ಗಡಿಯಲ್ಲಿ ಭಾರತೀಯ ಸೇನೆ ಕಾರ್ಯಾಚರಣೆ: PoKಯಲ್ಲಿದ್ದ ಉಗ್ರರ 4 ಕ್ಯಾಂಪ್ ಉಡೀಸ್‌!

Published : Oct 20, 2019, 01:33 PM ISTUpdated : Oct 20, 2019, 01:42 PM IST
ಗಡಿಯಲ್ಲಿ ಭಾರತೀಯ ಸೇನೆ ಕಾರ್ಯಾಚರಣೆ: PoKಯಲ್ಲಿದ್ದ ಉಗ್ರರ 4 ಕ್ಯಾಂಪ್ ಉಡೀಸ್‌!

ಸಾರಾಂಶ

ಉಗ್ರರ ಅಡಗುತಾಣಗಳನ್ನು ದ್ವಂಸಗೊಳಿಸಿದ ಸೇನೆ| ಪಾಕಿಸ್ತಾನದ ನಾಲ್ಕು ಉಗ್ರ ತಾಣಗಳು ಧ್ವಂಸ| ನೀಲಮ್ ಸೆಕ್ಟರ್ನಲ್ಲಿದ್ದ 4 ಉಗ್ರರ ತಾಣಗಳು| ಪಾಕ್ ದಾಳಿಗೆ ಹುತಾತ್ಮರಾಗಿದ್ದ ಇಬ್ಬರು ಯೋಧರು| ಪಾಕ್ ದಾಳಿಗೆ ಭಾರತೀಯ ಸೇನೆಯಿಂದ ಪ್ರತ್ಯುತ್ತರ| ಭಾರತ-ಪಾಕ್ ಗಡಿಯುದ್ಧಕ್ಕೂ ಗುಂಡಿನ ಮೊರೆತ

ಶ್ರೀನಗರ[ಅ.20]: ಭಾರತೀಯ ಸೇನೆಯು ನೀಲಮ್ ಸೆಕ್ಟರ್ನಲ್ಲಿದ್ದ 4 ಉಗ್ರರ ತಾಣಗಳನ್ನು ಧ್ವಂಸಗೊಳಿಸಿದೆ. ಈ ಮೂಲಕ ಭಾರತೀಯ ಗಡಿ ನುಸುಳಲು ಯತ್ನಿಸುತ್ತಿದ್ದ ಉಗ್ರರನ್ನು ಹಿಮ್ಮೆಟ್ಟಿಸಿದೆ. ಈ ಕಾರ್ಯಾಚರಣೆಯಲ್ಲಿ 4 ರಿಂದ ಪಾಕ್ ಸೈನಿಕರು ಮತ್ತು ಉಗ್ರರು ಹತರಾಗಿದ್ದು, ಭಾರತೀಯ ಸೇನೆಯ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ.

ಈ ಕಾರ್ಯಾಚರಣೆಗೆ ಭಾರತೀಯ ಸೇನೆಯು ಆರ್ಟಿಲರಿ ಗನ್ ಬಳಸಲಾಗಿದೆ. ದಾಳಿಯಲ್ಲಿ 4 ರಿಂದ 5 ಕ್ಯಾಂಪ್ ಗಳನ್ನು ಭಾರತೀಯ ಸೇನೆ ಧ್ವಂಸಗೊಳಿಸಿದೆ. ಇಈ ಕ್ಯಾಂಪ್ ಗಳಿಂದ ನಿರಂತರವಾಗಿ ಉಗ್ರರು ಭಾರತದ ಗಡಿ ನುಸುಳುತ್ತಿದ್ದರೆನ್ನಲಾಗಿದೆ. 

ಇನ್ನು ಈ ದಾಳಿಗೂ ಮುನ್ನ ಪಾಕಿಸ್ತಾನ ತಂಗಧಾರ ಸೆಕ್ಟರ್ ನಲ್ಲಿ ಕದನ ವಿರಾಮ ಉಲ್ಲಂಘಿಸಿದ್ದು, ಈ ವೇಳೆ ಇಬ್ಬರು ಭಾರತೀಯ ಯೋಧರು ಹುತಾತ್ಮರಾಗಿದ್ದರು. ಅಲ್ಲದೇ ಓರ್ವ ನಾಗರಿಕನೂ ಕೊನೆಯುಸಿರೆಳೆದಿದ್ದು, ಇಬ್ಬರು ಗಾಯಗೊಂಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗುಲಾಮಿ ಮನಃಸ್ಥಿತಿ ಬಿಡಲು 2035ರ ಗಡುವು : ಮೋದಿ
ಇಂಡಿಗೋ ವಿಮಾನ ರದ್ದತಿ ಕೊಂಚ ಸರಿ ದಾರಿಗೆ