ಪವಿತ್ರ ಕ್ಷೇತ್ರದಲ್ಲಿ ಬೆತ್ತಲೆ ಫೋಟೋ ಶೂಟ್, ಮದ್ಯಪ್ರಿಯರಿಗೆ ಮತ್ತಷ್ಟು ಕಿಕ್; ಆ.30ರ ಟಾಪ್ 10 ಸುದ್ದಿ!

By Suvarna News  |  First Published Aug 30, 2020, 4:41 PM IST

ಸೆಪ್ಟೆಂಬರ್ 1 ರಿಂದ ಬಾರ್, ಕ್ಲಬ್ ಆರಂಭಕ್ಕೆ ಅನುಮತಿ ನೀಡಲಾಗಿದ್ದು, ತಯಾರಿ ಆರಂಭಗೊಂಡಿದೆ.  ಸ್ವಾವಲಂಬಿ ಭಾರತ ನಿರ್ಮಾಣದತ್ತ ಭಾರತ ದಾಪುಗಾಲಿಟ್ಟಿಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಕ್ರೀಡಾ ದಿನದ ಅಂಗವಾಗಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಕಂಬಳ ಕ್ರೀಡೆಯನ್ನು ಉಲ್ಲೇಖಿಸಿದ್ದಾರೆ. ಪವಿತ್ರ ಕ್ಷೇತ್ರದಲ್ಲಿ ಬೆತ್ತಲೆ ವಿಡಿಯೋ ಮತ್ತು ಪೋಟೋ ಶೂಟ್ ಮಾಡಿಸಿಕೊಂಡ ಮಹಿಳೆಯನ್ನು ಬಂಧಿಸಲಾಗಿದೆ. ಡಿಪ್ರೆಶನ್‌ನಲ್ಲಿದ್ರಾ ಹೃತಿಕ್? ವಿಜಯ್ ಮಲ್ಯ ಗೋವಾ ಬಂಗಲೆ ಸೇರಿದಂತೆ ಆಗಸ್ಟ್ 30ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.


ಗೋವಾದ ಈ ಐಷಾರಾಮಿ ಬಂಗಲೆಯಲ್ಲಿದ್ರು ಮಲ್ಯ, ಹರಾಜಿನಲ್ಲಿ ಖರೀದಿಸುವವರಿಲ್ಲ!


ವಿದೇಶಕ್ಕೆ ಪರಾರಿಯಾಗಿರುವ ಮದ್ಯ ಉದ್ಯಮಿ ಹಾಗೂ ಸದ್ಯ ಮುಚ್ಚಲಾಗಿರುವ ಕಿಂಗ್‌ಫಿಶರ್‌ ಏರ್‌ಲೈನ್ಸ್‌ ಮಾಲೀಕರಾಗಿದ್ದ ವಿಜಯ್ ಮಲ್ಯ ಸದ್ಯ ಲಂಡನ್‌fನಲ್ಲಿ ಜೀವನ ಸಾಗಿಸುತ್ತಿದ್ದಾರೆ ಒಂಭತ್ತು ಸಾವಿರ ಕೋಟಿ ಸಾಲ ಚುಕ್ತಾ ಮಾಡಲಾಗದೆ ಅವರ ಎಲ್ಲಾ ಆಸ್ತಿಯನ್ನು ಮುಟ್ಟುಗೋಲು ಮಾಡಲಾಗಿದೆ. ಹರಾಜಿನ್ಲಿ ಮಲ್ಯರ ಎಲ್ಲಾ ಆಸ್ತಿ ಮಾರಾಟವಾಗಿದ್ದರೂ ಗೋವಾದಲ್ಲಿ ನಿರ್ಮಿಸಲಾಗಿರುವ ಅವರ ವಿಲ್ಲಾವನ್ನು ಖರೀದಿಸಲು ಯಾರೂ ಮುಂದಾಗಿಲ್ಲ.

