ಸರ್ಕಾರಿ ನೌಕರರಿಗೆ ರಜೆ: ಅಧಿಕೃತ ಆದೇಶ ಹೊರಡಿಸಿದ ರಾಜ್ಯ ಸರ್ಕಾರ

By Web DeskFirst Published Jun 12, 2019, 4:28 PM IST
Highlights

ರಾಜ್ಯ ನೌಕರರ ರಜೆ ಕುರಿತಾದ ಅಧಿಕೃತ ಆದೇಶವನ್ನು ಕರ್ನಾಟಕ ಸರ್ಕಾರ ಹೊರಡಿಸಿದೆ. ಹಾಗಾದರೆ ಆದೇಶದ ಪ್ರತಿಯಲ್ಲೇನಿದೆ..? ಮುಂದೆ ನೋಡಿ.

ಬೆಂಗಳೂರು, (ಜೂನ್.12): ರಾಜ್ಯದ ಸರ್ಕಾರಿ ಕಚೇರಿಗಳಿಗೆ  4ನೇ ಶನಿವಾರ ಸಾರ್ವತ್ರಿಕ ರಜೆ ನೀಡಿ ಕರ್ನಾಟಕ ಸರ್ಕಾರ ಇಂದು (ಬುಧವಾರ) ಅಧಿಕೃತ ಆದೇಶ ಹೊರಡಿಸಿದೆ.

ಸರ್ಕಾರವು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಪ್ರತಿ ತಿಂಗಳು 4ನೇ ಶನಿವಾರವನ್ನು ಸರ್ಕಾರಿ ಕಚೇರಿಗಳಿಗೆ ಸಾರ್ವತ್ರಿಕ ರಜೆ ಎಂದು ಘೋಷಿಸಿದೆ.

ಜಯಂತಿಗಳ ಹಾಲಿಡೇಸ್ ಕೈಬಿಟ್ಟು ಮತ್ತೊಂದು ರಜೆ ಘೋಷಿಸಿದ ಸರ್ಕಾರ

ಪ್ರಸ್ತುತ ರಾಜ್ಯ ಸರ್ಕಾರಿ ನೌಕರರಿಗೆ ಇರುವ ಹದಿನೈದು ದಿವಸಗಳ ಸಾಂದರ್ಭಿಕ ರಜೆಯನ್ನು 10 ದಿವಸಗಳಿಗೆ ಇಳಿಸಲಾಗಿದೆ ಎಂದು ಅಧಿಸೂಚಿಸಿದೆ.

ಈ ಹಿಂದಿನ ಸಚಿವ ಸಂಪುಟದಲ್ಲಿ ನಾಲ್ಕನೇ ಶನಿವಾರ ರಜೆ ನೀಡುವ ಬಗ್ಗೆ ನಿರ್ಧರಿಸಿತ್ತು. ಅದರಂತೆ ಇಂದು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಇನ್ನು ವಾಲ್ಮೀಕಿ ಜಯಂತಿ, ಕನಕ ಜಯಂತಿ, ಬಸವ ಜಯಂತಿ, ಮಹಾವೀರ ಜಯಂತಿ, ಮಹಾಲಯ ಅಮಾವಾಸ್ಯೆ, ಈದ್​ವಿುಲಾದ್, ಕಾರ್ವಿುಕ ದಿನ, ಗುಡ್​ ಫ್ರೈಡೇ ಹಾಗೂ  ಕಾರ್ವಿುಕ ದಿನದ ರಜೆ ಮುಂದುವರೆಯಲಿದೆ.

click me!