ದಾವೂದ್ ಪಾಕ್’ನಲ್ಲಿದ್ದಾನೆ: ಬ್ರಿಟನ್ ಕೋರ್ಟ್’ಗೆ ಅಮೆರಿಕ ಸ್ಪಷ್ಟನೆ!

Published : Jul 03, 2019, 06:33 PM IST
ದಾವೂದ್ ಪಾಕ್’ನಲ್ಲಿದ್ದಾನೆ: ಬ್ರಿಟನ್ ಕೋರ್ಟ್’ಗೆ ಅಮೆರಿಕ ಸ್ಪಷ್ಟನೆ!

ಸಾರಾಂಶ

ದಾವೂದ್ ಇಬ್ರಾಹಿಂ ಕುರಿತ ಭಾರತದ ವಾದಕ್ಕೆ ಜಾಗತಿಕ ಮನ್ನಣೆ| ಭಾರತದ ಮೋಸ್ಟ್ ವಾಟೆಂಡ್ ಉಗ್ರ ಪಾಕಿಸ್ತಾನದಲ್ಲಿದ್ದಾನೆ ಎಂದ ಅಮೆರಿಕ| ಲಂಡನ್ ವೆಸ್ಟ್ ಮಿನಿಸ್ಟರ್ ನ್ಯಾಯಾಲಯಕ್ಕೆ ಅಮೆರಿಕ ಸ್ಪಷ್ಟನೆ| ‘ಕರಾಚಿಯಿಂದ ಅಂತಾರಾಷ್ಟ್ರೀಯ ಅಪರಾಧ ಚಟುವಟಿಕೆ ಮುಂದುವರೆಸಿರುವ ದಾವೂದ್’| ಜಬೀರ್‌ ವಿರುದ್ಧ, ಎಫ್‌ಬಿಐ ಸಲ್ಲಿಸಿರುವ ಗಡೀಪಾರು ಅರ್ಜಿಯ ವಿಚಾರಣೆ|

ಲಂಡನ್(ಜು.03): ಭಾರತದ ಮೋಸ್ಟ್ ವಾಟೆಂಡ್ ಉಗ್ರ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿದ್ದು, ಅಲ್ಲಿಂದಲೇ ಕಾರ್ಯಾಚರಿಸುತ್ತಿದ್ದಾನೆ ಎಂಬ ಭಾರತದ ವಾದಕ್ಕೆ ಜಾಗತಿಕ ಮನ್ನಣೆ ದೊರೆತಿದೆ.

ದಾವೂದ್ ಇಬ್ರಾಹಿಂ ಮತ್ತು ಆತನ ಡಿ ಕಂಪನಿ ಪಾಕಿಸ್ತಾನದಲ್ಲಿದ್ದು. ಈಗಲೂ ಚುರುಕಾಗಿದೆ ಎಂದು ಅಮೆರಿಕ ಲಂಡನ್ ನ್ಯಾಯಾಲಯಕ್ಕೆ ತಿಳಿಸಿದೆ.

1993ರ ಮುಂಬೈ ಬ್ಲಾಸ್ಟ್ ಬಳಿಕ ಭಾರತ ಬಿಟ್ಟಿರುವ ದಾವೂದ್ ಇಬ್ರಾಹಿಂ, ಪಾಕಿಸ್ತಾನದ ಕರಾಚಿಯಿಂದ ತನ್ನ ಅಂತಾರಾಷ್ಟ್ರೀಯ ಅಪರಾಧ ಚಟುವಟಿಕೆಗಳನ್ನು ನಡೆಸುತ್ತಿದ್ದಾನೆ ಎಂದು ಅಮೆರಿಕ ವೆಸ್ಟ್ ಮಿನಿಸ್ಟರ್ ಕೋರ್ಟ್ ಗೆ ತಿಳಿಸಿದೆ.

ವೆಸ್ಟ್ ಮಿನಿಸ್ಟರ್ ಕೋರ್ಟ್’ನಲ್ಲಿ ದಾವೂದ್‌ನ ಡಿ-ಕಂಪನಿ ಉಸ್ತುವಾರಿ ಹೊತ್ತಿರುವ ಜಬೀರ್‌ ವಿರುದ್ಧ, ಎಫ್‌ಬಿಐ ಸಲ್ಲಿಸಿರುವ ಗಡೀಪಾರು ಅರ್ಜಿಯ ವಿಚಾರಣೆ ನಡೆಯುತ್ತಿದೆ. ಈ ವೇಳೆ ಮೆರಿಕ ಸರ್ಕಾರವನ್ನು ಪ್ರತಿನಿಧಿಸಿದಜಾನ್ ಹಾರ್ಡಿ ಕ್ಯೂಸಿ, ದಾವೂಸ್ ಪಾಕಿಸ್ತಾನದಲ್ಲಿದ್ದಾನೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. 

ಆ ವೇಳೆ ದಾವೂದ್‌ನ ಡಿ-ಕಂಪನಿ ಪರ ವಕೀಲರ ವಾದಕ್ಕೆ ಪಾಕಿಸ್ತಾನದ ಉನ್ನತ ಅಧಿಕಾರಿಗಳು ಪರೋಕ್ಷವಾಗಿ ಬೆಂಬಲ ವ್ಯಕ್ತಪಡಿಸಿದ್ದು, ಜಬೀರ್‌ ಪ್ರತಿಷ್ಠಿತ ವ್ಯಾಪಾರಿ ಎಂದು ಕೋರ್ಟ್‌ಗೆ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೋದಿ-ಪುಟಿನ್‌ ಸೆಲ್ಫಿ ತೋರಿಸಿ ಟ್ರಂಪ್‌ ವಿರುದ್ಧ ಸಂಸದೆಯ ಕಿಡಿ
ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