ಪೆಟ್ರೋಲ್, ಡೀಸೆಲ್ ದುಬಾರಿ, ರಿವರ್ಸ್ ಕ್ವಾರಂಟೈನ್‌ಗೆ ತಯಾರಿ; ಜೂ.8ರ ಟಾಪ್ 10 ಸುದ್ದಿ!

By Suvarna News  |  First Published Jun 8, 2020, 4:47 PM IST

ಕರ್ನಾಟಕದಲ್ಲಿ ಕೊರೋನಾ ವೈರಸ್ ಹರಡುವುದನ್ನು ತಡೆಯಲು ರಾಜ್ಯ ಸರ್ಕಾರ ರಿವರ್ಸ್ ಕ್ವಾರಂಟೈನ್‌ಗೆ ತಯಾರಿ ಮಾಡಿದೆ. 7 ಜಿಲ್ಲೆಗಳಲ್ಲಿ ಭಾರಿ ಮಳೆಯಾಗವ ಮೂನ್ಸೂಚನೆ ಇದೆ. ಹೀಗಾಗಿ ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಇತ್ತ 80 ದಿನಗಳ ಬಳಿಕ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗಿದೆ. ಚಿರಂಜೀವಿ ಸರ್ಜಾ ನಿಧನದ ಶಾಕ್‌  ಅರಗಿಸಿಕೊಳ್ಳಲು ಸ್ಯಾಂಡಲ್‌ವುಡ್, ಕನ್ನಡಿಗರಿಗೆ ಸಾಧ್ಯವಾಗುತ್ತಿಲ್ಲ. ಸಿಎಂ ಕಾವೇರಿ ನಿವಾಸಕ್ಕೆ ಶ್ರೀ ಸಿದ್ಧಲಿಂಗಸ್ವಾಮಿ, ಬಿಎಸ್6 ವಾಹನಕ್ಕೆ ಗ್ರೀನ್ ಸ್ಟಿಕ್ಕರ್ ಕಡ್ಡಾಯ ಸೇರಿದಂತೆ ಜೂನ್ 8ರ ಟಾಪ್ 10 ಸುದ್ದಿ ಇಲ್ಲಿವೆ.


ಕೊರೋನಾ ತಡೆಗೆ ಕರ್ನಾಟಕದ ಸರ್ಕಾರದ ಮತ್ತೊಂದು ಹೆಜ್ಜೆ; ರಿವರ್ಸ್ ಕ್ವಾರಂಟೈನ್‌ಗೆ ತಯಾರಿ!...

Tap to resize

Latest Videos

 ಕೊರೋನಾ ವೈರಸ್ ಲಾಕ್‌ಡೌನ್ 4ನೇ ಹಂತ ಮುಗಿದೆ. ಇದೀಗ ಅನ್‌ಲಾಕ್ 1 ಜಾರಿಯಾಗಿದೆ. ಆರಂಭಿಕ 2 ಹಂತದ ಲಾಕ್‌ಡೌನ್‌ನಲ್ಲಿ ಮೆತ್ತಗಿದ್ದ ಕೊರೋನಾ ವೈರಸ್ ಇದೀಗ ಭಾರತದಲ್ಲಿ ಅಟ್ಟಹಾಸ ಮೆರೆಯುತ್ತಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಕರ್ನಾಟಕ ಸರ್ಕಾರ ಇದೀಗ ಹೊಸ ಸೂತ್ರಕ್ಕೆ ಮುಂದಾಗಿದೆ. ರಾಜ್ಯದಲ್ಲಿ ರಿವರ್ಸ್ ಕ್ವಾರಂಟೈನ್‌ಗೆ ಪ್ಲಾನ್ ಮಾಡಿದೆ.

7 ಜಿಲ್ಲೆಗಳಿಗೆ ಮಳೆ ಎಲ್ಲೋ ಅಲರ್ಟ್‌!...

