ರಾಹುಲ್ ಟ್ವಿಟ್ಟರ್ ಖಾತೆಯಲ್ಲಿ ಬದಲಾವಣೆ: ಏನಿತ್ತು ಏನಾಯ್ತು ಗೊತ್ತಾ?

Published : Jul 03, 2019, 08:40 PM IST
ರಾಹುಲ್ ಟ್ವಿಟ್ಟರ್ ಖಾತೆಯಲ್ಲಿ ಬದಲಾವಣೆ: ಏನಿತ್ತು ಏನಾಯ್ತು ಗೊತ್ತಾ?

ಸಾರಾಂಶ

ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ರಾಜೀನಾಮೆ ಅಂಗೀಕರಿಸಿದ ಕಾಂಗ್ರೆಸ್| ನೂತನ ಸಾರಥಿಯ ಹುಡುಕಾಟದಲ್ಲಿರುವ ಕೈ ಪಡೆ| ಎಐಸಿಸಿ ಹಂಗಾಮಿ ಅಧ್ಯಕ್ಷರಾಗಿ ಮೋತಿಲಾಲ್ ವೋರಾ ಅಯ್ಕೆ| ರಾಹುಲ್ ಟ್ವಿಟ್ಟರ್ ಖಾತೆಯಲ್ಲಿ ಬಯೋಡೆಟಾ ಬದಲು| ಎಐಸಿಸಿ ಅಧ್ಯಕ್ಷ ಬದಲು INC ಸದಸ್ಯ ಎಂದು ಬದಲಾಯಿಸಿಕೊಂಡ ರಾಹುಲ್|

ನವದೆಹಲಿ(ಜು.03): ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ನೀಡಿರುವ ರಾಜೀನಾಮೆಯನ್ನು, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಕೊನೆಗೂ ಅಂಗೀಕರಿಸಿದೆ. ಈ ಹಿನ್ನೆಲೆಯಲ್ಲಿ ರಾಹುಲ್ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಕೊಂಚ ಬದಲಾವಣೆ ಮಾಡಿಕೊಂಡಿದ್ದಾರೆ.

ರಾಹುಲ್ ಟ್ವಿಟ್ಟರ್ ಖಾತೆಯಲ್ಲಿ ಈ ಹಿಂದೆ ಎಐಸಿಸಿ ಅಧ್ಯಕ್ಷ ಎಂದು ಇತ್ತು. ಇದೀಗ ಕೇವಲ INC ಸದಸ್ಯ ಎಂದು ನಮೂದಿಸಲಾಗಿದೆ. ಟ್ವಿಟ್ಟರ್’ನಲ್ಲಿ ಬಯೋಡೆಟಾ ಬದಲಿಸಿಕೊಂಡಿರುವ ರಾಹುಲ್, ಲೋಕಸಭಾ ಸದಸ್ಯ ಎಂತಲೂ ನಮೂದಿಸಿಕೊಂಡಿದ್ದಾರೆ.

ಇಂದು ಬೆಳಗ್ಗೆಯಷ್ಟೇ ನಾಲ್ಕು ಪುಟಗಳ ಭಾವನಾತ್ಮಕ ಪತ್ರ ಬರೆದಿದ್ದ ರಾಹುಲ್ ಗಾಂಧಿ, ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ತಾವು ರಾಜೀನಾಮೆ ನೀಡುವುದು ಖಚಿತ ಎಂದು ತಿಳಿಸಿದ್ದರು. ಅದರಂತೆ ರಾಹುಲ್ ರಾಜೀನಾಮೆಯನ್ನು ಅಂಗೀರಿಸಿರುವ ಕಾಂಗ್ರೆಸ್, ಮೋತಿಲಾಲ್ ವೋರಾ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Karnataka Budget: ಶಿಕ್ಷಣಕ್ಕೆ ಸಿಂಹಪಾಲು, ಮಹಿಳಾ ಕಲ್ಯಾಣಕ್ಕೆ ಭರ್ಜರಿ ಕೊಡುಗೆ; ಯಾವ ಇಲಾಖೆಗೆ ಎಷ್ಟು?
Congress Dinner Politics: ಕೈ ನಾಯಕರಿಂದ ಡಿನ್ನರ್ ಪಾಲಿಟಿಕ್ಸ್: ಡಿಕೆಶಿ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಭರ್ಜರಿ ಔತಣಕೂಟ?