ಠಾಣೆಗೆ ನುಗ್ಗಿ ಪೊಲೀಸ್ ವಶದಲ್ಲಿದ್ದ ಮುಖಂಡನನ್ನು ಕರದೊಯ್ದ ಭಜರಂಗ ದಳ ಮಂದಿ!

By Suvarna Web DeskFirst Published Jul 16, 2017, 1:47 PM IST
Highlights

ಪೊಲೀಸ್ ಠಾಣೆಗೆ ಬಲವಂತವಾಗಿ ನುಗ್ಗಿದ ಭಜರಂಗದಳದ ಕಾರ್ಯಕರ್ತರು ಬಂಧಿತ ಮುಖಂಡನನ್ನು ಕರೆದೊಯ್ದ ಅಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ಪೊಲೀಸರು ನಿಸ್ಸಹಾಯಕರಾಗಿ ನೋಡುತ್ತಿದ್ದರು ಎನ್ನಲಾಗಿದೆ.

ಭೋಪಾಲ್:  ಪೊಲೀಸ್ ಠಾಣೆಗೆ ಬಲವಂತವಾಗಿ ನುಗ್ಗಿದ ಭಜರಂಗದಳದ ಕಾರ್ಯಕರ್ತರು ಬಂಧಿತ ಮುಖಂಡನನ್ನು ಕರೆದೊಯ್ದ ಅಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ಪೊಲೀಸರು ನಿಸ್ಸಹಾಯಕರಾಗಿ ನೋಡುತ್ತಿದ್ದರು ಎನ್ನಲಾಗಿದೆ.

ಅರೇರಾ ಕಾಲೋನಿಯ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಿ, ಪೊಲೀಸ್ ಸಿಬ್ಬಂದಿಯೊಂದಿಗೆ ದುರ್ವರ್ತನೆ ತೋರಿದ ಆರೋಪದಲ್ಲಿ ಭಜರಂಗ ದಳದ ಮುಖಂಡ ಕಮಲೇಶ್ ಥಾಕೂರ್’ನನ್ನು ಬಂಧಿಸಲಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಹಬೀಬ್’ಗಂಜ್ ಠಾಣೆಗೆ ಬಲವಂತವಾಗಿ ನುಗ್ಗಿದ ಕಾರ್ಯಕರ್ತರ ಗುಂಪು, ಆರೋಪಿಯನ್ನು ಲಾಕಪ್’ನಿಂದ ಕರೆದೊಯ್ದಿದ್ದಾರೆ ಎಂದು ನ್ಯೂಸ್’ಬಿಟ್ಸ್ ವರದಿ ಮಾಡಿದೆ.

ಮುಖಂಡನನ್ನು  ಈ ರೀತಿ ಬಿಡಿಸಿದ ಬಳಿಕ ಭಜರಂಗದಳದ ಮಂದಿ ರಸ್ತೆಯಲ್ಲೇ ಕುಣಿದು ಕುಪ್ಪಳಿಸಿ ವಿಜಯೋತ್ಸವವನ್ನು ಆಚರಿಸಿದ್ದಾರೆ.

ಮಾಧ್ಯಮದವರು ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದ ಬಳಿಕ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದೆ. ಆದರೆ ಪೊಲೀಸರು ಠಾಕೂರ್’ನನ್ನಾಗಲಿ ಅಥವಾ ಇತರ ರೋಪಿಗಳನ್ನಾಗಲಿ ಈವರೆಗೆ ಬಂಧಿಸಿಲ್ಲವೆನ್ನಲಾಗಿದೆ. ಠಾಕೂರ್ ಭಜರಂಗದಳದ ಪ್ರಾದೇಶಿಕ ಸಹ-ಸಂಚಾಲಕನಾಗಿದ್ದಾನೆ.

(ಚಿತ್ರ ಕೃಪೆ: ದೈನಿಕ್ ಭಾಸ್ಕರ್)

click me!