ದೂರವಾದರೂ ಪರವಾಗಿಲ್ಲ, ಪಾಕ್ ವಾಯುನೆಲೆ ಪ್ರವೇಶಿಸಲ್ಲ ಮೋದಿ!

By Web DeskFirst Published Jun 12, 2019, 4:46 PM IST
Highlights

ಕಿರ್ಗಿಸ್ತಾನಕ್ಕೆ ತೆರಳಲು ಪಾಕ್ ವಾಯುನೆಲೆ ಮೂಲಕ ಹೋಗಲ್ಲ ಪ್ರಧಾನಿ ಮೋದಿ| ಭಾರತದ ಮನವಿಗೆ ಪಾಕ್ ಪ್ರಧಾನಿ ಮೋದಿಗೆ ವಾಯುನೆಲೆ ಪ್ರವೇಶಿಸಲು ಅವಕಾಶ ನೀಡಿತ್ತು| ಪಾಕ್ ಅವಕಾಶ ನೀಡಿದರೂ ಪಾಕ್ ವಾಯುನೆಲೆಗೆ ಹೋಗಲ್ಲ ಮೋದಿ

ನವದೆಹಲಿ[ಜೂ.12]: ಕಿರ್ಗಿಸ್ತಾನ ರಾಜಧಾನಿ ಬಿಷ್ಕೇಕ್‌ನಲ್ಲಿ ಜೂ.13 ಮತ್ತು 14ರಂದು ನಡೆಯಲಿರುವ ಶಾಂಘೈ ಸಹಕಾರ ಸಂಘಟನೆಯ ಶೃಂಗದಲ್ಲಿ ಪಾಲ್ಗೊಳ್ಳಲು ತೆರಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಪಾಕ್ ವಾಯುನೆಲೆ ಪ್ರವೆಶಿಸುತ್ತಿಲ್ಲ. ಈ ಮೂಲಕ ಕಿರ್ಗಿಸ್ತಾನಕ್ಕೆ ತೆರಳುವ ಹಾದಿ ದೂರವಾದರೂ ಪರವಾಗಿಲ್ಲ, ಆದರೆ ಪಾಕ್ ಮೂಲಕ ಹಾದು ಹೋಗಲು ನಿರಾಕರಿಸಿದ್ದಾರೆ.

ಏನಿದು ಪಾಕ್ ವಾಯುನೆಲೆ ವಿವಾದ?

ಭಾರತದ 40ಕ್ಕೂ ಹೆಚ್ಚು ಸಿಆರ್‌ಪಿಎಫ್‌ ಯೋಧರ ಬಲಿ ಪಡೆದ ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಪಡೆ ಪಾಕಿಸ್ತಾನದ ಬಾಲಾಕೋಟ್‌ ಮೇಲೆ ವೈಮಾನಿಕ ದಾಳಿ ನಡೆಸಿ ಜೈಷ್‌-ಎ-ಮೊಹಮ್ಮದ್‌ ಉಗ್ರರನ್ನು ಸಂಹಾರ ಮಾಡಿತ್ತು. ಇದರಿಂದ ಕ್ರುದ್ಧಗೊಂಡಿದ್ದ ಪಾಕಿಸ್ತಾನ, ಭಾರತದ ಯಾವುದೇ ವಿಮಾನಗಳನ್ನು ತನ್ನ ವಾಯುನೆಲೆಗೆ ಪ್ರವೇಶಿಸದಂತೆ ನಿರ್ಬಂಧ ಹೇರಿತ್ತು. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿಮಾನವು ಪಾಕಿಸ್ತಾನದ ವಾಯು ನೆಲೆ ಮೂಲಕ ಹಾದು ಹೋಗಲು ಅವಕಾಶ ಕಲ್ಪಿಸಬೇಕು ಎಂದು ಪಾಕಿಸ್ತಾನಕ್ಕೆ ಮನವಿ ಮಾಡಿಕೊಂಡಿರುವುದಾಗಿ ಅಧಿಕಾರಿ ತಿಳಿಸಿದ್ದರು.

13ರಂದು ಪಾಕಿಸ್ತಾನ ಮೇಲೆ ಮೋದಿ ವಿಮಾನ ಸಂಚಾರ?

ಭಾರತದ ಮನವಿ ಮೇರೆಗೆ ಪ್ರಧಾನಿ ಮೋದಿ ಪಾಕಿಸ್ತಾನ ವಾಯುನೆಲೆ ಮೂಲಕ ಹಾದುಹೋಗಲು ಅನುಮತಿ ನೀಡಲಾಗಿತ್ತು. ಈ ಪಾಕ್ ಮೂಲಕ ಕಿರ್ಗಿಸ್ತಾನಕ್ಕೆ ತೆರಳುವುದು ಅತಿ ಸುಲಭದ ಹಾದಿಯಾಗಿದ್ದು, ಸಮಯದ ಉಳಿತಾಯವೂ ಆಗುತ್ತದೆ.

MEA: Government of India had explored two options for the route to be taken by the VVIP Aircraft to Bishkek for the SCO Summit. A decision has now been taken that the VVIP Aircraft will fly via Oman, Iran and Central Asian countries on the way to Bishkek. pic.twitter.com/RKNJM8wrf7

— ANI (@ANI)

ಆದರೀಗ ಪ್ರಧಾನಿ ಮೋದಿ ಕಿರ್ಗಿಸ್ತಾನಕ್ಕೆ ತೆರಳುವ ದೂರವಾದರೂ ಪರವಾಗಿಲ್ಲ ಆದರೆ ಪಾಕ್ ವಾಯುನೆಲೆಗೆ ಹೋಗುವುದು ಬೇಡ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಈ ಕುರಿತಾಗಿ ಮಾಹಿತಿ ನೀಡಿರುವ ವಿದೇಶಾಂಗ ಇಲಾಖೆ ಪ್ರಧಾನಿ ಮೋದಿ ಓಮನ್, ಇರಾನ್ ಹಾಗೂ ಮಧ್ಯ ಏಷ್ಯಾ ಮೂಲಕ ಕಿರ್ಗಿಸ್ತಾನಕ್ಕೆ ತೆರಳಲಿದ್ದಾರೆ ಎಂದಿದೆ.

ಮೋದಿ ವಿಮಾನ ಪಾಕ್ ಪ್ರವೇಶಕ್ಕೆ ಅನುಮತಿ

click me!