವರು ಈಗಲೇ ರಾಜಕೀಯ ಪ್ರವೇಶ ಕುರಿತು ಘೋಷಣೆ ಮಾಡಿದರೆ, ಆ ಸಿನಿಮಾಗಳ ಮೇಲೆ ಪರಿಣಾಮವಾಗುವ ಸಾಧ್ಯತೆ ಇರುತ್ತದೆ. ಜೊತೆಗೆ ಸೂಕ್ತ ಕಾರಣಗಳನ್ನು ಮುಂದಿಟ್ಟುಕೊಂಡು ರಾಜಕೀಯಕ್ಕೆ ಇಳಿಯಲು ಚಿಂತಿಸಿದ್ದಾರೆ.

ಹೀಗಾಗಿ 2018ರವರೆಗೂ ಅವರು ರಾಜಕೀಯ ಪ್ರವೇಶ ಯೋಜನೆಯನ್ನು ಮುಂದೂಡಿದ್ದಾರೆ ಎಂದು ಸಿನಿಮಾರಂಗದಲ್ಲಿರುವ ಅವರ ಆಪ್ತ ಸ್ನೇಹಿತರು ತಿಳಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ಈ ನಡುವೆ, ರಾಜಕೀಯಕ್ಕೆ ಏಕೆ ಬರುತ್ತಿದ್ದೀರಿ ಎಂದು ಕೇಳಿದರೆ ತಮ್ಮ ಮೇಲೆ ಒತ್ತಡ ಇದೆ ಎಂದು ರಜನೀ ಹೇಳುತ್ತಿದ್ದಾರೆ. ಆದರೆ ಆ ಒತ್ತಡ ಕುಟುಂಬ ಅಥವಾ ಅಭಿಮಾನಿಗಳಿಂದ ಇಲ್ಲ. ರಾಷ್ಟ್ರ ಮಟ್ಟದ ರಾಜಕೀಯ ಪಕ್ಷವೊಂದರಿಂದ ಇದೆ ಎಂದು ರಜನೀ ಅವರನ್ನು ಭೇಟಿ ಮಾಡಿದ ಅಣ್ಣಾಡಿಎಂಕೆಯ ನಾಯಕರೊಬ್ಬರು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಡವರ ಬೆನ್ನಿಗೆ ಇಂಧನ ಬಾಂಬ್‌ ಕಟ್ಟಿದ ಪಾಕಿಸ್ತಾನ, ಪೆಟ್ರೋಲ್‌ ಪ್ರತಿ ಲೀಟರ್‌ಗೆ 55 ರೂಪಾಯಿ ಏರಿಕೆ!
Karnataka Budget 2026: ಅಲ್ಪಸಂಖ್ಯಾತರಿಗೆ ಬಂಪರ್ ಗಿಫ್ಟ್, ಬಡಮಕ್ಕಳಿಗೆ ಲ್ಯಾಪ್‌ಟಾಪ್, ಶಿಕ್ಷಣ, ಉದ್ಯೋಗ, ಮಹಿಳೆಯರಿಗೆ ಹಲವು ಯೋಜನೆಗಳು!