
ಬೆಂಗಳೂರು (ಮೇ.10): ಸೋಶಿಯಲ್ ಮೀಡಿಯಾದಲ್ಲಿ ಭಿಕಾರಿ ಪಾಕಿಸ್ತಾನದ ಜನರ ಹಾವಳಿ ಎಷ್ಟಾಗಿದೆಯೆಂದರೆ, ಸುಮ್ಮನೆ ಎಕ್ಸ್‌ನಲ್ಲಿ ಟ್ರೋಲ್ ಮಾಡಿದ್ರೆ ಸಾಕು ಪಾಕಿಸ್ತಾನಿಯರ ಸಾಲು ಸಾಲು ಟ್ವೀಟ್‌ಗಳು ಬರಲು ಆರಂಭಿಸುತ್ತವೆ. ಎಲ್ಲವೂ ನೂರಕ್ಕೆ ನೂರು ಪಾಲು ಸುಳ್ಳು ಸುದ್ದಿಗಳೇ. ಹಾಗಂತ ಭಾರತೀಯರು ಏನೂ ಕಡಿಮೆ ಇಲ್ಲ. ಪಾಕಿಸ್ತಾನಿಯರು ಹಾಕುವ ಸಾಲು ಸಾಲು ಫೇಕ್ ಟ್ವೀಟ್‌ಗಳಿಗೆ, '@Grok ಪ್ಲೀಸ್ ವೆರಿಫೈ ದಿಸ್' ಎನ್ನುವುದನ್ನು ಬಿಟ್ಟು ಮತ್ಯಾವುದೇ ಕೆಲಸ ಮಾಡುತ್ತಿಲ್ಲ.
ಒಂದೆಡೆ ಪಾಕಿಸ್ತಾನಿಯರು ಹರಿಬಿಡುತ್ತಿರುವ ಫೇಕ್ ಸುದ್ದಿಗಳಿಗೆ ಲೆಕ್ಕವೇ ಇಲ್ಲ. ರಫೇಲ್ ಜೆಟ್‌ಅನ್ನು ಹೊಡೆದು ಹಾಕಿದ್ದೇವೆ ಅನ್ನೋದರಿಂದ ಹಿಡಿದು, ಭಾರತದ ಪೈಲಟ್ ಶಿವಾಂಗಿ ಸಿಂಗ್‌ರನ್ನು ಸೆರೆ ಹಿಡಿದಿದ್ದೇವೆ ಅನ್ನೋದರವರೆಗೆ ಎಲ್ಲವೂ ಸುಳ್ಳು ಸುದ್ದಿಗಳೇ. ಇದರ ನಡುವೆ ಪಾಕಿಸ್ತಾನಿಯೊಬ್ಬ ಮಾಡಿರುವ ಪೋಸ್ಟ್‌ವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಅದರಲ್ಲಿ ಆತ, 'ಪಾಕಿಸ್ತಾನದ ನೌಕಾಸೇನೆ ಬೆಂಗಳೂರು ಪೋರ್ಟ್‌ಅನ್ನು ಧ್ವಂಸ ಮಾಡಿದೆ..' ಎಂದು ಪಾಕಿಸ್ತಾನದ ಧ್ವಜದ ಇಮೋಜಿಯೊಂದಿಗೆ ಪೋಸ್ಟ್ ಮಾಡಿದ್ದಾನೆ.
ಇದಕ್ಕೆ ಬೆಂಗಳೂರಿಗರು ಸಖತ್ ತಮಾಷೆಯಾಗಿ ಕಾಮೆಂಟ್ ಮಾಡಿದ್ದು, ಯುದ್ಧದದ ಕಾರ್ಮೋಡದ ನಡುವೆಯೂ ಪರಿಸ್ಥಿತಿ ತಿಳಿಯಾಗಿದೆ. 'ಬೆಂಗಳೂರು ಬಂದರನ್ನು ನಾಶಪಡಿಸಿದ್ದಕ್ಕಾಗಿ ಪಾಕಿಸ್ತಾನಕ್ಕೆ ಅಭಿನಂದನೆಗಳು. ಭಾರತದ ಸಿಲ್ಕ್ ಬೋರ್ಡ್, ಟಿನ್ ಫ್ಯಾಕ್ಟರಿ, ಹೆಬ್ಬಾಳ, ಗೋರಗುಂಟೆಪಾಳ್ಯ, ಕೆಂಗೇರಿ ಮತ್ತು ವೈಟ್‌ಫೀಲ್ಡ್ ನೌಕಾ ನೆಲೆಗಳಲ್ಲಿನ ಸುಧಾರಿತ ರಕ್ಷಣಾ ಪ್ರತಿಬಂಧಕ ವ್ಯವಸ್ಥೆಗಳನ್ನು ಅವರು ಹೇಗೆ ಭೇದಿಸಿದ್ದಾರೆ ಎಂಬುದನ್ನು ನೋಡಿ ಇಡೀ ಜಗತ್ತು ಆಘಾತಕ್ಕೊಳಗಾಗಿದೆ. ಬೆಂಗಳೂರಿನಲ್ಲಿ ಸುರಕ್ಷಿತವಾಗಿರಿ' ಎಂದು ಟ್ವೀಟ್ ಮಾಡಿದ್ದಾರೆ.
