
ನವದೆಹಲಿ(ಅ.20): ಇಡೀ ವಿಶ್ವ ನಡೆದ ಕಡೆ ನಾ ನಡೆಯುವುದಿಲ್ಲ ಎಂದು ನಿರ್ಧರಿಸಿದಂತಿದೆ ಟರ್ಕಿ. ಉತ್ತರ ಸಿರಿಯಾದ ಖುರ್ದಿಷ್ ನೆಲೆಗಳ ಮೇಲೆ ದಾಳಿ ಮಾಡಿ ಈಗಾಗಲೇ ವಿಶ್ವದ ಕಂಗೆಣ್ಣಿಗೆ ಗುರಿಯಾಗಿರುವ ಟರ್ಕ, ಇದೀಗ ಕಾಶ್ಮೀರ ವಿಚಾರದಲ್ಲಿ ಅನವಶ್ಯಕವಾಗಿ ಮೂಗು ತೂರಿಸಿದೆ.
ರಾತ್ರಿ ಹೇಳದೇ ಬರ್ತಿವಿ: ಟರ್ಕಿ ಅಧ್ಯಕ್ಷರ ಬೆದರಿಕೆ ಕೇಳಿ ಹೇಳ್ತಿವಿ!
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕಾಶ್ಮೀರ ವಿಚಾರವನ್ನು ಬಹಿರಂಗವಾಗಿ ಪ್ರಸ್ತಾಪಿಸಿದ್ದ ಟರ್ಕಿ ಅಧ್ಯಕ್ಷ ರೆಜೆಪ್ ತಾಯಿಪ್ ಎರ್ಡೋಗಾನ್, ಈ ವಿಚಾರದಲ್ಲಿ ಪಾಕಿಸ್ತಾನವನ್ನು ಬೆಂಬಲಿಸಿ ಇದೀಗ ಭಾರತದ ಕಂಗೆಣ್ಣಿಗೆ ಗುರಿಯಾಗಿದ್ದಾರೆ.
ಕಾಶ್ಮೀರ ವಿಚಾರವಾಗಿ ಟರ್ಕಿ ತನ್ನ ಬೆಂಬಲವನ್ನು ಪಾಕಿಸ್ತಾನಕ್ಕೆ ನೀಡಿದ್ದರಿಂದ ಕೋಪಗೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಈ ತಿಂಗಳಾಂತ್ಯಕ್ಕೆ ನಿಗದಿಯಾಗಿದ್ದ ತಮ್ಮ ಎರಡು ದಿನಗಳ ಟರ್ಕಿ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.
ಸಿರಿಯಾ ದಾಳಿ: ಟರ್ಕಿಗೆ ಬೆಂಬಲ ಸೂಚಿಸಿದ ಎಡಬಿಡಂಗಿ ಪಾಕಿಸ್ತಾನ!
ಪ್ರಧಾನಿ ಮೋದಿ ಇದೇ ಅಕ್ಟೋಬರ್ 27 ಮತ್ತು 28ರಂದು ಟರ್ಕಿ ಪ್ರವಾಸ ನಿಗದಿಯಾಗಿತ್ತು. ರಾಜಧಾನಿ ಅಂಕಾರಾದಲ್ಲಿ ಮೋದಿ ಹೂಡಿಕೆ ಸಮಾವೇಶದಲ್ಲಿ ಭಾಗಿಯಾಗಲಿದ್ದರು. ಆದರೆ ಟರ್ಕಿ ನಡೆಯಿಂದಾಗಿ ಇದೀಗ ತಮ್ಮ ಪ್ರವಾಸವನ್ನು ಪ್ರಧಾನಿ ಮೋದಿ ರದ್ದುಗೊಳಿಸಿದ್ದಾರೆ.
ಪ್ರಧಾನಿ ಮೋದಿ ಕಳೆದ ಬಾರಿ 2015ರಲ್ಲಿ ಜಿ20 ಶೃಂಗಸಭೆಯಲ್ಲಿ ಭಾಗವಹಿಸುವುದಕ್ಕಾಗಿ ಟರ್ಕಿ ಪ್ರವಾಸ ಕೈಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
ನಾಟ್ ಎ ಜೋಕ್: ಟ್ರಂಪ್ ಪತ್ರ ಹರಿದು ಡಸ್ಟ್‌ಬಿನ್‌ಗೆ ಎಸೆದ ಟರ್ಕಿ ಅಧ್ಯಕ್ಷ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.