
ಅಹಮದಾಬಾದ್: ‘ವಿಶ್ವದ ಎರಡನೇ ಅತಿದೊಡ್ಡ ಜಲಾಶಯ’ ಎಂಬ ಹಿರಿಮೆಗೆ ಪಾತ್ರವಾಗಿರುವ ಸರ್ದಾರ್ ಸರೋವರ ಅಣೆಕಟ್ಟೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜನ್ಮದಿನವಾದ ಸೆ.17ರಂದು ಲೋಕಾರ್ಪಣೆಗೊಳಿಸಲಿದ್ದಾರೆ.
ಕಾಂಕ್ರಿಟ್ ಬಳಕೆಯಲ್ಲಿ ಸರ್ದಾರ್ ಸರೋವರ ಜಲಾಶಯ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ. ಆದರೆ ನೀರು ಸಂಗ್ರಹದಲ್ಲಿ ಅಲ್ಲ.
ಅಮೆರಿಕದ ಗ್ರಾಂಡ್ ಕೌಲಿ ಡ್ಯಾಂ ನಂತರ ಈ ಅಣೆಕಟ್ಟೆಗೇ ಹೆಚ್ಚು ಕಾಂಕ್ರಿಟ್ ಬಳಕೆ ಮಾಡಲಾಗಿದೆ. 163 ಮೀಟರ್ ಎತ್ತರವನ್ನು ಈ ಜಲಾಶಯ ಹೊಂದಿದ್ದು, ತನ್ಮೂಲಕ ದೇಶದ ಮೂರನೇ ಅತಿ ಎತ್ತರದ ಜಲಾಶಯ ಎಂಬ ದಾಖಲೆಗೆ ಭಾಜನವಾಗಿದೆ.
ಹಿಮಾಚಲಪ್ರದೇಶದ ಭಾಕ್ರಾ (226 ಮೀ.) ಪ್ರಥಮ ಹಾಗೂ ಉತ್ತರಪ್ರದೇಶದ ಲಕ್ವಾರ್ (192 ಮೀ.) 2ನೇ ಸ್ಥಾನದಲ್ಲಿವೆ. ಈ ಜಲಾಶಯದಲ್ಲಿ 4.73 ದಶಲಕ್ಷ ಕ್ಯುಬಿಕ್ ಮೀಟರ್‌ನಷ್ಟು ನೀರು ಸಂಗ್ರಹಿಸಬಹುದಾಗಿದೆ. 30 ಗೇಟುಗಳನ್ನು ತೆರೆಯುವ ಮೂಲಕ ಜಲಾಶಯವನ್ನು ಮೋದಿ ಅವರು ಲೋಕಾರ್ಪಣೆ ಮಾಡಲಿದ್ದಾರೆ. ನರ್ಮದಾ ಜಿಲ್ಲೆಯ ಕೆವಾಡಿಯಾದಲ್ಲಿ 65 ವರ್ಷಗಳ ಹಿಂದೆ ಡ್ಯಾಂಗೆ ಅಂದಿನ ಪ್ರಧಾನಿ ನೆಹರು ಶಂಕುಸ್ಥಾಪನೆ ನೆರವೇರಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.