ಮುಂದಿನ 24 ಗಂಟೆಯಲ್ಲಿ ಕರಾವಳಿಯ ಮೂರು ಜಿಲ್ಲೆ ಮತ್ತು ಮಲೆನಾಡು ಭಾಗದ ನಾಲ್ಕು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಈ ಏಳು ಜಿಲ್ಲೆಗೆ ಭಾರತೀಯ ಹವಾಮಾನ ಇಲಾಖೆ ‘ಎಲ್ಲೋ ಅಲರ್ಟ್‌’ಎಚ್ಚರಿಕೆ ನೀಡಿದೆ.

ಕೊರೋನಾ ಬ್ಲಂಡರ್‌: ತನಗೆ ತಾನೇ ಕ್ಲೀನ್‌ಚಿಟ್‌ ಕೊಟ್ಟುಕೊಂಡ ಚೀನಾ!.

ಕೊರೋನಾ ವೈರಸ್‌ ಕುರಿತು ಜಗತ್ತಿಗೆ ಮಾಹಿತಿ ನೀಡುವಲ್ಲಿ ತಡ ಮಾಡಿದೆ ಎಂದು ಎಲ್ಲ ದೇಶಗಳಿಂದ ಆಕ್ರೋಶ ಎದುರಿಸುತ್ತಿರುವ ಚೀನಾ, ಈ ವಿಷಯದಲ್ಲಿ ತಾನೇನೂ ತಪ್ಪು ಮಾಡಿಲ್ಲ ಎಂದು ಸ್ಪಷ್ಟನೆ ನೀಡುವ ಶ್ವೇತಪತ್ರವನ್ನು ಮೊದಲ ಬಾರಿ ಬಿಡುಗಡೆ ಮಾಡಿದೆ.

ಕೊನೆಗೂ ಟಿಕ್‌ ಟಾಕ್‌ ಖಾತೆ ತೆರೆದ ಕ್ಯಾಪ್ಟನ್ ವಿರಾಟ್‌ ಕೊಹ್ಲಿ?

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟಿಕ್‌ ಟಾಕ್ ಖಾತೆ ಓಪನ್ ಮಾಡಿದ್ರಾ ಎನ್ನುವ ಅನುಮಾನ ಶುರುವಾಗಿದೆ. ವಾರ್ನರ್ ಮಾಡಿದ ಕಾಮೆಂಟ್ ಈ ಅನುಮಾನ ಮತ್ತಷ್ಟು ಬಲಗೊಳ್ಳುವಂತೆ ಮಾಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ,

10 ವರ್ಷದ ಪ್ರೀತಿ; ಪತಿಯನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ಮೇಘನಾ ರಾಜ್!

10 ವರ್ಷಗಳ ಕಾಲ ಪ್ರೀತಿಸಿ, 2 ವರ್ಷಗಳ ಕಾಲ ವೈವಾಹಿಕ ಜೀವನ ನಡೆಸಿದ ಜೋಡಿ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್‌. ನಿನ್ನೆ ಪಕ್ಕದಲ್ಲಿ ಇದ್ದ ಪತಿ, ಇಂದು ಇಲ್ಲ ಎಂದು ಕಣ್ಣೀರಿಡುತ್ತಿರುವ ಗರ್ಭಿಣಿ ಮೇಘನಾ ರಾಜ್‌.

'ಮಾಮ ಬಂದಿದ್ದೀನಿ, ಕಣ್ಣು ಬಿಡೋ'; ಬಿಕ್ಕಿ ಬಿಕ್ಕಿ ಅತ್ತ ಅರ್ಜುನ್‌ ಸರ್ಜಾ!