Tap to resize

Latest Videos

ಸ್ವದೇಶಿ ಆಟಿಕೆ ನಿರ್ಮಿಸುವ ಸಮಯ, ಸ್ವಾವಲಂಬಿ ಭಾರತ ನಿರ್ಮಾಣದತ್ತ ಮತ್ತೊಂದು ಹೆಜ್ಜೆ!...

ಪ್ರಧಾನಿ ನರೇಂದ್ರ ಮೋದಿ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್'ನ 68ನೇ ಆವೃತ್ತಿಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಕೊರೋನಾ ನಡುವೆ ಜನರ ತಾಳ್ಮೆಯನ್ನು ಶ್ಲಾಘಿಸಿರುವ ಮೋದಿ ಹಬ್ಬವನ್ನು ಸರಳವಾಗಿ ಆಚರಿಸುತ್ತಿರುವ ಜನರ ನಡೆಗೆ ನಮಿಸಿದ್ದಾಋಎ. ಇದೇ ವೇಳೆ ಮಕ್ಕಳ ಸಮಯದ ಬಗ್ಗೆಯೂ ಕಾಳಜಿ ವಹಿಸಿರುವ ಭಾರತದಲ್ಲಿ ಆಟಿಕೆ ಉತ್ಪಾದನೆ ಕುರಿತು ವಿವಿಧ ಇಆಖೆಗಳೊಂದಗೆ ಮಾತುಕತೆ ನಡೆಸಿದ್ದಾರೆ.

ಕಂಬಳದ ಫೋಟೋ ಹಾಕಿ ಉಪ ರಾಷ್ಟ್ರಪತಿ ಟ್ವೀಟ್‌...

ಕ್ರೀಡಾ ದಿನದ ಅಂಗವಾಗಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಟ್ವೀಟ್ ಮಾಡಿದ್ದು, ಕ್ರೀಡೆ ಮೇಲೆ ಕೊರೋನಾ ಮಹಾಮಾರಿ ಪ್ರಭಾವದ ಬಗ್ಗೆ ಹೇಳಿದ್ದಾರೆ. ಅಲ್ಲದೇ ಟ್ವೀಟ್ನಲ್ಲಿ ಕಂಬಳದ ಬಗ್ಗೆ ಉಲ್ಲೇಖಿಸಿದ್ದಾರೆ.

ಸುರೇಶ್ ರೈನಾ ಕುಟುಂಬಕ್ಕೆ ಶಾಕ್, ದರೋಡೆಕೋರರಿಂದ ಕ್ರಿಕೆಟರ್ ಮಾವನ ಹತ್ಯೆ!...

ಚೆನ್ನೈ ಸೂಪರ್ ಕಿಂಗ್ಸ್‌ನ ಅತ್ಯಂತ ನಂಬಿಕಸ್ಥ ಬ್ಯಾಟ್ಸ್‌ಮನ್ ಸುರೇಶ್ ರೈನಾ 13ನೇ ಆವೃತ್ತಿಯ ಐಪಿಎಲ್‌ನಿಂದ ಹೊರಬಂದಿದ್ದಾರೆ. ಎಡಗೈ ಬ್ಯಾಟ್ಸ್‌ಮನ್ ಸುರೇಶ್ ರೈನಾ ವೈಯುಕ್ತಿಕ ಕಾರಣದಿಂದಾಗಿ ದುಬೈನಿಂದ ತವರಿಗೆ ಮರಳಲು ತೀರ್ಮಾನಿಸಿದ್ದು ಕ್ರಿಕೆಟ್ ಅಭಿಮಾನಿಗಳಿಗೆ ಆಘಾತ ನೀಡಿತ್ತು. ಆದರೀಗ ಅವರು ತವರು ನಾಡಿಗೆ ಮರಳು ಕಾರಣವಾದ ಅಂಶವೂ ಬಯಲಾಗಿದೆ.

