ಅನಾಥ ಶವಗಳ ಬಂಧುಗಳು ಇವರು : ಅಸಮಾನ್ಯ ಕನ್ನಡಿಗ

By Suvarna Web deskFirst Published Oct 27, 2016, 4:52 PM IST
Highlights

ತುಂಗ`ಭದ್ರಾನದಿಯ 250 ಕಿಲೋಮೀಟರ್ನದಿವ್ಯಾಪ್ತಿಯಲ್ಲಿಎಲ್ಲೇಹೆಣಕಾಣಿಸಲಿಪೊಲೀಸರುಹಾಗೂಜನರುತಕ್ಷಣದಾವಣಗೆರೆಯತಂಡವೊಂದಕ್ಕೆಫೋನ್ಮಾಡುತ್ತಾರೆ. ಅಹಮದ್ಖಾನ್ಮತ್ತುದಾದಾಪೀರ್ನೇತೃತ್ವದತಂಡಅದೆಂತಹನಿಸ್ವಾರ್ಥಸೇವೆಸಲ್ಲಿಸುತ್ತಿದೆಎಂದರೆ, ತಮ್ಮಜೀವವನ್ನುಪಣಕ್ಕಿಟ್ಟುನದಿಯಲ್ಲಿಮುಳುಗಿರುವಶವಗಳನ್ನುಹುಡುಕಿತೆಗೆದುಕೊಡುತ್ತಾರೆ.

ಅನಾಥ ಶವಗಳನ್ನು ಸಾಗಿಸುವ ನಿಸ್ವಾರ್ಥ ಸೇವಕರನ್ನು ನೋಡಿದ್ದೇವೆ. ಕೇಳಿದ್ದೇವೆ. ಅನಾಥರ ಶವಗಳಿಗೆ ಅಂತ್ಯ ಸಂಸ್ಕಾರ ಮಾಡುವವರ ಬಗ್ಗೆಯೂ ಓದಿದ್ದೇವೆ. ಆದರೆ, ದಾವಣಗೆರೆ ಜಿಲ್ಲೆಯ ಹರಿಹರದಲ್ಲೊಂದು ವಿಶಿಷ್ಟ ತಂಡವಿದೆ. ಈ ತಂಡ ತಮ್ಮ ಜೀವವನ್ನೇ ಪಣಕ್ಕಿಟ್ಟು ಹೆಣಗಳನ್ನು ಹುಡುಕಿ ತಂದು ಕೊಡುವ ಸೇವೆ ಸಲ್ಲಿಸುತ್ತಿದೆ. ಅತ್ಯಂತ ನಿಸ್ವಾರ್ಥದಿಂದ ಈ ತಂಡ ಕೆಲಸ ಮಾಡುತ್ತಿದೆ.

ತುಂಗ`ಭದ್ರಾ ನದಿಯ 250 ಕಿಲೋ ಮೀಟರ್ ನದಿ ವ್ಯಾಪ್ತಿಯಲ್ಲಿ ಎಲ್ಲೇ ಹೆಣ ಕಾಣಿಸಲಿ ಪೊಲೀಸರು ಹಾಗೂ ಜನರು ತಕ್ಷಣ ದಾವಣಗೆರೆಯ ತಂಡವೊಂದಕ್ಕೆ  ಫೋನ್ ಮಾಡುತ್ತಾರೆ. ಅಹಮದ್ ಖಾನ್ ಮತ್ತು ದಾದಾಪೀರ್ ನೇತೃತ್ವದ ತಂಡ ಅದೆಂತಹ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದೆ ಎಂದರೆ, ತಮ್ಮ ಜೀವವನ್ನು ಪಣಕ್ಕಿಟ್ಟು ನದಿಯಲ್ಲಿ ಮುಳುಗಿರುವ ಶವಗಳನ್ನು ಹುಡುಕಿ ತೆಗೆದುಕೊಡುತ್ತಾರೆ. ಹಣ ಕೊಟ್ಟರೆ ಪಡೆಯುತ್ತಾರೆ, ಇಲ್ಲವಾದಲ್ಲಿ ಆ ಶವದ ಬಂ`ಧುಗಳ ಹಾರೈಕೆಗೆ ನಮಗೆ ಶ್ರೀರಕ್ಷೆ ಎಂದುಕೊಂಡು ಸುಮ್ಮನಾಗಿಬಿಡುತ್ತಾರೆ.

