
ಟೆಕ್ಸಾಸ್[ಜೂ.12]: ಅಮೆರಿಕಾದ ಟೆಕ್ಸಾಸ್ ನಲ್ಲಿ ವ್ಯಕ್ತಿಯೊಬ್ಬ ಆಕಾಶದಲ್ಲಿ ಮೂಡಿದ ಮಿಂಚಿನ ಮನಮೋಹಕ ದೃಶ್ಯವನ್ನು ಸ್ಲೋ ಮೋಷನ್ ನಲ್ಲಿ ಸೆರೆ ಹಿಡಿದಿದ್ದಾನೆ. ಸದ್ಯ ಅಂಬರದಲ್ಲಿ ಮೂಡಿದ ಮಿಂಚಿನ ನರ್ತನ ಭಾರೀ ವೈರಲ್ ಆಗುತ್ತಿದೆ.
ರಿಯಾನ್ ಬಿಲ್ವಿಸ್ಕೀ ಎಂಬಾತ ಈ ವಿಡಿಯೋವನ್ನು ಸೆರೆ ಹಿಡಿದಿದ್ದಾನೆ. ಸ್ಪೈಸ್ ವುಡ್ ನಲ್ಲಿ ಚಂಡಮಾರುತದಿಂದಾಗಿ ಮೂಡಿದ್ದ ಕರಿಮೋಡ ಆಸ್ಟಿನ್ ನೆಡೆ ತೇಲಿ ಹೋಗುತ್ತಿತ್ತು. ಈ ವೇಳೆ ಬಿಲ್ವಿಸ್ಕೀ ಮಿಂಚಿನ ಆಟವನ್ನು ತಮ್ಮ ಐಫೋನ್ ನಲ್ಲಿ ಈ ದೃಶ್ಯ ಸೆರೆ ಹಿಡಿದಿದ್ದಾರೆ.
ವೃತ್ತಿಪರ ಛಾಯಾಗ್ರಾಹಕ ಬಿಲ್ವಿಸ್ಕೀ ಈ ಕುರಿತಾಗಿ ಪ್ರತಿಕ್ರಿಯಿಸುತ್ತಾ 'ಭಾರೀ ಬಿರುಗಾಳಿಯಿಂದಾಗಿ ಅಪಾಯವುಂಟಾಗಬಹುದೆಂಬ ೆಚ್ಚರಿಕೆ ನಮಗೆ ನೀಡಲಾಗಿತ್ತು. ಮಿಂಚು, ಗುಡುಗು ಸಿಡಿಲು ಕೂಡಾ ಇತ್ತು. ಹೀಗಾಗಿ ನಾವಿದ್ಧ ಸ್ಥಳದಿಂದ ಸುರಕ್ಷಿತ ಪ್ರದೇಶಕ್ಕೆ ತೆರಳಲು ನಿರ್ಧರಿಸಿದೆವು,. ಈ ಮಧ್ಯೆ ಮಿಂಚಿನ ದೃಶ್ಯ ಸೆರೆ ಹಿಡಯುವ ಯೋಚನೆ ಹೊಳೆಯಿತು. ಕೂಡಲೇ ನನ್ನ ಐಫೋನ್ ನಲ್ಲಿ ಇದನ್ನು ಸೆರೆ ಹಿಡಿದೆ' ಎಂದಿದ್ದಾರೆ.
ಇದೊಂದು ಸ್ಲೋ ಮೋಷನ್ ವಿಡಿಯೋ ಆಗಿರುವುದರಿಂದ ಅತ್ಯಂತ ಸುಂದರವಾಗಿ ಮುಡಿ ಬಂದಿದೆ ಹಾಗೂ ಸೋಶಿಯಲ್ ಮೀಡಿಯಾದಲ್ಲೂ ಭಾರೀ ಪ್ರಶಂಸೆಗೆ ಪಾತ್ರವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.