ಕಾಂಗ್ರೆಸ್'ಗೆ ಈ ಸ್ಥಿತಿ ಬರಬಾರದಿತ್ತು: ಜಮೀರ್'ರನ್ನು ಡಿಸಿಎಂ ಮಾಡಲಿ

Published : Oct 07, 2017, 10:37 PM ISTUpdated : Apr 11, 2018, 12:53 PM IST
ಕಾಂಗ್ರೆಸ್'ಗೆ ಈ ಸ್ಥಿತಿ ಬರಬಾರದಿತ್ತು: ಜಮೀರ್'ರನ್ನು ಡಿಸಿಎಂ ಮಾಡಲಿ

ಸಾರಾಂಶ

ರೈತನ ಮಗನಾಗಿ ನೈಸ್​ ವಿರುದ್ದದ ಹೋರಾಟ ಮುಂದುವರೆಸುವೆ. ನೈಸ್​ ಹಗರಣವನ್ನು ಸಿಬಿಐಗೆ ವಹಿಸಲಿ. ವೀರಾವೇಶದಿದ ಮಾತಾಡುತ್ತಿದ್ದ ಸಿಎಂ, ಕಂದಾಯ ಸಚಿವರು ನೈಸ್​ ವಿಚಾರದಲ್ಲಿ ಮೌನಕ್ಕೆ ಜಾರಿದ್ದಾರೆ.

ಹಾಸನ(ಅ.07): ಕಾಂಗ್ರೆಸ್​​ಗೆ ಈ ಸ್ಥಿತಿ ಬರಬಾರದಿತ್ತು, ಜಮೀರ್​ರನ್ನು ಡಿಸಿಎಂ ಮಾಡಲಿ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಲೇವಡಿ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹಮದ್ ರನ್ನು ಸಾಹೇಬ್ರೆ ಎಂದು ಗುಣಗಾನ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ನಡೆಗೆ ಮಾರ್ಮಿಕವಾಗಿ ನಕ್ಕ ಗೌಡರು, ಕಾಂಗ್ರೆಸ್ ಮೇಲೆತ್ತಲು ಜಮೀರ್ ಬೇಕಾಗಿದ್ದಾರೆ. 130 ವರ್ಷಗಳ ಇತಿಹಾಸ ಹೊಂದಿರುವ ಕಾಂಗ್ರೆಸ್ ನಲ್ಲಿರುವ ಯಾವುದೇ ಮುಸ್ಲಿಂ ನಾಯಕರು ಜಮೀರ್ ಗೆ ಸಮಾನರಿಲ್ಲವೇ? ಎಂದು ಪ್ರಶ್ನಿಸಿದ ಗೌಡರು, ಕುಮಾರಸ್ವಾಮಿ ಅವರನ್ನು ಮಂತ್ರಿ ಮಾಡಿದ್ದರು. ಕಾಂಗ್ರೆಸ್ ನವರು ಡಿಸಿಎಂ ಮಾಡಲಿ ಎಂದು ಛೇಡಿಸಿದರು.

ನೈಸ್ ಹಗರಣವನ್ನು ಸಿಬಿಐ'ಗೆ ವಹಿಸಲಿ

ರೈತನ ಮಗನಾಗಿ ನೈಸ್​ ವಿರುದ್ದದ ಹೋರಾಟ ಮುಂದುವರೆಸುವೆ. ನೈಸ್​ ಹಗರಣವನ್ನು ಸಿಬಿಐಗೆ ವಹಿಸಲಿ. ವೀರಾವೇಶದಿದ ಮಾತಾಡುತ್ತಿದ್ದ ಸಿಎಂ, ಕಂದಾಯ ಸಚಿವರು ನೈಸ್​ ವಿಚಾರದಲ್ಲಿ ಮೌನಕ್ಕೆ ಜಾರಿದ್ದಾರೆ. ಸೋನಿಯಾಗಾಂಧಿ ಅವರಿಗೆ ಪತ್ರ ಬರೆದು ಪ್ರಧಾನಿ ಅವರನ್ನು ಖುದ್ದು ಭೇಟಿ ಮಾಡಿ ಮನವರಿಕೆ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ' ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಚಾಮುಂಡೇಶ್ವರಿಗೆ ಜಿ.ಟಿ.ಯೇ ಅಭ್ಯರ್ಥಿ

ನಿನ್ನೆ ಜಿ.ಟಿ.ದೇವೇಗೌಡರು ಸಿಎಂ ವಿರುದ್ಧ ವೀರಾವೇಶದಿಂದ ಮಾತನಾಡಿದ್ದನ್ನು ನಾನು ಗಮನಿಸಿದ್ದೇನೆ. ಹೀಗೆ ಮಾತನಾಡಿದ್ದನ್ನು ಹಿಂದೆಂದೂ ನಾನು ನೋಡಿರಲಿಲ್ಲ. ಸೋಲು-ಗೆಲುವು ಆಮೇಲೆ. ನೂರಕ್ಕೆ ನೂರರಷ್ಟು ಚಾಮುಂಡಿ ಕ್ಷೇತ್ರಕ್ಕೆ ಜಿ ಟಿ ದೇವೇಗೌಡರೇ ನಮ್ಮ ಪಕ್ಷದ ಅಭ್ಯರ್ಥಿ ಎಂದು ಇದೇ ಸಂದರ್ಭದಲ್ಲಿ ಘೋಷಿಸಿದರು.

ಇದೇ ತಿಂಗಳ 11 ರಂದು ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ರಾಜ್ಯದ 224 ಕ್ಷೇತ್ರಗಳ ಆಕಾಂಕ್ಷಿತ ಅಭ್ಯರ್ಥಿಗಳ ಸಭೆ ಕರೆಯಲಾಗಿದೆ. ಅನಾರೋಗ್ಯದ ನಡುವೆಯೂ ಕುಮಾರಸ್ವಾಮಿ ಅವರೂ ಭಾಗಿಯಾಗಲಿದ್ದಾರೆ' ಎಂದು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತೀರ್ಥಹಳ್ಳಿಯ ವಿದ್ಯಾರ್ಥಿನಿಗೆ ಹೃದಯಾಘಾತ, ಶೃಂಗೇರಿ ಕಾಲೇಜು ಹಾಸ್ಟೆಲ್‌ನಲ್ಲಿ ಕುಸಿದು ಬಿದ್ದು ಸಾವು
ಪಿಯುಸಿ ಸರ್ಟಿಫಿಕೇಟ್ ಇದ್ದರೆ ಮಾತ್ರ ವಾಹನಕ್ಕೆ ಪೆಟ್ರೋಲ್ -ಡೀಸೆಲ್, ಡಿ.18ರಿಂದ ಹೊಸ ನಿಯಮ