ಸಮುದ್ರ ತಟಕ್ಕೆ ತೇಲಿ ಬಂತು ಭಾರೀ ಗಾತ್ರದ ವೇಲ್| ಪರೀಕ್ಷೆ ನಡೆಸಲು ಹೊಟ್ಟೆ ಸೀಳಿದಾಗ ವಿಜ್ಞಾನಿಗಳಿಗೇ ಶಾಕ್| ಮನುಷ್ಯನ ಸ್ವಾರ್ಥಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಾ?
ಮನಿಲಾ: ಫಿಲಿಪ್ಪೀನ್ಸ್ ಸಮುದ್ರ ಕಿನಾರೆಯಲ್ಲಿ ಮೃತ ತಿಮಿಂಗಿಲ ಪತ್ತೆಯಾಗಿದ್ದು, ಇದರ ಹೊಟ್ಟೆಯಲ್ಲಿ ಬರೋಬ್ಬರಿ 40 ಕಿಲೋ ಗ್ರಾಂನಷ್ಟು ಪ್ಲಾಸ್ಟಿಕ್ ಪತ್ತೆಯಾಗಿದೆ. 'ಗ್ಯಾಸ್ಟ್ರಿಕ್ ಶಾಕ್' ನಿಂದಾಗಿ ಈ ಮೀನು ಸತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ. ಸತ್ತು ದಡ ಸೇರಿರುವ ಈ ಬೃಹತ್ ಮೀನಿನ ಸಾವಿಗೆ ಕಾರಣವಾದ ಈ ಅಂಶ ವಿಜ್ಞಾನಿಗಳನ್ನೇ ಬೆಚ್ಚಿ ಬೀಳುವಂತೆ ಮಾಡಿದೆ.
ಮರ ಕಡಿಯಲು ಹೋದವರು ಪೂಜಿಸುತ್ತಾರೆ, ಪರಿಸರವಾದಿಯ ಈ ಐಡಿಯಾ ಕ್ಲಿಕ್
undefined
ಈ ಕುರಿತಾಗಿ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿರುವ ಡಿ ಬೆನ್ ಕಲೆಕ್ಟರ್ ಸಂಸ್ಥೆಯ ವಿಜ್ಞಾನಿಗಳು ಸತ್ತ ಮೀನಿನ ಶವ ಪರೀಕ್ಷೆ ನಡೆಸುತ್ತಿದ್ದ ವೇಳೆ 40 ಕೆಜಿ ಪ್ಲಾಸ್ಟಿಕ್ ಚೀಲಗಳು ಪತ್ತೆಯಾಗಿವೆ. ಇವುಗಳಲ್ಲಿ ಅಕ್ಕಿ ಹಾಗೂ ಹಣ್ಣುಗಳನ್ನು ತರುವ ಚೀಲ ಸೇರಿದಂತೆ ಶಾಪಿಂಗ್ ವೇಳೆ ಬಳಸುವ ಬ್ಯಾಗ್ ಗಳೂ ಪತ್ತೆಯಾಗಿವೆ' ಎಂದು ಬರೆದುಕೊಂಡಿದ್ದಾರೆ.
Thread: A Cuvier’s beaked was found on Saturday in the with 40kg of in its stomach! This is not the first case in the region - last June a was found stranded in after ingesting 80 . pic.twitter.com/gsXcD13DHS
— Marine Science (@Science4Marine)ಈ ಕುರಿತಾಗಿ ಪ್ರತಿಕ್ರಿಯಿಸಿರುವ ವಿಜ್ಞಾನಿಗಳು 'ಇದು ಅತ್ಯಂತ ಕ್ರೂರ ಘಟನೆಯಾಗಿದೆ. ಸರ್ಕಾರ ಈ ಬಗ್ಗೆ ತನಿಖೆ ನಡೆಸಿ ಜಲ ಮಾರ್ಗ ಹಾಗೂ ಸಮುದ್ರವನ್ನು ಕಸದ ತೊಟ್ಟಿಯಾಗಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು' ಎಂದಿದ್ದಾರೆ. ಆಗ್ನೇಯ ಏಷಿಯಾದಲ್ಲಿ ಅತಿ ಹೆಚ್ಚು ಪ್ಲಾಸ್ಟಿಕ್ ಬಳಕೆಯಾಗುತ್ತದೆ ಎಂಬುವುದು ಗಮನಾರ್ಹ.
ಹೆಚ್ಚುತ್ತಿರುವ ತಾಪಮಾನ: 2100ರಲ್ಲಿ ಎಷ್ಟು ಭಾರತೀಯರು ಸಾಯುತ್ತಾರೆ ಗೊತ್ತಾ?