ಮೊಬೈಲ್ ಜೊತೆಗೆ ಈರುಳ್ಳಿ ಉಚಿತ, GST ಏರಿಕೆಗೆ ಕೇಂದ್ರದ ಚಿತ್ತ; ಡಿ.08ರ ಟಾಪ್ 10 ಸುದ್ದಿ!

By Web Desk  |  First Published Dec 8, 2019, 5:09 PM IST

ಹೆಚ್ಚಿನವರು ಯಾರೂ ಕೂಡ ಈರುಳ್ಳಿ ಇಲ್ಲದೆ ಅಡುಗೆ ಮಾಡುತ್ತಿದ್ದಾರೆ. ಈರುಳ್ಳಿಗೆ ಚಿನ್ನದ ಬೆಲೆ. ಜನಸಾಮಾನ್ಯರ ಕೈಗೆ ಎಟಕುತ್ತಿಲ್ಲ. ಹೀಗುರವಾಗಿ ಮೊಬೈಲ್ ಶಾಪ್‌ನಲ್ಲಿ ಭರ್ಜರಿ ಆಫರ್ ನೀಡಲಾಗಿದೆ. ಮೊಬೈಲ್ ಖರೀದಿಸಿದರೆ 1 ಕೆಜಿ ಈರುಳ್ಳಿ ಉಚಿತ ಕೊಡುಗೆ ನೀಡಲಾಗಿದೆ. ದಿನಬಳಕೆ ವಸ್ತುಗಳ ಬೆಲೆ ಏರಿಕೆ, ಆರ್ಥಿಕ ಹಿಂಜರಿತ ಸರಿದೂಗಿಸಲು ಕೇಂದ್ರ ಸರ್ಕಾರ GST ದರ ಏರಿಕೆಗೆ ಮುಂದಾಗಿದೆ. ಬಾಲಿವುಡ್ ಆಫರ್ ತಿರಸ್ಕರಿಸಿದ ರಶ್ಮಿಕಾ, ಐಪಿಎಲ್ ತಲುಪಿತು ಕೆಪಿಎಲ್ ಫಿಕ್ಸಿಂಗ್ ತನಿಖೆ ಸೇರಿದಂತೆ ಡಿಸೆಂಬರ್ 8ರ ಟಾಪ್ 10 ಸುದ್ದಿ ಇಲ್ಲಿವೆ.


1) 85 ಲಕ್ಷ ಮೊತ್ತದ ಬಾಳೆಹಣ್ಣು ನಿಮಿಷದಲ್ಲಿ ಸ್ವಾಹಾ ಮಾಡಿದ!

Tap to resize

Latest Videos

undefined

ಇಟಲಿಯ ಅತ್ಯಂತ ಫೇಮಸ್ ಆರ್ಟಿಸ್ಟ್ ಮ್ಯಾರಿಜಿಯೋ ಬಾಳೆಹಣ್ಣೊಂದನ್ನು ಟೇಪ್ ಮೂಲಕ ಗೊಡೆಗೆ ಅಂಟಿಸಿದ್ದರು.  ಇದರ ಬೆಲೆ ಬರೋಬ್ಬರಿ 85 ಲಕ್ಷ ರೂಪಾಯಿ ನಿಗದಿಯಾಗಿತ್ತು. ಫ್ರಾನ್ಸ್ ನ ವ್ಯಕ್ತಿಯೊಬ್ಬ ಇದನ್ನು ಖರೀದಿಸಿದ್ದು, ವಿಶ್ವದ ಮೂಲೆ ಮೂಲೆಯಿಂದ ಜನರು ಇದನ್ನು ನೋಡಲು ಬರುತ್ತಿದ್ದರು. ಆದರೆ ಈ ನಡುವೆ ಕಲಾಕೃತಿಗಳನ್ನು ವೀಕ್ಷಿಸಲು ಬಂದಿದ್ದ ವ್ಯಕ್ತಿಯೊಬ್ಬ ಅಂಟಿಸಿಟ್ಟಿದ್ದ ಬಾಳೆಹಣ್ಣನ್ನು ತೆಗೆದು ತಿಂದಿದ್ದಾನೆ. 

2) ಇಲ್ಲಿ ಮೊಬೈಲ್ ಖರೀದಿಸಿದ್ರೆ 1KG ಈರುಳ್ಳಿ ಉಚಿತ!: ಮುಗಿಬಿದ್ದ ಗ್ರಾಹಕರು!

ಈರುಳ್ಳಿ ಬೆಲೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಜನರ ಕಣ್ಣಲ್ಲಿ ನೀರು ತರಿಸುತ್ತಿದೆ. ಹೀಗಿರುವಾಗ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಅಡುಗೆ ಮನೆಗೆ ಈರುಳ್ಳಿ ಹಾಗೂ ಬೆಳ್ಳುಳ್ಳಿಗೆ ಎಂಟ್ರಿ ಇಲ್ಲ ಎಂದಿದ್ದಾರೆ. ಹೀಗಿರುವಾಗ ಇಲ್ಲೊಂದು ಶಾಪ್ ಮೊಬೈಲ್ ಖರೀದಿಸುವವರಿಗೆ 1ಕೆಜಿ ಈರುಳ್ಳಿ ಉಚಿತ ಎಂಬ ಆಫರ್ ಬಿಡುಗಡೆ ಮಾಡಿದೆ.

3) ಮೋದಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿದ್ದು ಹೇಗೆ?

1977 ರಲ್ಲಿ ರಾಜನಾಥ್‌ ಸಿಂಗ್‌ ಮಿರ್ಜಾಪುರ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್‌ ಪಡೆದಿದ್ದರು. ಆದರೆ ಚುನಾವಣೆಗೂ ಮುನ್ನ ಜನಸಂಘ ಮತ್ತು ಲೋಕ ದಳದ ನಡುವೆ ಒಪ್ಪಂದವಾಯಿತು. ನಾಮಪತ್ರ ವಾಪಸ್‌ ಪಡೆಯಲೂ ಸಾಧ್ಯವಾಗಲಿಲ್ಲ. ಆಗ ಸಿಂಗ್‌ ಪಕ್ಷದ ಪರ ನಿಂತು, ‘ನನಗೆ ಒಂದೇ ಒಂದು ಮತ ಬಿದ್ದರೂ ಅದು ನನಗೆ ಮಾಡುವ ಅವಮಾನ’ ಎಂದು ಬೆಂಬಲಿಗರಲ್ಲಿ ಕೋರಿಕೊಂಡಿದ್ದರು!

4) ಗಲ್ಲು ಶಿಕ್ಷೆ ತಪ್ಪಿಸಿಕೊಳ್ಳಲು ನಿರ್ಭಯಾ ದೋಷಿ ಹೊಸ ತಂತ್ರ?

ಗಲ್ಲು ಶಿಕ್ಷೆ ತಪ್ಪಿಸಿಕೊಳ್ಳಲು ನಿರ್ಭಯಾ ದೋಷಿ ವಿನಯ್‌ ಶರ್ಮಾ ಹೊಸ ತಂತ್ರ ಮಾಡಿರುವ ಅನುಮಾನ ಮೂಡುತ್ತಿದೆ. ಕ್ಷಮಾದಾನ ಕೋರಿಲ್ಲ ಎಂದು ರಾಷ್ಟ್ರಪತಿಗೆ ನಿರ್ಭಯಾ ರೇಪ್‌ ದೋಷಿ ಪತ್ರ ಬರೆದಿದ್ದಾರೆ. ಕ್ಷಮಾದಾನ ಅರ್ಜಿ ವಾಪಾಸ್ ಮಾಡಿ ಎಂದು ಕೋರಿದ್ದಾನೆ.


5) KPL ಫಿಕ್ಸಿಂಗ್‌ನಲ್ಲಿ IPL ನಂಟು; ತನಿಖೆಗೆ ಮುಂದಾದ ಸಿಸಿಬಿ!

ಕರ್ನಾಟಕ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿನ  ಫಿಕ್ಸಿಂಗ್ ಪ್ರಕರಣ ತೀವ್ರತೆ ಹೆಚ್ಚಾಗುತ್ತಿದೆ. ಫಿಕ್ಸಿಂಗ್ ನಂಟು ಗಡಿ ದಾಟುತ್ತಿದೆ. ಕೆಪಿಎಲ್ ಫಿಕ್ಸಿಂಗ್ ತನಿಖೆ ಮಾಡುತ್ತಿರುವ ಸಿಸಿಬಿ ಪೊಲೀಸರು IPL ಟೂರ್ನಿ ಮೇಲೆ ಅನುಮಾನ ವ್ಯಕ್ತಪಡಿಸಿದ್ದು, ತನಿಖೆಗೆ ಮುಂದಾಗಿದ್ದಾರೆ.

6) ರಶ್ಮಿಕಾ ಬಾಲಿವುಡ್ ಸಿನಿಮಾ ರಿಜೆಕ್ಟ್‌ ಮಾಡಲು ಇದೇ ಕಾರಣ!

ಕಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡಿದ 'ಜರ್ಸಿ' ಸಿನಿಮಾವನ್ನು ಹಿಂದಿಯಲ್ಲಿ ರಿಮೇಕ್‌ ಮಾಡಲು ನಿರ್ಧರಿಸಿದ್ದಾಗ ನಟನಾಗಿ ಶಾಹಿದ್ ಕಪೂರ್ ಹಾಗೂ  ನಟಿಯಾಗಿ ರಶ್ಮಿಕಾ ಮಂದಣ್ಣ ಆಯ್ಕೆ ಆಗಿದ್ದರು. ಆದರೆ ಕಾರಣಾಂತರಗಳಿಂದ ಸಿನಿಮಾ ಮಾಡಲಾರೆ ಎಂದು ರಶ್ಮಿಕಾ ಕೈ ಬಿಟ್ಟರು. ಇದೀಗ ಕಾರಣ ಬಹಿರಂಗ ಪಡಿಸಿದ್ದಾರೆ. 