'ಪಾಕಿಸ್ತಾನ ನಮ್ಮನ್ನು ಟಾರ್ಗೆಟ್ ಮಾಡುತ್ತದೆ ಎಂದು ಗೊತ್ತಾಗಿಯೇ ನಮ್ಮ ಡಿಸಿಎಂ ಸುರಂಗ ರಸ್ತೆಗೆ ಪ್ಲ್ಯಾನ್ ಮಾಡಿದ್ದಾರೆ' ಎಂದು ಮತ್ತೊಬ್ಬರು ಬರೆದಿದ್ದಾರೆ. 'ಪರಿಸ್ಥಿತಿ ಉದ್ವಿಗ್ನವಾಗಿದೆ, ಹಲಸೂರು ಸರೋವರದ ಬಳಿಯ ಬೆಂಗಳೂರು ಬಂದರು ನಾಶವಾಗಿದೆ! ಬೆಂಗಳೂರಿಗರು ನಡುಗುತ್ತಿದ್ದಾರೆ' ಎಂದು ತಮಾಷೆ ಮಾಡಿದ್ದಾರೆ. 'ನನ್ನ ಎಚ್‌ಆರ್‌ನಿಂದ ಒಂದು ಮೇಲ್ ಬಂತು. ಅದರಲ್ಲಿ ಅವರು "ಬೆಂಗಳೂರು ಬಂದರಿನ ನಾಶದ ಬಗ್ಗೆ ಕೇಳಿ ನಮಗೆ ಬೇಸರವಾಯಿತು. ಆದ್ದರಿಂದ, ವರ್ಕ್ ಫ್ರಂ ಹೋಮ್ ಕಂಟಿನ್ಯೂ ಮಾಡಿ' ಎಂದು ಬರೆದಿದ್ದಾರೆ.
'ಆಘಾತಕಾರಿ ಸುದ್ದಿ. ಪಾಟ್ನಾ ಬಂದರು ಮತ್ತು ಬೆಂಗಳೂರು ಬಂದರುಗಳನ್ನು ಪಾಕಿಸ್ತಾನ ನಾಶಪಡಿಸಿದೆ. ಪಾಟ್ನಾ ಸಮುದ್ರ ಮತ್ತು ಬೆಂಗಳೂರು ಸಮುದ್ರದ ಬಳಿ ವಾಸಿಸುವ ಜನರು ದಯವಿಟ್ಟು ಈ ಸುದ್ದಿಯನ್ನು ಪರಿಶೀಲನೆ ಮಾಡಿ. ಇದು ಬೆಂಗಳೂರಿನ ಕೋರಮಂಗಲ ಬೀಚ್ ಬಳಿಯ ಸಮುದ್ರ ಬಂದರು ಎಂದು ನಾನು ಭಾವಿಸುತ್ತೇನೆ. ಮೋದಿ ಈ ಕಾರಣಕ್ಕೆ ರಾಜೀನಾಮೆ ನೀಡಬೇಕು' ಎಂದು ಮತ್ತೊಬ್ಬರು ತಮಾಷೆ ಮಾಡಿದ್ದಾರೆ.
'ಪಾಕಿಸ್ತಾನದ ಕ್ಷಿಪಣಿಯು ವೃಷಭಾವತಿ ಸಮುದ್ರ ಬಳಿ ಇರುವ ಬೆಂಗಳೂರಿನ ಬಂದರಿಗೆ ತೀವ್ರವಾಗಿ ಅಪ್ಪಳಿಸಿದೆ ಮತ್ತು ಸಮುದ್ರದ ನೀರಿನಲ್ಲಿ ತೇಲುತ್ತಿರುವ ಅವಶೇಷಗಳನ್ನು ಕಾಣಬಹುದು' ಎಂದು ಬರೆದಿದ್ದಾರೆ.
'ಬೆಂಗಳೂರು ಬಂದರು ನಾಶವಾಗಿದೆ., ಕುಂದಲಹಳ್ಳಿ ಬಂದರು, ಹೆಬ್ಬಾಳ ಬಂದರು ಮತ್ತು ಸಿಲ್ಕ್ ಬೋರ್ಡ್ ಬಂದರು ಪಾಕಿಸ್ತಾನದ 7ನೇ ತಲೆಮಾರಿನ ಫೈಟರ್ ಜೆಟ್‌ಗಳಿಂದ ಸುರಕ್ಷಿತವಾಗಿವೆಯೇ ಎಂದು ಖಚಿತಪಡಿಸಿಕೊಳ್ಳಿ' ಎಂದು ಕಾಮೆಂಟ್ ಮಾಡಿದ್ದಾರೆ.
ದೇವರಿಗೆ ಧನ್ಯವಾದಗಳು! ಪಾಕಿಸ್ತಾನಿ-ಪ್ಯಾಲೆಸ್ಟೀನಿಯನ್ ಬೆಂಗಳೂರು ಬಂದರನ್ನು ನಾಶಮಾಡಿ ಸುರಂಗ ರಸ್ತೆಗೆ ದಾರಿ ಮಾಡಿಕೊಟ್ಟರು. ನೀವು ನಮ್ಮ ಮೂಲಸೌಕರ್ಯವನ್ನು ಒಂದು ದಶಕದ ಮುಂದೆ ಮುನ್ನಡೆಸಿದ್ದೀರಿ! ಎಂದು ಸಿಟಿಜನ್ ಮೂವ್‌ಮೆಂಟ್ ಟ್ವೀಟ್ ಮಾಡಿದೆ. 'ಇಂಥ ಕಠಿಣ ಸಮಯದಲ್ಲಿ ನಾನು ನೋಡಿದ ಅತ್ಯಂತ ತಮಾಷೆಯ ಟ್ವೀಟ್‌ಗಳಲ್ಲಿ ಇದು ಒಂದು' ಎಂದು ಬರೆದುಕೊಂಡಿದ್ದಾರೆ. 'ಅಯ್ಯೋ, ನಾವು ಇನ್ನು ಮುಂದೆ ಬೋಟ್ ಮೆಟ್ರೋವನ್ನು ಬಳಸಲು ಸಾಧ್ಯವೇ ಆಗೋದಿಲ್ಲ ಎಂದು ತಮಾಷೆ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.