ನವದೆಹಲಿ(ಡಿ.08): ನಾಳೆ(ಡಿ.09) ಸೋನಿಯಾ ಗಾಂಧಿ 73ನೇ ವಸಂತಕ್ಕೆ ಕಾಲಿಡಲಿದ್ದು, ಪಕ್ಷದ ಅಧಿನಾಯಕಿಯ ಹುಟ್ಟುಹಬ್ಬಕ್ಕೆ ಕಾಂಗ್ರೆಸ್ ಸಿದ್ಧತೆ ನಡೆಸುತ್ತಿದೆ.

ಆದರೆ ದೇಶಾದ್ಯಂತ ಅತ್ಯಾಚಾರ ಪ್ರಕರಣ ಹೆಚ್ಚಳದ ಹಿನ್ನೆಲೆಯಲ್ಲಿ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ಸೋನಿಯಾ ಗಾಂಧಿ ನಿರ್ಧರಿಸಿದ್ದಾರೆ.

ಆಕೆಗೆ ಬೆಂಕಿ ಇಟ್ಟಾಗ ಜೀವ ಇತ್ತು: ರಾಕ್ಷಸನ ಹೇಳಿಕೆಗೆ ಮನಸ್ಸು ಕದಲಿತ್ತು!

ದೇಶದ ವಿವಿಧ ಕಡೆಗಳಲ್ಲಿ ಅತ್ಯಾಚಾರ ಪ್ರಕರಣ ಹಾಗೂ ಮಹಿಳೆಯರ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ಹುಟ್ಟುಹಬ್ಬವನ್ನು ಆಚರಿಸದಿರಲು ನಿರ್ಧರಿಸಿದ್ದಾರೆ.

ಹೈದ್ರಾಬಾದ್ ಪಶುವೈದ್ಯೆ ಹತ್ಯಾಚಾರ ಹಾಗೂ ಉನ್ನಾವ್ ಅತ್ಯಾಚಾರ ಘಟನೆಗಳಿಂದ ದುಃಖಿತರಾಗಿರುವ ಸೋನಿಯಾ ಗಾಂಧಿ, ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಅಂತ್ಯಸಂಸ್ಕಾರಕ್ಕೆ ಯೋಗಿ ಬರಲಿಲ್ಲ: ನ್ಯಾಯ ಸಿಗದೇ ಹೊರಟಳು ದೇಶದ ಮಗಳು!

ದೇಶಾದ್ಯಂತ ಸಾರ್ವಜನಿಕ ಆಕ್ರೋಶ ಭುಗಿಲೆದ್ದಿದ್ದು, ಈ ಸಂದರ್ಭದಲ್ಲಿ ಹುಟ್ಟುಹಬ್ಬ ಆಚರಿಸುವ ಬದಲು ಈ ಆಕ್ರೋಶದಲ್ಲಿ ಭಾಗಿಯಾಗುವ ನಿರ್ಣಯವನ್ನು ಸೋನಿಯಾ ಗಾಂಧಿ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ಡಿಸೆಂಬರ್ 8ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