
ನವದೆಹಲಿ(ಜ.04): ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ)ದ ಮಧ್ಯಂತರ ಅಧ್ಯಕ್ಷರಾಗಿ ಡೇವಿಡ್ ಆರ್ ಸೈಮ್‌ಲೈಹ್ ಅವರನ್ನು ನೇಮಿಸಲಾಗಿದೆ. ಈ ಬಗ್ಗೆ ಸಂಪುಟ ಸಭೆ ಇಂದು ಅಧಿಕೃತ ಘೋಷಣೆ ಮಾಡಿದೆ.
ಮಧ್ಯಪ್ರದೇಶ ಕೇಡರ್'ನ ಮಾಜಿ ಐಎಎಸ್ ಅಧಿಕಾರಿ ಅಲ್ಕಾ ಸಿರೊಹಿ ಅವರ ಸ್ಥಾನಕ್ಕೆ ಡೇವಿಡ್ ಅವರನ್ನು ನೇಮಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಅಂತಿಮಗೊಳಿಸಿದ್ದ ಡೇವಿಡ್ ಹೆಸರಿಗೆ ರಾಷ್ಟ್ರಪತಿ ಸಮ್ಮತಿ ಸೂಚಿಸಿದ್ದಾರೆ. ಡೇವಿಡ್ ಇಂದಿನಿಂದ ಜನವರಿ 21, 2018ರವರೆಗೆ ಅಧಿಕಾರದಲ್ಲಿರಲಿದ್ದಾರೆ.
2012ರಿಂದ ಯುಪಿಎಸ್'ಸಿ ಸದಸ್ಯರಾಗಿದ್ದ ಡೇವಿಡ್ ಅವರನ್ನು ಯುಪಿಎಸ್'ಸಿಯ ಅಧ್ಯಕ್ಷರಾಗಿ ನೇಮಿಸಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಡೇವಿಡ್ ಅವರು ಅರುಣಾಚಲ ಪ್ರದೇಶದ ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿಯೂ ಸೇವೆ ಸಲ್ಲಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.