ಸೆ.1ರಿಂದ ಮದ್ಯಪ್ರಿಯರಿಗೆ ಮತ್ತಷ್ಟು ಕಿಕ್...!...

ಮಾರ್ಗಸೂಚಿಯಂತೆ  ನಿಬಂಧನೆಗಳೊಂದಿಗೆ ಹಂತ ಹಂತವಾಗಿ ಲಾಕ್ ಡೌನ್ ಸಡಿಲಿಕೆ ಮಾಡಲಾಗುತ್ತಿದೆ. ಕಳೆದ ನಾಲ್ಕು ತಿಂಗಳಿನಿಂದ ಕ್ಲೋಸ್ ಗಿದ್ದ ಬಾರ್ ಮತ್ತು ಕ್ಲಬ್‌ಗಳು ಓಪನ್ ಆಗಲಿವೆ.

ಇಂದ್ರಜಿತ್ ಲಂಕೇಶ್ ಬಿಚ್ಚಿಟ್ಟ ಇಂಡಸ್ಟ್ರಿ ಭಯಾನಕ ಸತ್ಯಗಳು!...

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ಮಜಾ ಟಾಕೀಸ್‌ ಲಾಫಿಂಗ್‌ ಬುದ್ಧ ಇಂದ್ರಜಿತ್ ಲಂಕೇಶ್‌ ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್‌ ಮಾಫಿಯಾ ಹಾಗೂ ವೇಶ್ಯಾವಾಟಿಕೆ ನಡೆಯುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ.  ಕಾರಲ್ಲಿ ಸಿಕ್ಕಾಕ್ಕೊಂಡ ಪ್ರಭಾವಿಗಳ ಡ್ರಗ್ಸ್ ಕೇಸ್ ಏನಾಯ್ತು ಎಂದು ಪ್ರಶ್ನಿಸಿದ್ದಾರೆ.

ಹೃತಿಕ್ ಒಮ್ಮೆ ಡಿಪ್ರೆಷನ್‌ನಿಂದ ಬಳಲುತ್ತಿದ್ದರಂತೆ; ಕಾರಣ ಕಂಗನಾ ನಾ?

ಬಾಲಿವುಡ್ ನಟ ಹೃತಿಕ್ ರೋಷನ್ ಅವರು ಖಿನ್ನತೆಗೆ ಒಳಗಾಗಿದ್ದರು ಎಂದು ಒಮ್ಮೆ ಹೇಳಿದ್ದರು. ನಾವು ಬೇರೆ ಯಾವುದೇ ಕಾಯಿಲೆಯ ಬಗ್ಗೆ ಮಾತನಾಡುವಾಗ ಆಕಸ್ಮಿಕವಾಗಿ ಆ ವಿಷಯಕ್ಕೆ ಹೆಚ್ಚು ಮಹತ್ವ ಕೊಟ್ಟು ನಟ   ಹೇಳಿದರು. ನಟಿ ಕಂಗನಾ ಹಾಗೂ ಹೃತಿಕ್‌ ಲವ್‌ಸ್ಟೋರಿ, ಬ್ರೇಕಪ್ ಹಾಗೂ ನಂತರದ ವಿವಾದಗಳು ಎಲ್ಲರಿಗೂ ತಿಳಿದಿದೆ. ಈ ನಟ ಹಿಂದೊಮ್ಮೆ ಖಿನ್ನತೆಗೆ ಒಳ್ಳಾಗಿದೆ ಎಂದು ಬಹಿರಂಗ ಪಡಿಸಿದ ಸಮಯದಲ್ಲಿ ಹೃತಿಕ್‌ ಈ ಸ್ಥಿತಿಗೆ ಕಂಗನಾ ಕಾರಣನಾ ಎಂಬ ಪ್ರಶ್ನೆ ಹಲವರಲ್ಲಿ ಮೂಡಿದೆ. 

