ಸಿಸಿಬಿ ಅಧಿಕಾರಿಗಳ ಪ್ರಶ್ನೆಗಳಿಗೆ ಗೀತಾವಿಷ್ಣು ತಬ್ಬಿಬ್ಬು!

Published : Oct 07, 2017, 10:39 PM ISTUpdated : Apr 11, 2018, 12:47 PM IST
ಸಿಸಿಬಿ ಅಧಿಕಾರಿಗಳ ಪ್ರಶ್ನೆಗಳಿಗೆ ಗೀತಾವಿಷ್ಣು  ತಬ್ಬಿಬ್ಬು!

ಸಾರಾಂಶ

ಗಾಂಜಾಮತ್ತಲ್ಲಿ ಅಕ್ಸಿಡೆಂಟ್​​ ಮಾಡಿ ಪುಂಡಾಟ ನಡೆಸಿದ್ದ ಗೀತವಿಷ್ಣುಗೆ ಸಿಸಿಬಿ ಪೊಲೀಸರು ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ.  ಇತ್ತ ಮಲ್ಯಾ ಆಸ್ಪತ್ರೆ ಸಿಬ್ಬಂದಿಗೂ ಗಾಂಜಾ ಕೇಸ್ ಬಿಸಿ ತಟ್ಟಿದೆ. ಮತ್ತೊಂದೆಡೆ ಡೈನಾಮಿಕ್ ಸ್ಟಾರ್  ಕೂಡ  ಹಿರಿಯ ಪೊಲೀಸ್​ ಅಧಿಕಾರಿಗಳ ಮೊರೆ ಹೋಗಿದ್ದಾರೆ.

ಬೆಂಗಳೂರು (ಅ.07): ಗಾಂಜಾಮತ್ತಲ್ಲಿ ಅಕ್ಸಿಡೆಂಟ್​​ ಮಾಡಿ ಪುಂಡಾಟ ನಡೆಸಿದ್ದ ಗೀತವಿಷ್ಣುಗೆ ಸಿಸಿಬಿ ಪೊಲೀಸರು ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ.  ಇತ್ತ ಮಲ್ಯಾ ಆಸ್ಪತ್ರೆ ಸಿಬ್ಬಂದಿಗೂ ಗಾಂಜಾ ಕೇಸ್ ಬಿಸಿ ತಟ್ಟಿದೆ. ಮತ್ತೊಂದೆಡೆ ಡೈನಾಮಿಕ್ ಸ್ಟಾರ್  ಕೂಡ  ಹಿರಿಯ ಪೊಲೀಸ್​ ಅಧಿಕಾರಿಗಳ ಮೊರೆ ಹೋಗಿದ್ದಾರೆ.

ಗಾಂಜಾಮತ್ತಲ್ಲಿ ಕಾನೂನಿಗೆ ಕಿಂಚಿತ್ತು ಬೆಲೆಕೊಡದೇ ಪುಂಡಾಟ ನಡೆಸಿದ್ದ ಗೀತವಿಷ್ಣುಗೆ ಸಿಸಿಬಿ ಪೊಲೀಸರು ಚುರುಕುಮುಟ್ಟಿಸುತ್ತಿದ್ದಾರೆ. ಪೊಲೀಸರು ತಮ್ಮದೇ ವರಸೆಯಲ್ಲಿ ತನಿಖೆ ಆರಂಭಿಸುತ್ತಿದ್ದಂತೆ ಅಕ್ಸಿಡೆಂಟ್​ ದಿನ ಯಾರೆಲ್ಲಾ ತನ್ನ ಜೊತೆಗಿದ್ರು, ಮಲ್ಯ ಆಸ್ಪತ್ರೆಯಿಂದ ತಪ್ಪಿಸಿಕೊಳ್ಳಲು ಸಹಕಾರ ನೀಡಿದವರ ಹೆಸರನ್ನೂ ಗೀತವಿಷ್ಣು ಬಾಯ್ಬಿಟ್ಟಿದ್ದಾನೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.  ಇನ್ನೂ  ಮಲ್ಯ ಆಸ್ಪತ್ರೆ ಸಿಬ್ಬಂದಿಯನ್ನೂ  ವಿಚಾರಣೆಗೊಳಪಡಿಸಲಾಗಿದ್ದು, ಆಸ್ಪತ್ರೆಯಿಂದ ತಪ್ಪಿಸಿಕೊಳ್ಳಲು ಗೀತವಿಷ್ಣು ತಾಯಿ ತೇಜಸ್ವಿನಿ ಹಾಗೂ ತಂದೆ ಶ್ರೀನಿವಾಸ್​​ ಮೂರ್ತಿ ಸಹಕಾರ ನೀಡಿದ್ದಕ್ಕೆ ಸಾಕ್ಷ್ಯಗಳು ಲಭ್ಯವಾಗಿವೆ. ಜೊತೆಗೆ ತಪ್ಪಿಸಿಕೊಂಡ ನಂತರ ವಿಷ್ಣು ಅಕ್ಕ ತೇಜಸ್ವಿನಿ ಸಹಕಾರ ನೀಡಿದ್ದರು ಎನ್ನಲಾಗ್ತಿದೆ. ಈ ಹಿನ್ನೆಲೆಯಲ್ಲಿ ಇಡೀ ಕುಟುಂಬವನ್ನೇ ವಿಚಾರಣೆಗೆ ಒಳಪಡಿಸಲು ಮುಂದಾಗಿದ್ದು  ಈಗಾಗಲೇ ಸಹೋದರ ಆದಿನಾರಯಣ್​ಗೆ ನೋಟಿಸ್​ ನೀಡಿದ್ದಾರೆ.

