
ನವದೆಹಲಿ(ಜು.16): ನರೋತ್ತಮ್ ಮಿಶ್ರಾರವರ ಕುರಿತಾಗಿ ವಿಚಾರಣೆ ನಡೆಸಿ ತೀರ್ಪು ನೀಡಿರುವ ದೆಹಲಿ ಹೈಕೋರ್ಟ್ ಅವರ ಅನರ್ಹತೆ ಮುಂದುವರೆಯುವುದಾಗಿ ತಿಳಿಸಿದೆ. ಚುನಾವಣಾ ಆಯೋಗ ನರೋತ್ತಮ್ ಮಿಶ್ರಾರನ್ನು ಅನರ್ಹರು ಎಂದು ಘೋಷಿಸಿರುವ ಕುರಿತಾಗಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್'ನ ದ್ವಿ ಸದಸ್ಯ ಪೀಠ ಮಿಶ್ರಾರಿಗೆ ಮತದಾನ ಮಾಡಲು ನಿರ್ಭಂದ ಹೇರಿದೆ. ಈ ಮೂಲಕ ಅವರು ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಮಾಡುವುದಿಲ್ಲ ಎಂಬುವುದು ಸ್ಪಷ್ಟವಾಗಿದೆ.
ಇದಕ್ಕೂ ಮೊದಲು ಶುಕ್ರವಾರದಂದು ಇವರ ಮೇಲ್ಮನವಿಯನ್ನು ತಿರಸ್ಕರಿಸುವ ಮೂಲಕ ಮಧ್ಯಪ್ರದೇಶದ ಮಂತ್ರಿ ನರೋತ್ತಮ್ ಮಿಶ್ರಾರವರಿಗೆ ಆಘಾತ ನೀಡಿತ್ತು. ಅನರ್ಹತೆಯ ತೀರ್ಪಿನ ಮೇಲೆ ತಡೆಕೋರಿ ಮೇಲ್ಮನವಿ ಸಲ್ಲಿಸಿದ್ದರು. ಇವರ ಈ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದ್ದರಿಂದ ಜುಲೈ 17ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಇವರು ಮತ ಚಲಾಯಿಸುವುದಿಲ್ಲ ಎಂಬುವುದು ಸ್ಪಷ್ಟವಾಗಿದೆ. ಆದರೂ ಸುಪ್ರೀಂ ಕೋರ್ಟ್'ಗೆ ಮನವಿ ಸಲ್ಲಿಸುವ ಅವಕಾಶ ಅವರಿಗಿದೆಯಾದರೂ ಒಂದು ದಿನದಲ್ಲಿ ತೀರ್ಪು ಹೊರ ಬಿದ್ದು ಮತದಾನ ಮಾಡುವ ವಕಾಶ ಸಿಗುವುದು ಅನುಮಾನವೇ ಸರಿ.
ಪೇಯ್ಡ್ ನ್ಯೂಸ್ ವಿಚಾರವಾಗಿ ದೆಹಲಿ ಹೈ ಕೋರ್ಟ್ ಮಧ್ಯಪ್ರದೇಶದ ಮಂತ್ರಿ ನರೋತ್ತಮ್ ಮಿಶ್ರಾರವರ ಮೇಲ್ಮನವಿಯ ತೀರ್ಪನ್ನು ಸುರಕ್ಷಿತಗೊಳಿಸಲಾಗಿತ್ತು. ಜುಲೈ 17ರಂದು ನಡೆಯುವ ಚುನಾವಣೆಯನಲ್ಲಿ ಅವರು ಮತ ಚಲಾಯಿಸಬೇಕೋ ಬೇಡವೋ ಎಂದು ನಿರ್ಧರಿಸುವುದು ದೆಹಲಿ ಹೈ ಕೋರ್ಟ್ ಮೇಲಿತ್ತು. ಗುರುವಾರದಂದು ವಿಚಾರಣೆ ಸಂದರ್ಭದಲ್ಲಿ ಚುನಾವಣಾ ಆಯೋಗ ಈ ತೀರ್ಪು ತೆdeದುಕೊಳ್ಳುವುದರಲ್ಲಿ ವಿಳಂಬ ಮಾಡಿದೆ ಎಂದು ನರೋತ್ತಮ್ ತಿಳಿಸಿದ್ದರು. ಆದರೆ ದೂರುದಾರರು ಇದಕ್ಕೆ ಯಾಔಉದೇ ಸಾಕ್ಷಿಗಳಿಲ್ಲ ಹೀಗಾಗಿ ವಿಳಂಬವಾದರೂ ಈ ಕೇಸ್'ನ್ನು ಮುಚ್ಚಿ ಹಾಕಲು ಸಾಧ್ಯವಿಲ್ಲ ಎಂದು ಪ್ರತಿವಾದ ಮಾಡಿತ್ತು.
