
ಕಾರಿನೊಳಗೆ ಸಲಿಂಗ ಕಾಮದಲ್ಲಿ ತೊಡಗಿದ್ದ ಇಬ್ಬರು ಮಹಿಳೆಯರಿಗೆ ಶಿಕ್ಷೆ ವಿಧಿಸಿರುವ ಧಾರ್ಮಿಕ ಕೋರ್ಟ್ ಅವರನ್ನು ಬೆತ್ತದಿಂದ ಥಳಿಸಿದೆ. 22 ಮತ್ತು 32 ವರ್ಷದ ಇಬ್ಬರು ಮಹಿಳೆಯರನ್ನು ಸಾರ್ವಜನಿಕ ಸ್ಥಳದಲ್ಲೇ ಥಳಿಸಲಾಗಿದೆ. ಇದು ಈ ಬಗೆಹಯ ಪ್ರ ಪ್ರಥಮ ಪ್ರಕರಣ ಆಗಿದೆ ಎಂದು ಅಲ್ಲಿನ ಮಾಧ್ಯುಮಗಳು ವರದಿ ಮಾಡಿವೆ.
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾನವ ಹಕ್ಕು ಹೋರಾಟಗಾರರು ಸಲಿಂಗ ಕಾಮ ಕಾನೂನು ಮತ್ತು ಧಾರ್ಮಿಕ ಎರಡು ನೆಲೆಗಟ್ಟಿನಲ್ಲಿ ಅಪರಾಧವಾಗುತ್ತದೆ ಎಂದು ಹೇಳಿದ್ದಾರೆ.
ಸಾರ್ವಜನಿಕ ಸ್ಥಳದಲ್ಲಿ ಸುಮಾರು ನೂರು ಜನರ ಎದುರಿಗೆ ಮಹಿಳೆಯರನ್ನು ಥಳಿಸಲಾಗಿದೆ. ಮಲೆಷಿಯಾದಲ್ಲಿ ಎರಡು ಹಂತದ ಕಾನೂನು ವ್ಯವಸ್ಥೆ ಇದೆ. ಧಾರ್ಮಿಕ ಕಾನೂನುಗಳನ್ನು ಆಯಾ ಧರ್ಮಗಳಿಗೆ ಅನುಗುಣವಾಗಿ ಮಾಡಿಕೊಳ್ಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