ಹರಿಹರದ ಅಹಮದ್ ಖಾನ್ ಮತ್ತು ದಾದಾಪೀರ್ ತಂಡ ಈಜಿನಲ್ಲಿ ಅದೆಷ್ಟು ಪರಿಣತಿ ಹೊಂದಿದ್ದಾರೆಂದರೆ, ಶವ ಎಷ್ಟೇ ಆಳದಲ್ಲಿರಲಿ, ಎಂತಹ ಕೊಳಕು ನೀರಿನಲ್ಲೇ ಇರಲಿ, ಸುಳಿ ಇರುವ ನದಿಯೇ ಇರಲಿ, ಕಲ್ಲು ಬಂಡೆಗಳೇ ಇರಲಿ ಮುಳುಗಿ ಶವ ಹುಡುಕಿ ತಂದು ಬಿಡುತ್ತಾರೆ. ಆದ್ದರಿಂದ ಪೊಲೀಸರು ಯಾವುದೇ ಆತ್ಮಹತ್ಯೆ ಕೇಸು, ಕೊಲೆ ಕೇಸುಗಳಿದ್ದರೂ ಇವರನ್ನೇ ಕರೆಸುತ್ತಾರೆ. ಒಂದೇ ದಿನ ಅನೇಕ ಕಡೆ ನದಿಯಲ್ಲಿ ಹೆಣಗಳಿರುವ ಪ್ರಕರಣಗಳು ಹೆಚ್ಚಾದಂತೆ ದಾದಾಪೀರ್ ಮತ್ತು ಅಹಮದ್ ಖಾನ್ ಸೇರಿ ತಂಡವನ್ನೇ ಕಟ್ಟಿಕೊಂಡರು. ಈಗ ಶಿವಮೊಗ್ಗ, ದಾವಣಗೆರೆ, ಹಾವೇರಿವರೆಗೂ ತುಂಗ`ಭದ್ರಾ ನದಿಯಲ್ಲಿ ಯಾವುದೇ ಪ್ರಕರಣ ನಡೆದರೂ ಈ ತಂಡಕ್ಕೆ ಬುಲಾವ್ ಬರುತ್ತದೆ.

ಹರಿಹರ ಪಟ್ಟಣದ ನಾಡಬಂದ್ ಶಾವಲಿ ದರ್ಗಾದ ಬಳಿ ಸಣ್ಣ ಮನೆಯಲ್ಲಿ ವಾಸಿಸುವ ಈ ತಂಡದ ಸದಸ್ಯರು ಚಿತ್ರದುರ್ಗದ ಹೊಂಡಕ್ಕೆ ಬಸ್ ಬಿದ್ದ ಪ್ರಕರಣದಿಂದ ಹಿಡಿದು ಗಣಪತಿ ವಿಸರ್ಜನೆಗೆ ಹೋಗಿ ತೆಪ್ಪ ಮುಳುಗಿ 12 ಮಂದಿ ಮೃತಪಟ್ಟ ಪ್ರಕರಣದವರೆಗೂ ಅನೇಕ ಸನ್ನಿವೇಶಗಳಲ್ಲಿ ಜೀವದ ಹಂಗು ತೊರೆದು ಹೆಣಗಳನ್ನು ನದಿಯಿಂದ ಹೊರಗೆ ತೆಗೆದಿದ್ದಾರೆ. ಅಂದಾಜಿನ ಪ್ರಕಾರ 1996 ರಿಂದ ಈವರೆಗೆ ಸುಮಾರು 6 ಸಾವಿರಕ್ಕೂ ಹೆಚ್ಚು ಶವಗಳನ್ನು ನೀರಿನಿಂದ ಹೊರತೆಗೆದಿದ್ದಾರೆ. ಅನೇಕ ಸಂದರ್`ದಲ್ಲಿ ಅನಾಥ ಶವಗಳಿಗೆ ಅಂತ್ಯಸಂಸ್ಕಾರವನ್ನೂ ಇವರೇ ಮಾಡಿದ್ದಾರೆ.

ಈ `ಜಾಗದ ಶವಗಳ ಬಂಧು ಎಂತಲೇ ಜನರು ಈ ತಂಡವನ್ನು ಕರೆಯುತ್ತಾರೆ. ನಿಸ್ವಾರ್ಥ ಸೇವೆ ಸಲ್ಲಿಸುವ ಈ ತಂಡದ ಸದಸ್ಯರ ಸಂಖ್ಯೆ ಹೆಚ್ಚಲಿ. ಪಡುವ ಶ್ರಮಕ್ಕೆ ತಕ್ಕ ಪ್ರತಿಸಲವೂ ಸಿಗಲಿ.

click me!