ಯುವ ಸಮೂಹಕ್ಕೆ ಬೇಡ ಕ್ರಿಪ್ಟೋ ಸಹವಾಸ, ಟೀಂ ಇಂಡಿಯಾ ಮಾಡುತ್ತಾ ಪಾಕ್ ಪ್ರವಾಸ?ನ.18ರ ಟಾಪ್ 10 ಸುದ್ದಿ!

By Suvarna News  |  First Published Nov 18, 2021, 5:46 PM IST

ಕ್ರಿಪ್ಟೋ ಕರೆನ್ಸಿ ಬಳಕೆಯಿಂದ ಯವ ಜನಾಂಗ ದಾರಿ ತಪ್ಪಬಾರದು, ಎಚ್ಚರಿಕೆಯಿಂದರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮತ್ತೊಬ್ಬ ಶಂಕಿತ ಉಗ್ರನ ಬಂಧಿಸಲಾಗಿದೆ. ಸಾಯುವ ಮುನ್ನ ಹೇಳುವ ಕೊನೆಯ ಮಾತೇನು ಅನ್ನೋದು ಬಹಿರಂಗವಾಗಿದೆ. ಪಾಕಿಸ್ತಾನ ಪ್ರವಾಸ ಕುರಿತು ಕ್ರೀಡಾ ಸಚಿವರ ಮಾತು, ಎಣ್ಣೆ ಕುಡಿದು ಹೆಜ್ಜೆ ಹಾಕಿದ ರಚಿತಾ ಸೇರಿದಂತೆ ನವೆಂಬರ್ 18ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.


Cryptocurrency ಬಳಕೆಯಿಂದ ಯುವ ಸಮೂಹ ದಾರಿ ತಪ್ಪದಿರಲಿ : ಮೋದಿ ಎಚ್ಚರಿಕೆ!

Tap to resize

Latest Videos

 ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು, ನವೆಂಬರ್ 18 ರಂದು 'ಸಿಡ್ನಿ ಡೈಲಾಗ್' (Sydney Dialogue) ನಲ್ಲಿ ಮುಖ್ಯ ಭಾಷಣ ಮಾಡಿದ್ದಾರೆ. 'ಭಾರತದಲ್ಲಿ ತಂತ್ರಜ್ಞಾನ (Technology) ಅಭಿವೃದ್ಧಿ ಮತ್ತು ಕ್ರಾಂತಿ' ಎಂಬ ವಿಷಯದ ಕುರಿತು ಪ್ರಧಾನಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಸಾಯೋ ಮುನ್ನ ಕೊನೇ ಕ್ಷಣದಲ್ಲಿ ಜನರು ಏನು ಹೇಳ್ತಾರೆ? ನರ್ಸ್‌ ಬಿಚ್ಚಿಟ್ಟ ರಹಸ್ಯ!

ಲಾಸ್ ಏಂಜಲೀಸ್‌ನ ನೋಂದಾಯಿತ ನರ್ಸ್ ಜೂಲಿ ಮ್ಯಾಕ್‌ಫ್ಯಾಡೆನ್ (Julie McFadden) ಐದು ವರ್ಷಗಳಿಗೂ ಹೆಚ್ಚು ಕಾಲ ಧರ್ಮಶಾಲೆಯಲ್ಲಿ ಕೆಲಸ ಮಾಡಿದ್ದಾರೆ. ಆಗಾಗ ತನ್ನ ಅನುಭವಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ (Sovcial Media) ಹಂಚಿಕೊಳ್ಳುತ್ತಿರುತ್ತಾರೆ. 

Bengaluru ‘ಕುರಾನ್‌ ಸರ್ಕಲ್‌’ ಗ್ಯಾಂಗ್‌ನ ಮತ್ತೊಬ್ಬ ಶಂಕಿತ ಉಗ್ರ ಅರೆಸ್ಟ್

 ಮತ್ತೆ ಬೆಂಗಳೂರಿನಲ್ಲಿ (Bengaluru) ಉಗ್ರರ ಭೀತಿ ಕಾಡುತ್ತಿದೆ. ಯುವಕರನ್ನು ಐಸಿಸ್‌ಗೆ (ISIS ಕಳುಹಿಸುತ್ತಿದ್ದ ಕುರಾನ್‌ ಸರ್ಕಲ್‌ ಗ್ಯಾಂಗ್‌ನ ಮತ್ತೊಬ್ಬ ಶಂಕಿತ ಉಗ್ರನನ್ನು ರಾಷ್ಟ್ರೀಯ ತನಿಖಾ ದಳದ ಎನ್‌ಐಎ  ಅಧಿಕಾರಿಗಳು ಬಂಧಿಸಿದ್ದಾರೆ.