ಅಪಘಾತ ಸಂದರ್ಭದಲ್ಲಿ ಗೀತವಿಷ್ಣು ಜೊತೆ ಕಾಣಿಸಿಕೊಂಡಿದ್ದ  ನಟ ದೇವೃಆಜ್ ಪುತ್ರ ಪ್ರಣಾಮ್​ ನನ್ನು ಸತತ ಮೂರನೇ ದಿನ ವಿಚಾರಣೆಗೆ ಒಳಪಡಿಸಲಾಯ್ತು.. ಈ ಮಧ್ಯೆ  ಪದೇ ಪದೇ ಮಗನ ವಿಚಾರಣೆಯಿಂದ ಬೇಸತ್ತ ನಟ ದೇವರಾಜ್​ ಸಿಸಿಬಿ ಜಂಟಿ ಆಯುಕ್ತ ಸತೀಶ್​ ಕುಮಾರ್​ ಅವರನ್ನು ಭೇಟಿ ಮಾಡಿ ತಮ್ಮ ಅಳಲು ತೋಡಿಕೊಂಡ್ರು. ಆದ್ರೆ, ಪ್ರಣಾಮ್​ನನ್ನು ಬಂಧಿಸುವುದಿಲ್ಲ ಎಂದು ಜಂಟಿ ಆಯುಕ್ತರು ದೇವರಾಜ್ ಸಮಾಧಾನಪಡಿಸಿ ಕಳುಹಿಸಿದ್ದಾರೆ. ಇನ್ನೂ ಗೀತವಿಷ್ಣು ಗನ್​ ಮ್ಯಾನ್​ ಆನಂದ್​ ತಪ್ಪಿಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಒಟ್ಟಾರೆ, ಹಣದ ಅಮಲಿನಲ್ಲಿ  ಕಾನೂನಿನ ಬಗ್ಗೆ ಅಗೌರವ ತೋರಿದವರಿಗೆ ಪೊಲೀಸರು ಕಾನೂನಿನ ಚುರುಕು ಮುಟ್ಟಿಸಲು ಪಣ ತೊಟ್ಟಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರು ಏರ್ಪೋರ್ಟ್ ಹೊಸ ಪಿಕ್‌ಅಪ್‌, ಪಾರ್ಕಿಂಗ್ ರೂಲ್ಸ್; ಪ್ರಯಾಣಿಕರ ಸಮಸ್ಯೆ 30 ದಿನಗಳೊಳಗೆ ನಿವಾರಣೆ
ಮಂಗಳೂರಿನಲ್ಲಿ ರಿಷಬ್ ಶೆಟ್ಟಿ ಹರಕೆ ನೇಮ ವಿವಾದ, ತಮ್ಮಣ್ಣ ಶೆಟ್ಟಿ ಎತ್ತಿದ ಹಲವು ಪ್ರಶ್ನೆಗಳಿವು