85 ಲಕ್ಷ ಮೊತ್ತದ ಬಾಳೆಹಣ್ಣು ನಿಮಿಷದಲ್ಲಿ ಸ್ವಾಹಾ ಮಾಡಿದ!
85 ಲಕ್ಷ ಬೆಲೆಬಾಳುವ ಬಾಳೆಹಣ್ಣು ಒಂದೇ ನಿಮಿಷದಲ್ಲಿ ತಿಂದ ಭೂಪ| ಆರ್ಟ್ ಗ್ಯಾಕಲರಿಗೆ ಬಂದವರೆಲ್ಲಾ ಶಾಕ್| ಏನಿದು ವಿವಾದ? ಇಲ್ಲಿದೆ ವಿವರ
ರೋಮ್[ಡಿ.08]: ಇಟಲಿಯ ಅತ್ಯಂತ ಫೇಮಸ್ ಆರ್ಟಿಸ್ಟ್ ಮ್ಯಾರಿಜಿಯೋ ಬಾಳೆಹಣ್ಣೊಂದನ್ನು ಟೇಪ್ ಮೂಲಕ ಗೊಡೆಗೆ ಅಂಡಿಸಿದ್ದರು. ಇದೊಂದು ಕಲಾಕೃತಿಯಾಗಿದ್ದು, ಇದರ ಬೆಲೆ ಬರೋಬ್ಬರಿ 85 ಲಕ್ಷ ರೂಪಾಯಿ ನಿಗದಿಯಾಗಿತ್ತು. ಫ್ರಾನ್ಸ್ ನ ವ್ಯಕ್ತಿಯೊಬ್ಬ ಇದನ್ನು ಖರೀದಿಸಿದ್ದು, ವಿಶ್ವದ ಮೂಲೆ ಮೂಲೆಯಿಂದ ಜನರು ಇದನ್ನು ನೋಡಲು ಬರುತ್ತಿದ್ದರು. ಆದರೆ ಈ ನಡುವೆ ಕಲಾಕೃತಿಗಳನ್ನು ವೀಕ್ಷಿಸಲು ಬಂದಿದ್ದ ವ್ಯಕ್ತಿಯೊಬ್ಬ ಅಂಟಿಸಿಟ್ಟಿದ್ದ ಬಾಳೆಹಣ್ಣನ್ನು ತೆಗೆದು ತಿಂದಿದ್ದಾನೆ.
ಹೌದು ಈ ಕಲಾಕೃತಿ 85 ಲಕ್ಷ ರೂಪಾಯಿಗೆ ಮಾರಾಟವಾಗುತ್ತಿದ್ದಂತೆಯೇ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು. ಆದರೆ ಕಲಾಕೃತಿ ವೀಕ್ಷಿಸಲು David Datuna ಹೆಸರಿನ ಅಮೆರಿಕನ್ ಆರ್ಟಿಸ್ಟ್ ಈ ಘಟನೆಯ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಈ ಕಲಾಕೃತಿಯನ್ನು 'ಕಾಮಿಡಿಯನ್' ಎಂದಿರುವ ಅವರು ಬಾಳೆಹಣ್ಣನ್ನು ತೆಗೆದು ತಿಂದಿದ್ದಾರೆ.
ಗ್ಯಾಲರಿಯ ಡೈರೆಕ್ಟರ್ Lucien Terras ಈ ಕುರಿತು ಪ್ರತಿಕ್ರಿಯಿಸುತ್ತಾ 'ಈ ಕೃತ್ಯದಿಂದ ಈ ಕಲಾಕೃತಿ ಹಾಳಾಗಿಲ್ಲ. ಬಾಳೆಹಣ್ಣು ಇದರ ಪ್ರಮುಖ ಆಕರ್ಷಣೆಯಾಗಿತ್ತು. ಡೇವಿಡ್ ಬಾಳೆಹಣ್ಣು ತಿಂದ 15 ನಿಮಿಷದೊಳಗೆ ಬೇರೆ ಬಾಳೆಹಣ್ಣು ತಂದಿಟ್ಟಿದ್ದೇವೆ' ಎಂದಿದ್ದಾರೆ. ಅದೇನಿದ್ದರೂ ಡೇವಿಡ್ 85 ಲಕ್ಷ ಬೆಲೆಬಾಳುವ ಕಲಾಕೃತಿಯಲ್ಲಿದ್ದ ಬಾಳೆಹಣ್ಣು ತಿನ್ನುವುದನ್ನು ನೋಡಿ ಅಲ್ಲಿಗಾಗಮಿಸಿದ್ದ ಜನರೆಲ್ಲರೂ ಅಚ್ಚರಿಗಿಡಾಗಿದ್ದರು.
ಈ ಬಾಳೆಹಣ್ಣು ಗ್ಲೋಬಲ್ ಬ್ಯುಸಿನೆಸ್ ಹಾಗೂ ಹಾಸ್ಯದ ಪ್ರತೀಕವಾಗಿತ್ತು. ಇನ್ನು ಈ ಕಲಾಕೃತಿ ತಯಾರಿಸಿದ ಮ್ಯಾರಿಜಿಯೋ ಕ್ಯಾಟೆಲಿನ್, ಈ ಹಿಂದೆ 18 ಕ್ಯಾರೆಟ್ ಚಿನ್ನದ ಟಾಯ್ಲೆಟ್ ಸೀಟ್ ನಿರ್ಮಿಸುವ ಮೂಲಕ ಸದ್ದು ಮಾಡಿದ್ದರು.
ಡಿಸೆಂಬರ್ 8ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