ರಾಜ್ಯದಲ್ಲಿ ಶುರುವಾಯ್ತು ಪವರ್‌ ಕಟ್‌, ಸೋತರೂ RCBಗೆ ಸಪೋರ್ಟ್; ಅ.12ರ ಟಾಪ್ 10 ಸುದ್ದಿ!

By Suvarna News  |  First Published Oct 12, 2021, 4:35 PM IST

ಕಲ್ಲಿದ್ದಲು ಕೊರತೆಯಿಂದ ರಾಜ್ಯದಲ್ಲಿ ಪವರ್ ಕಟ್ ಆರಂಭಗೊಂಡಿದೆ. ಇತ್ತ ಮುಂದಿನ ಚುನಾವಣೆ ನನ್ನ ಕೊನೆಯ ಹೋರಾಟ ಎಂದು ಹೆಚ್‌ಡಿಕೆ ಹೇಳಿದ್ದಾರೆ. ಮಾನವ ಹಕ್ಕುಗಳ ನೆಪದಲ್ಲಿ ರಾಜಕೀಯ, ದೇಶದ ಘನತೆಗೆ ಧಕ್ಕೆಯಾಗುತ್ತಿದೆ ಎಂದು ಮೋದಿ ಹೇಳಿದ್ದಾರೆ. ಮಗನ ಚಿಂತೆಯಲ್ಲಿ ಊಟ ನಿದ್ದೆ ಬಿಟ್ಟ ಶಾರುಖ್, ಆರ್‌ಸಿಬಿ ತಂಡಕ್ಕೆ ನಮ್ಮ ಬೆಂಬಲ ಎಂದ ಫ್ಯಾನ್ಸ್ ಸೇರಿದಂತೆ ಅಕ್ಟೋಬರ್ 12ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.


ಭಾರತಕ್ಕೆ ಮತ್ತೊಂದು ಯಶಸ್ಸು; 2 ರಿಂದ 18 ವರ್ಷ ಮಕ್ಕಳಿಗೆ ಕೋವಾಕ್ಸಿನ್ ಲಸಿಕೆ ಶಿಫಾರಸು !

Tap to resize

Latest Videos

ಕೊರೋನಾ(Coronavirus) ವಿರುದ್ಧದ ಹೋರಾಟದಲ್ಲಿ ಭಾರತ ದಿಟ್ಟ ಹೆಜ್ಜೆ ಇಡುತ್ತಿದೆ. ಲಸಿಕೆ (Vaccine)ಅಭಿಯಾನ ಅತೀವೇಗದಲ್ಲಿ ನಡೆಯುತ್ತಿದೆ. ಇದೀಗ 2 ರಿಂದ 18 ವರ್ಷದವರಿಗೆ ಲಸಿಕೆ ನೀಡಲು ತಜ್ಞರ ಸಮಿತಿ ಶಿಫಾರಸು ಮಾಡಿದೆ. ಕೋವಾಕ್ಸಿನ್(Covaxin) ಲಸಿಕೆಯನ್ನು 2 ರಿಂದ 18  ವರ್ಷವದವರಿಗೆ ನೀಡಬಹುದು ಎಂದು ತಜ್ಞ ವೈದ್ಯರ ಸಮಿತಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ( (DCGI)ಗೆ ಶಿಫಾರಸು ಮಾಡಿದೆ.

ಮುಂದಿನ ಚುನಾವಣೆಯೇ ನನ್ನ ಕೊನೆಯ ಹೋರಾಟ : ಎಚ್‌ಡಿಕೆ

 ನಾನಾಗಲಿ ದೇವೇಗೌಡರಾಗಲಿ (HD Devegowda) ಯಾರು ಅನ್ಯಾಯ ಮಾಡಿಲ್ಲ. ದೇವೇಗೌಡರು ಎಂದರೆ ಚಿಕ್ಕ ದೇವೇಗೌಡರು ಅಲ್ಲ, ದೊಡ್ಡದೇವೇಗೌಡರು ಎಂದು ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ (HD kumaraswamy) ಹೇಳಿದರು.

'ಮಾನವ ಹಕ್ಕುಗಳ ನೆಪದಲ್ಲಿ ರಾಜಕೀಯ, ದೇಶದ ಘನತೆಗೆ ಧಕ್ಕೆ: ನರೇಂದ್ರ ಮೋದಿ

 ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ 28 ನೇ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi) ಅವರು ವಿಡಿಯೋ ಕಾನ್ಫರೆನ್ಸಿಂಗ್( National Human Rights Commission)  ಮೂಲಕ ಪಾಲ್ಗೊಂಡಿದ್ದಾರೆ. 

Coal Crisis| ಕಲ್ಲಿದ್ದಲು ಬರ, ರಾಜ್ಯದಲ್ಲಿ ಪವರ್‌ ಕಟ್‌ ಆರಂಭ!

