ಪಂಜಾಬಿ ಹಾಡು ಗುನುಗಿದ ಪಾಕ್ ಯುವತಿಗೆ ಇದೆಂಥಾ ಶಿಕ್ಷೆ!

By Web DeskFirst Published Sep 4, 2018, 6:33 PM IST
Highlights

ಭಾರತಕ್ಕೆ ಸಂಬಂಧಿಸಿದ ಪಂಜಾಬಿ ಹಾಡೊಂದನ್ನು ಹಾಡಿದ್ದಕ್ಕೆ ಪಾಕಿಸ್ತಾನದ ವಿಮಾನ ನಿಲ್ದಾಣದ ಮಹಿಳಾ ಸಿಬ್ಬಂದಿಗೆ ಘೋರ ಶಿಕ್ಷೆ ನೀಡಲಾಗಿದೆ. ಅರೆ ಇದೇನಿದು ಸುದ್ದಿ ಅಂತೀರಾ ಮುಂದೆ ಓದಿ...!

ನವದೆಹಲಿ[ಸೆ.3]  ಪಾಕಿಸ್ತಾನದ ವಿಮಾನ ನಿಲ್ದಾಣವೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಪಂಜಾಬಿ ಹಾಡು ಗುನುಗಿದ್ದಕ್ಕೆ ದಂಡ ಕಟ್ಟುವ ಶಿಕ್ಷೆಗೆ ಗುರಿಯಾಗಿದ್ದಾರೆ. ಅಲ್ಲದೇ ಮುಂದಿನ ಎರಡು ವರ್ಷಗಳ ಕಾಲ ಆಕೆಗೆ ವೇತನ ಹೆಚ್ಚಳವೂ ಇಲ್ಲ ಎಂದು ಹೇಳಲಾಗಿದೆ.

25 ವರ್ಷದ  ಪಾಕಿಸ್ತಾನದ ಯುವತಿಯೊಬ್ಬಳು ಪಂಜಾಬಿ ಹಾಡು ಗುನುಗುತ್ತಿದ್ದುದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಹಾಡು ಹೇಳುವಾಗ ಆಕೆ ಪಾಕ್ ಆಡಳಿತಕ್ಕೆ ಸಂಬಂಧಿಸಿದ್ದ ಕ್ಯಾಪ್ ಧರಿಸಿದ್ದಳು. ಇದು ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿತ್ತು.

 

ಮುಂದೆ ಆಕೆ ಇಂಥಹ ದೇಶ ದ್ರೋಹದ ಕೆಲಸದಲ್ಲಿ ಭಾಗಿಯಾಗಬಾರದು ಎಂಬ ಕಾರಣಕ್ಕೆ ಈ ತೀರ್ಮಾನ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಉಳಿದ ಸಿಬ್ಬಂದಿಗೂ ಇನ್ನು ಮುಂದೆ ಇಂಥ ಕೆಲಸ ಮಾಡಬಾರದು ಎಂಬ ಸೂಚನೆಯನ್ನು ನೀಡಲಾಗಿದೆ. ಪಾಕ್ ಸುದ್ದಿ ವಾಹಿನಿಯೊಂದು ಮೊದಲಿಗೆ ಈ ಸುದ್ದಿ ಪ್ರಸಾರ ಮಾಡಿತ್ತು.

A female official of , deployed at landed into trouble after allegedly a video of her dancing on an Singer song has gone viral on . marked an inquiry into it: sources pic.twitter.com/vEoODHT28f

— Ravinder Singh Robin ਰਵਿੰਦਰ ਸਿੰਘ راویندرسنگھ روبن (@rsrobin1)
click me!