5 ಸಾವಿರ ರೂ. ಉದ್ಯಮ ಆರಂಭಿಸಿದ್ರೆ ಭಾರೀ ಲಾಭ, ಸರ್ಕಾರದಿಂದಲೂ ಸಹಾಯ!

ಕೊರೋನಾತಂಕದ ಸಂಕಷ್ಟದ ಸಮಯದಲ್ಲಿ ಜನರಿಗೆ ನಿರುದ್ಯೋಗವೂ ಕಾಡಲಾರಂಭಿಸಿದೆ. ಅನೇಕ ಮಂದಿಯ ಉದ್ಯೋಗ ಕಡಿತವಾಗಿದ್ದರೆ, ಉಳಿದವರ ವೇತನ ಹಾಗೂ ಭತ್ಯೆ ಕಡಿತ ಮಾಡಲಾಗುತ್ತಿದೆ. ಭಾರತ ಮಾತ್ರವಲ್ಲ ವಿಶ್ವದ ಅನೇಕ ಕಡೆ ಆರ್ಥಿಕ ಸಮಸ್ಯೆ ಹುಟ್ಟಿಕೊಂಡಿದೆ. ಹೀಗಿರುವಾಗ ಪ್ರತಿಯೊಬ್ಬರೂ ಹಣ ಸಂಪಾದಿಸುವ ಹಾದಿ ಹುಡುಕುತ್ತಿದ್ದಾರೆ. ಹೀಗಿರುವಾಗ ಕಡಿಮೆ ಹಣ ಹೂಡಿಕೆ ಮಾಡಿ ಹೊಸ ಉದ್ಯಮ ಆರಂಭಿಸಿ ಉತ್ತಮ ಹಣ ಗಳಿಸುವವರು ಅನೇಕರಿದ್ದಾರೆ.

ಸ್ಕೋಡಾ ರ‍್ಯಾಪಿಡ್ AT ಬುಕಿಂಗ್ ಆರಂಭ, ಸೆ.18ರಿಂದ ಗ್ರಾಹಕರ ಕೈಗೆ ಕಾರು!...

ಸ್ಕೋಡಾ ಇಂಡಿಯಾ ತನ್ನ ರ‍್ಯಾಪಿಡ್ ಅಟೋಮ್ಯಾಟಿಕ್ ಕಾರಿನ ಬುಕಿಂಗ್ ಆರಂಭಿಸಿದೆ. ಬುಕಿಂಗ್ ಹಣ ರಿಫೆಂಡೇಬಲ್ ಆಗಿದ್ದು, ಸೆಪ್ಟೆಂಬರ್ 18 ರಿಂದ ಬುಕ್ ಮಾಡಿದ ಗ್ರಾಹಕರಿಗೆ ಡೆಲಿವರಿ ಆರಂಭಗೊಳ್ಳಲಿದೆ. ನೂತನ ಕಾರಿನ ಬುಕಿಂಗ್ ಬೆಲೆ ಹಾಗೂ ಕಾರಿನ ಮಾಹಿತಿ ಇಲ್ಲಿದೆ.

ಬಿಜಿನಸ್ ಪ್ರಮೋಶನ್‌ಗೆ ಪವಿತ್ರ ಕ್ಷೇತ್ರದಲ್ಲಿ ಬೆತ್ತಲಾಗಿ ಮಲಗಿದ 27 ರ ಮಹಿಳೆ!...

ಪವಿತ್ರ ಕ್ಷೇತ್ರದಲ್ಲಿ ಬೆತ್ತಲೆ ವಿಡಿಯೋ ಮತ್ತು ಪೋಟೋ ಶೂಟ್ ಮಾಡಿಸಿಕೊಂಡ ವಿದೇಶಿ ಮಹಿಳೆಯನ್ನು ಬಂಧಿಸಲಾಗಿದೆ.   27  ವರ್ಷದ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

click me!