India Tour Pakistan ಪಾಕಿಸ್ತಾನಕ್ಕೆ ಹೋಗುವ ಬಗ್ಗೆ ಈಗಲೇ ನಿರ್ಧರಿಸಿಲ್ಲ: ಕ್ರೀಡಾ ಸಚಿವ ಅನುರಾಗ್ ಠಾಕೂರ್‌

 ಪಾಕಿಸ್ತಾನದಲ್ಲಿ ನಿಗದಿಯಾಗಿರುವ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯಲ್ಲಿ (ICC Champions Trophy 2025) ಭಾರತ ಪಾಲ್ಗೊಳ್ಳುವ ಬಗ್ಗೆ ಸಮಯ ಬಂದಾಗ ನಿರ್ಧರಿಸುತ್ತೇವೆ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ (Anurag Thakur) ಪ್ರತಿಕ್ರಿಯಿಸಿದ್ದಾರೆ.

Instagramಗೆ ಕಾಲಿಟ್ಟ ಅಶ್ವಿನಿ ಪುನೀತ್ ರಾಜ್‌ಕುಮಾರ್; ಅಭಿಮಾನಿಗಳು ಟ್ಯಾಗ್‌ ಮಾಡಿದ ಪೋಟೋಗಳಿವು!

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿಕೆಯಿ ನೋವಿನಲ್ಲಿರುವ ಕುಟುಂಬಸ್ಥರು ಪ್ರತಿ ಸಲವೂ ಮಾಧ್ಯಮದ ಎದುರು ಅಭಿಮಾನಿಗಳು ಮತ್ತು ಕರ್ನಾಟಕ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ. 

ಎಣ್ಣೆ ಕುಡಿದು ಹೆಜ್ಜೆ ಹಾಕಿದ ರಚಿತಾ ರಾಮ್ Viral Video!

ಜೋಗಿ ಪ್ರೇಮ್ ನಿರ್ದೇಶನ ಮಾಡಿರುವ ಏಕ್ ಲವ್ ಯಾ ಸಿನಿಮಾ ತಂಡ ಕೆಲವು ದಿನಗಳ ಹಿಂದೆ ಬ್ರೇಕಪ್ ಹಾಡೊಂದನ್ನು ಬಿಡುಗಡೆ ಮಾಡಿತ್ತು. ತೆಲುಗು ಗಾಯಕಿ ಮಂಗ್ಲಿ ಧ್ವನಿ ನೀಡಿರುವ ಈ ಹಾಡು ಯುಟ್ಯೂಬ್‌ನಲ್ಲಿ 4 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ನಟ ರಾಣಾ ಮತ್ತು ರಚಿತಾ ರಾಮ್ ಎಣ್ಣೆ ಸೇವಿಸಿ ಹೆಜ್ಜೆ ಹಾಕಿರುವ ವಿಡಿಯೋ ಇದಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

MLC Poll: ದೇವೇಗೌಡ್ರ ಮತ್ತೊಂದು ಕುಡಿ ರಾಜಕೀಯಕ್ಕೆ ಎಂಟ್ರಿ, ನಾಮಪತ್ರ ಸಲ್ಲಿಕೆಗೆ ಮುಹೂರ್ತ ಫಿಕ್ಸ್

 ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ಅವರ ಮತ್ತೊಂದು ಕುಡಿ ರಾಜಕೀಯಕ್ಕೆ ಎಂಟ್ರಿಕೊಟ್ಟಿದೆ. ಹಾಸನ (Hassan)ಸ್ಥಳೀಯ ಸಂಸ್ಥೆಗಳಿಂದ ನಡೆಯುವ ಚುನಾವಣೆಗೆ (MLC Election) ಜೆಡಿಎಸ್ ಅಭ್ಯರ್ಥಿಯಾಗಿ ಡಾ. ಸೂರಜ್ ರೇವಣ್ಣ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ.

MLC Election: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಫೈನಲ್..!

ರಾಜ್ಯದ 25 ವಿಧಾನ ಪರಷತ್ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದ್ದು, ರಾಜ್ಯ ರಾಜಕೀಯ ರಂಗೇರಿದೆ. ಈಗಾಗಲೇ ಬಿಜೆಪಿ ಪರಿಷತ್ ಫೈಟ್‌ಗೆ ರಂಗಪ್ರವೇಶ ಮಾಡಿದ್ದು, 20 ಅಭ್ಯರ್ಥಿಗಳ ಪಟ್ಟಿ ಸಿದ್ಧ ಮಾಡಿದೆ. 

click me!