ಇದೀಗ ಪೇಯ್ಡ್ ನ್ಯೂಸ್ ವಿಚಾರವಾಗಿ ಅನರ್ಹಗೊಂಡಿರುವ ನರೋತ್ತಮ್ ಮಿಶ್ರಾ ಈಗ ಸುಪ್ರೀ ಕೋರ್ಟ್ ಮೆಟ್ಟಿಲೇರಿದ್ದಾರೆ. ಸುಪ್ರೀಂ ಕೋರ್ಟ್'ನಲ್ಲಿ ಮಧ್ಯಪ್ರದೇಶ ಕೋರ್ಟ್'ನಲ್ಲಿರುವ ತಡೆ ಅರ್ಜಿಯ ವಿಚಾರಣೆಯನ್ನು ಶೀಘ್ರವಾಗಿ ಮಾಡುವಂತೆ ಮನವಿ ಸಲ್ಲಿಸಿದ್ದಾರೆ. ಅಲ್ಲದೇ ವಿಚಾರಣೆ ಪೂರ್ಣವಾಗುವವರೆಗೂ ಚುನಾವಣಾ ಆಯೋಗ ನೀಡಿರುವ ತೀರ್ಪನ್ನೂ ತಡೆ ಹಿಡಿಯಬೇಕೆಂದು ಮನವಿ ಸಲ್ಲಿಸಿದ್ದಾರೆ. 'ಜುಲೈ 17ರಂದು ರಾಷ್ಟ್ರಪತಿ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಮತ ಹಾಕಬೇಕೆನ್ನುವುದು ನನ್ನ ಬಯಕೆಯಾಗಿತ್ತು. ಆದರೆ ಹೈ ಕೋರ್ಟ್ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದೆ. ಹೀಗಾಗಿ ಶೀಘ್ರವಾಗಿ ತೀರ್ಪು ನೀಡುವಂತೆ ಹೈ ಕೋರ್ಟ್'ಗೆ ನಿರ್ದೇಶನ ನೀಡಲಾಗಿದೆ' ಎಂದಿದ್ದಾರೆ.
ವಾಸ್ತವವಾಗಿ ಮಧ್ಯಪ್ರದೇಶದ ಮಂತ್ರಿ ನರೋತ್ತಮ್ ಮಿಶ್ರಾರ ಮೇಲೆ 2008ರಲ್ಲಿ ನಡೆದ ಚುನಾವಣೆಯಲ್ಲಿ ಪೇಯ್ಡ್ ನ್ಯೂಸ್ ಆರೋಪ ಅಂಟಿಕೊಂಡಿತ್ತು. 2008ರ ಚುನಾವಣೆಯ ಸಂದರ್ಭದಲ್ಲಿ ಪೇಯ್ಡ್ ನ್ಯೂಸ್ ಮೇಲೆ ವ್ಯಯಿಸಿದ ಮೊತ್ತವನ್ನು ಇವರು ತಮ್ಮ ಖರ್ಚಿನಲ್ಲಿ ನಮೂದಿಸಿರಲಿಲ್ಲ. ಹೀಗಾಗಿ ಚುನಾವಣಾ ಆಯೋಗ ಅವರನ್ನು ಅನರ್ಹರು ಎಂದು ಘೋಷಿಸುವುದರೊಂದಿಗೆ ಮೂರು ವರ್ಷ ಚುನಾವಣೆಗೆ ಸ್ಪರ್ಧಿಸಲೂ ನಿಷೇಧಿಸಿತ್ತು. 2009ರಲ್ಲಿ ಕಾಂಗ್ರೆಸ್'ನ ಮಾಜಿ ಶಾಸಕ ರಾಜೇಂದ್ರ ಭಾರತಿ ಮಾಡಿದ ದೂರಿನ ಮೇಲೆ ಈ ತೀರ್ಪು ಪ್ರಕಟಿಸಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.