
ನವದೆಹಲಿ : ಕಾಂಗ್ರೆಸ್ ತೊರೆದ ಪ್ರಿಯಾಂಕ ಚತುರ್ವೇದಿ ಶಿವಸೇನೆ ಸೇರಿದ್ದಾರೆ. ಅನುಚಿತವಾಗಿ ತಮ್ಮೊಂದಿಗೆ ವರ್ತಿಸಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಂಡ ಬೆನ್ನಲ್ಲೇ ಅಸಮಾಧಾನಗೊಂಡಿದ್ದ ಅವರು ಶುಕ್ರವಾರ ಪಕ್ಷಕ್ಕೆ ಗುಡ್ ಬೈ ಹೇಳಿದ್ದರು.
ಇದೇ ಬೆನ್ನಲ್ಲೇ ಇದೀಗ ಶಿವ ಸೇನೆ ಮುಖಂಡ ಉದ್ದವ್ ಠಾಕ್ರೆ ನೇತೃತ್ವದಲ್ಲಿ ಸೇರ್ಪಡೆಯಾಗಿದ್ದಾರೆ.
ಪಕ್ಷ ಸೇರಿದ ಬೆನ್ನಲ್ಲೇ ಮಾತನಾಡಿದ ಪ್ರಿಯಾಂಕ ತಮಗೆ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದು ಅಷ್ಟೇ ಮುಖ್ಯ. ಮುಂಬೈ ಅಭಿವೃದ್ಧಿ ತಮ್ಮ ಮೊದಲ ಆದ್ಯತೆ. ಸಾಕಷ್ಟು ಚಿಂತನೆಯ ಬಳಿಕವೇ ಶಿವಸೇನೆ ಸೇರಿದ್ದಾಗಿ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದ ವೇಳೆ ಕೆಲ ಕಾರ್ಯಕರ್ತರು ಪ್ರಿಯಾಂಕ ಜೊತೆ ಅನುಚಿತವಾಗಿ ವರ್ತಿಸಿದ್ದರು. ಇವರ ವಿರುದ್ಧ ದೂರು ನೀಡಿದ್ದ ಬಳಿಕ ಅಮಾನತು ಮಾಡಿ ಬಳಿಕ ಕಾಂಗ್ರೆಸ್ ನಾಯಕ ಜೋತಿರಾದಿತ್ಯ ಸಿಂಧ್ಯಾ ಮತ್ತೆ ಈ ನಾಯಕರನ್ನು ವಾಪಸ್ ಕರೆಸಿಕೊಂಡಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ಪ್ರಿಯಾಂಕ ಟ್ವೀಟ್ ಮೂಲಕ ಹರಿಹಾಯ್ದಿದ್ದರು.
‘ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿ ಬೆವರು ಮತ್ತು ರಕ್ತ ಹರಿಸಿ ಕಷ್ಟಪಟ್ಟು ದುಡಿಯುವವರ ಬದಲು ಕೊಳಕು ಗೂಂಡಾಗಳಿಗೆ ಆದ್ಯತೆ ಸಿಗುತ್ತಿರುವುದು ಬೇಸರ ತರಿಸಿದೆ. ಪಕ್ಷಕ್ಕಾಗಿ ಎಲ್ಲೆಡೆ ಸಾಕಷ್ಟುಅಡೆತಡೆಗಳನ್ನು ಎದುರಿಸಿದ್ದರೂ ನಮ್ಮದೇ ಪಕ್ಷದೊಳಗೆ ನನಗೆ ಬೆದರಿಕೆ ಹಾಕುವವರಿಗೆ ಕನಿಷ್ಠ ಪಕ್ಷ ಛೀಮಾರಿ ಕೂಡ ಹಾಕದೆ ಹಾಗೇ ಬಿಡುತ್ತಾರೆ’ ಎಂದು ಟ್ವೀಟ್‌ನಲ್ಲಿ ಪ್ರಿಯಾಂಕಾ ಅಸಮಾಧಾನ ಹೊರಹಾಕಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.