7) ಮಗನಿಗೆ ಲವ್ವೇ ಆಗಿಲ್ವಂತೆ; ಹುಡುಗಿ ಹುಡುಕ್ತಿದ್ದಾರೆ ರವಿಚಂದ್ರನ್!

ಸ್ಯಾಂಡಲ್‌ವುಡ್ ಕ್ರೇಜಿ ಸ್ಟಾರ್ ಪುತ್ರ ಮನೋರಂಜನ್ ರವಿಚಂದ್ರನ್ ದುಬಾರಿ ಬೈಕ್, ಕಾರ್ ಅಥವಾ ಸಿನಿಮಾ ಮೂಲಕ ಒಂದಲ್ಲಾ ಒಂದು ರೀತಿಯಲ್ಲಿ ಸುದ್ದಿಯಲ್ಲಿ ಇರುತ್ತಾರೆ. ಆದರೆ ಇದೇ ಮೊದಲ ಬಾರಿ ಮದುವೆ ಬಗ್ಗೆ ಮಾತನಾಡಿದ್ದಾರೆ.

8) ಉಪ ಚುನಾವಣೆ ಬೆನ್ನಲ್ಲೇ ನನಗೂ ಸಚಿವ ಸ್ಥಾನ ಬೇಕು ಎಂದ ಬಿಜೆಪಿ ಶಾಸಕ

ಉಪ ಚುನಾವಣೆಯ ನಂತರ ಸಚಿವ ಸಂಪುಟ ರಚನೆ ವೇಳೆ, ಸಚಿವ ಸ್ಥಾನಕ್ಕೆ ತಾವೂ ಕೂಡಾ ಪ್ರಬಲ ಆಕಾಂಕ್ಷಿಯಾಗಿದ್ದು ಬಿಜೆಪಿಗೆ ನಾನು ಮಲತಾಯಿ ಮಗನಲ್ಲ, ಮನೆ ಮಗನಿದ್ದಂತೆ ಎಂದು ಶಾಸಕ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿದ್ದಾರೆ. ಈ ಹೇಳಿಕೆ ಸಿಎಂ ಯಡಿಯೂರಪ್ಪ ತಲೆನೋವಿಗೆ ಕಾರಣವಾಗಿದೆ.

9) ಹೆಚ್ಚಿದ ಅತ್ಯಾಚಾರ: ಹುಟ್ಟುಹಬ್ಬ ಆಚರಿಸದಿರಲು ಸೋನಿಯಾ ನಿರ್ಧಾರ!

ಸೋನಿಯಾ ಗಾಂಧಿ 73ನೇ ವಸಂತಕ್ಕೆ ಕಾಲಿಡಲಿದ್ದು, ಪಕ್ಷದ ಅಧಿನಾಯಕಿಯ ಹುಟ್ಟುಹಬ್ಬಕ್ಕೆ ಕಾಂಗ್ರೆಸ್ ಸಿದ್ಧತೆ ನಡೆಸುತ್ತಿದೆ. ಆದರೆ ದೇಶಾದ್ಯಂತ ಅತ್ಯಾಚಾರ ಪ್ರಕರಣ ಹೆಚ್ಚಳದ ಹಿನ್ನೆಲೆಯಲ್ಲಿ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ಸೋನಿಯಾ ಗಾಂಧಿ ನಿರ್ಧರಿಸಿದ್ದಾರೆ.

10) ಆರ್ಥಿಕ ಹಿಂಜರಿತ: ಜಿಎಸ್‌ಟಿ ದರ ಏರಿಕೆಗೆ ಕೇಂದ್ರ ಸರ್ಕಾರ ಚಿಂತನೆ

ಆರ್ಥಿಕ ಹಿಂಜರಿತದಿಂದಾಗಿ ತೆರಿಗೆ ಸಂಗ್ರಹ ಕುಸಿದಿರುವುದು ಹಾಗೂ ರಾಜ್ಯಗಳಿಗೆ ಕೇಂದ್ರ ಸರ್ಕಾರ ಪಾವತಿಸಬೇಕಾಗಿರುವ ತೆರಿಗೆ ಪಾಲು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎರಡೂವರೆ ವರ್ಷಗಳ ಹಿಂದೆ ಜಾರಿಗೆ ಬಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯ ಸ್ಲಾ್ಯಬ್‌ ದರಗಳನ್ನು ಬದಲಿಸಲು ಹಾಗೂ ಮತ್ತಷ್ಟುವಸ್ತುಗಳನ್ನು ತೆರಿಗೆ ವ್ಯಾಪ್ತಿಗೆ ಹೊಸದಾಗಿ ತರಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. 

click me!