
ಭೋಪಾಲ್: ಮುಂಬರುವ ಸೆಪ್ಟಂಬರ್ ತಿಂಗಳಿನಿಂದ ಮಧ್ಯಪ್ರದೇಶದಲ್ಲಿ ಜ್ಯೋತಿಷ್ಯ-ಹೊರರೋಗಿ ವಿಭಾಗ (Astrology OPD)ಗಳನ್ನು ಶಿವರಾಜ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರವು ಆರಂಭಿಸಲಿದೆ.
ಸರ್ಕಾರಿ ಸಂಸ್ಥೆಯಾಗಿರುವ ಮಹರ್ಷಿ ಪತಂಜಲಿ ಸಂಸ್ಕೃತ ಸಂಸ್ಥಾನ (MPPS) ದಿಂದ ಮಾನ್ಯತೆ ಪಡೆದಿರುವ ಜ್ಯೋತಿಷಿಗಳು ರೋಗಿಗಳೊಂದಿಗೆ ಸಮಾಲೋಚನೆ ನಡೆಸಿ ಚಿಕಿತ್ಸೆ ನೀಡಲಿರುವರು ಎಂದು ನ್ಯೂ ಇಂಡಿಯನ್ ಎಕ್ಸ್’ಪ್ರೆಸ್ ವರದಿ ಮಾಡಿದೆ.
ಜ್ಯೋತಿಷಿಗಳು, ವಾಸ್ತು ತಜ್ಞರು, ಹಸ್ತಮುದ್ರಿಕೆ ನೋಡಿ ಭವಿಷ್ಯ ಹೇಳುವವರು, ಹಾಗೂ ವೇದ ಕರ್ಮಕಾಂಡ ವಿದ್ವಾಂಸರು ವಾರದಲ್ಲೆರಡು ದಿನ 3-4 ಗಂಟೆಗಳ ಕಾಲ ರೋಗಿಗಳ ಜಾತಕ ಹಾಗೂ ಗ್ರಹಗತಿಗಳನ್ನು ನೋಡಿ ಚಿಕಿತ್ಸೆ ನೀಡಲಿದ್ದಾರೆ ಎಂದು ಹೇಳಲಾಗಿದೆ.
ಯಾವ ರೀತಿ ಕಿರಿಯ ವೈದ್ಯರು ತಜ್ಞರ ಮೇಲುಸ್ತುವಾರಿಯಲ್ಲಿ ಕಾರ್ಯಾಚರಿಸುತ್ತಾರೋ, ಅದೇ ರೀತಿ ಜ್ಯೋತಿಷಿಗಳು ಕೂಡಾ ಜ್ಯೋತಿಷ್ಯ-ಒಪಿಡಿಯಲ್ಲಿ ರೋಗಿಗಳಿಗೆ ಸೇವೆ ಸಲ್ಲಿಸಲಿದ್ದಾರೆ ಎಂದು ಮಹರ್ಷಿ ಪತಂಜಲಿ ಸಂಸ್ಕೃತ ಸಂಸ್ಥಾನದ ನಿರ್ದೇಶಕ ಪಿ.ಆರ್. ತಿವಾರಿ ಹೇಳಿದ್ದಾರೆ.
ಜ್ಯೋತಿಷ್ಯರು ರೋಗಿಗಳ ಗ್ರಹಗತಿಗಳ ಆಧಾರವಾಗಿಟ್ಟು ಸರಿಯಾದ ಸಮಯದಲ್ಲಿ ಪ್ರಶ್ನೆಗಳನ್ನು ಕೆಳುವ ಮೂಲಕ ಸಮರ್ಪಕವಾದ ಜ್ಯೋತಿಷ-ವೈದ್ಯಕೀಯ ಚಿಕಿತ್ಸೆ ನೀಡಲಾಗುವುದೆಂದು ತಿವಾರಿ ಹೇಳಿದ್ದಾರೆ.
ರೋಗಿಗಳು ಜ್ಯೋತಿಷಿಗಳ ಸೇವೆ ಪಡೆಯಲು ರೂ.5ನ್ನು ಪಾವತಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ಜಾತಕವನ್ನು ಜತೆಗೆ ತಂದಿರದ ರೊಗಿಗಳ ಕಾಯಿಲೆಗಲನ್ನು ಪ್ರಶ್ನಾ ಕುಂಡಲಿ ವಿಧಾನದ ಮೂಲಕ ವಿಶ್ಲೇಷಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಈ ಸೇವೆಯನ್ನು ಸಂಸ್ಥಾನ ನಡೆಸುತ್ತಿರುವ 138 ಶಾಲೆಗಳಿಗೂ ವಿಸ್ತರಿಸಲಾಗುವುದೆಂದು ಹೇಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.