22 ಕನ್ನಡ ಸಿನಿಮಾದಲ್ಲಿ ಅಭಿನಯಿಸಿದ್ದರೂ, ಯಾವುದೇ ಕಾಂಟ್ರವರ್ಸಿ ಇಲ್ಲದೆ, ಎಲ್ಲರೊಟ್ಟಿಗೆ ಆತ್ಮೀಯ ಬಾಂಧವ್ಯ ಹೊಂದಿದ್ದ ನಟ ಚಿರಂಜೀವಿ ಚಿರನಿದ್ರೆಗೆ ಜಾರಿರುವುದು ಇನ್ನೂ ಊಹಿಸಿಕೊಳ್ಳಲು ಅಸಾಧ್ಯವಾದ ವಿಚಾರ. ಚಿರು ನೋಡಲು ಬಂದು ಪ್ರೀತಿಯ ಮಾವ ಅರ್ಜುನ್‌ ಹೇಳಿದ ಮಾತುಗಳು ಎಲ್ಲರ ಕಣ್ಣಂಚಿನಲ್ಲೂ ನೀರು ತರಿಸುವಂತಿದೆ. .

ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರದ ನಂ.1 ನಾಯಕ...

ನರೇಂದ್ರ ಮೋದಿ ದೂರದರ್ಶತ್ವ, ಪರಿಪಕ್ವ ನಡೆಯಿಂದಾಗಿ ದೇಶದಲ್ಲಿ ಸಂಭವಿಸಬೇಕಿದ್ದ ಭಾರೀ ಅನಾಹುತ ತಪ್ಪಿದೆ| ತಮ್ಮ ನೈಪುಣ್ಯತೆಯಿಂದಲೇ ಇಂದು ಕೊರೊನಾ ನಿರ್ವಹಣೆ ಮಾಡಿದ ಪ್ರಪಂಚದ ನಂ. 1 ಪ್ರಧಾನಿ ಎಂಬ ಹೆಗ್ಗಳಿಕೆಗೆ ಸಹ ಪಾತ್ರರಾಗಿದ್ದಾರೆ: ಕೆ.ಸಿ. ಲೋಕೇಶ್‌|

80 ದಿನ ಬಳಿಕ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ!

ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ: 80 ದಿನ ಬಳಿಕ ಹೆಚ್ಚಳ| ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆ

BS6 ಎಮಿಶನ್ ಜೊತೆ ಮತ್ತೊಂದು ನಿಯಮ ಕಡ್ಡಾಯ ಮಾಡಿದ ಕೇಂದ್ರ ಸರ್ಕಾರ!

ಎಪ್ರಿಲ್ 2020ರಿಂದ ಭಾರತದಲ್ಲಿ BS6 ಎಮಿಶನ್ ನಿಯಮ ಜಾರಿಯಾಗಿದೆ.  ಇದೀಗ ಕೇಂದ್ರ ಸರ್ಕಾರ ಮತ್ತೊಂದು ನಿಯಮ ಕಡ್ಡಾಯಗೊಳಿಸಿದೆ. BS6 ವಾಹನಗಳಿಗೆ ಗ್ರೀನ್ ಸ್ಟಿಕ್ಕರ್ ಕಡ್ಡಾಯ ಮಾಡಿದೆ. ಏನಿದು ಗ್ರೀನ್ ಸ್ಟಿಕ್ಕರ್? ಇಲ್ಲಿದೆ ವಿವರ.

ಸಿಎಂ ಕಾವೇರಿ ನಿವಾಸಕ್ಕೆ ಶ್ರೀ ಸಿದ್ಧಲಿಂಗಸ್ವಾಮಿ, ಕರುವಿನ ಮೈದಡವಿದ ಶ್ರೀಗಳು!

ತುಮಕೂರಿನ ಸಿದ್ಧಗಂಗಾಮಠದ ಶ್ರೀ ಸಿದ್ಧಲಿಂಗಸ್ವಾಮಿ ಇಂದು ಸೋಮವಾರ ಬೆಳಗ್ಗೆ ಕಾವೇರಿ‌ ನಿವಾಸದಲ್ಲಿ ಸೌಹಾರ್ದಯುತವಾಗಿ ಭೇಟಿಯಾಗಿದ್ದಾರೆ. ಈ ವೇಳೆ ಶ್ರೀಗಳು ಸಿಎಂ ಕಾವೇರಿ ನಿವಾಸದಲ್ಲಿರುವ  ಕರುವನ್ನು ಮೈದಡವಿರುವ ಫೋಟೋಗಳು ವೈರಲ್ ಆಗಿವೆ.

click me!