ಕಲ್ಲಿದ್ದಲು ಕೊರತೆಯಿಂದ(Coal Crisis) ರಾಜ್ಯದ ವಿದ್ಯುತ್‌ (Electricity) ಉತ್ಪಾದನೆ ಹಾಗೂ ಪೂರೈಕೆ ಮೇಲೆ ಪರಿಣಾಮ ಆಗುವುದಿಲ್ಲ ಎಂದು ಸರ್ಕಾರ ಹೇಳುತ್ತಲೇ ಇದ್ದರೂ ರಾಜ್ಯದಲ್ಲಿ ಕಳೆದ ಎರಡು ತಿಂಗಳಿಗೆ ಹೋಲಿಸಿದರೆ ಕಲ್ಲಿದ್ದಲು ಕೊರತೆಯಿಂದ ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ ವಿದ್ಯುತ್‌ ಉತ್ಪಾದನೆ ಶೇ.52ರಷ್ಟು ಕುಸಿದಿದೆ. ಅಲ್ಲದೆ, ರಾಜ್ಯದ ಒಟ್ಟಾರೆ ವಿದ್ಯುತ್‌ ಉತ್ಪಾದನೆಯೂ ಶೇ.52ರಷ್ಟುಕುಸಿತ ಕಂಡಿದೆ.

IPL 2021 ಸೋತರೂ, ಗೆದ್ದರೂ ಎಂದೆಂದಿಗೂ ಬೆಂಗಳೂರು-ವಿರಾಟ್‌ಗೆ ನಮ್ಮ ಸಪೋರ್ಟ್ ಎಂದ RCB ಫ್ಯಾನ್ಸ್‌..!

14ನೇ ಆವೃತ್ತಿಯ ಐಪಿಎಲ್ (IPL 2021) ಟೂರ್ನಿಯ ಎಲಿಮಿನೇಟರ್‌ ಪಂದ್ಯದಲ್ಲಿ ಕೋಲ್ಕತ ನೈಟ್ ರೈಡರ್ಸ್ (Kolkata Knight Riders) ವಿರುದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ರೋಚಕ ಸೋಲು ಕಾಣುವ ಮೂಲಕ ತನ್ನ ಅಭಿಯಾನ ಮುಗಿಸಿದೆ. 

Drugs Case: ಮಗನ ಚಿಂತೆಯಲ್ಲಿ ಶಾರುಖ್‌ಗೆ ಡಿಪ್ರೆಶನ್‌: ಊಟ ನಿದ್ದೆ ಬಿಟ್ಟ ನಟ!

ಡ್ರಗ್‌ ಕೇಸ್‌ನಲ್ಲಿ ಸಿಕ್ಕಿ ಹಾಕಿಕೊಂಡಿರುವ ಶಾರುಖ್ ಖಾನ್ (Shah rukh khan) ಮಗ ಆರ್ಯನ್ ಖಾನ್ ( Aryan khan) ನನ್ನು ಆರ್ಥರ್ ರೋಡ್ ಜೈಲಿನಲ್ಲಿ ಬಂಧಿಸಿ ಇಡಲಾಗಿದೆ.

ಶಿವಣ್ಣನಿಗೆ 'ಚರಂಡಿ ಕ್ಲೀನರ್' ಆಗೋ ಆಸೆ, ಸೆಂಚುರಿ ಸ್ಟಾರ್ ಹೇಳಿದ ಕಾರಣ ನೋಡಿ

ಸಲಗ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಮನಸ್ಸು ಬಿಚ್ಚಿ ಮಾತನಾಡಿದ ಶಿವರಾಜ್‌ಕುಮಾರ್. ಈ ಪಾತ್ರ ಮಾಡಬೇಕು ಅನಿಸಿದ್ದು ಯಾಕೆ ಗೊತ್ತಾ?

ತನ್ನ ಮೊದಲ ಕಾರು ತೋರಿಸಿದ ನಟ ಧರ್ಮೇಂದ್ರ..! ಕೊಟ್ಟಿದ್ದು ಬರೀ 18 ಸಾವಿರ

ಹಿರಿಯ ನಟ ಧರ್ಮೇಂದ್ರ ಅವರು 1960 ರಲ್ಲಿ ಖರೀದಿಸಿದ ತಮ್ಮ ಮೊದಲ ಕಾರು(Car) ಫಿಯೆಟ್‌ನ ಫೋಟೋವನ್ನು ಹಂಚಿಕೊಂಡಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳ ಮೂಲಕ ಫೋಟೋ ಶೇರ್ ಮಾಡಿದ್ದು ನೆಟ್ಟಿಗರು ಹಳೆ ಮಾಡೆಲ್ ಕಾರನ್ನು ಕಣ್ತುಂಬಿಕೊಂಡಿದ್ದಾರೆ.

ತಾಲಿಬಾನ್ ದಿವಾಳಿಯತ್ತ, ಅಫ್ಘನ್ ನಾಗರೀಕರ ನೆರವಿಗೆ ಹೆಲಿಕಾಪ್ಟರ್ ಮನಿ

ಅಫ್ಘಾನಿಸ್ತಾನದಲ್ಲಿ ಹಸಿವು, ನಿರುದ್ಯೋಗ ತಾಂಡವವಾಡುತ್ತಿದೆ. ಕೈಯಲ್ಲಿ ಹಣವಿಲ್ಲದೇ,  ಬಡತನ ಜನರನ್ನು ಕಿತ್ತು ತಿನ್ನುತ್ತಿದೆ. ಇನ್ನು ತಾಲಿಬಾನ್ ಸರ್ಕಾರದಲ್ಲೂ ದುಡ್ಡಿಲ್ಲ. ಆರ್ಥಿಕವಾಗಿ ದಿವಾಳಿಯಾಗಿದ್ದಾರೆ.
 

click me!