
1.
ಪ್ರಶ್ನೆ : ಸೈಟು, ಫ್ಲ್ಯಾಟ್ಗಳ ಬೆಲೆ ಕಡಿಮೆಯಾಗುತ್ತಾ?
ಉತ್ತರ ; ಹೌದು. ಆರಂಭಿಕ ಲಕ್ಷಣಗಳು ಗೋಚರಿಸುತ್ತಿವೆ
2.
ಪ್ರಶ್ನೆ : ನಿವೇಶನ ಖರೀದಿಸುವವರ ಆಸಕ್ತಿ ಕಡಿಮೆಯಾಗಿದೆಯಾ?
ಉತ್ತರ : ಡೆವಲಪೡೞ ಪ್ರಕಾರ, ನ. 9ರಿಂದಲೇ ವಿಚಾರಣೆ ಕುಸಿದಿದೆ
3.
ಪ್ರಶ್ನೆ : ಹೊಸ ಆಸ್ತಿ ರಿಜಿಸ್ಟ್ರೇಷನ್ ಕಡಿಮೆಯಾಗಿದ್ದು ಏಕೆ?
ಉತ್ತರ : ಕಪ್ಪುಹಣ ಚಲಾವಣೆ ನಿಷೇಧದ ಎಫೆಕ್ಟ್
4.
ಪ್ರಶ್ನೆ : ಸೈಟು, ಫ್ಲ್ಯಾಟ್ನ ದರ ಏಕೆ ಕುಸಿಯುತ್ತೆ?
ಉತ್ತರ : ಕಪ್ಪು ಹಣದಲ್ಲಿ ಆಸ್ತಿ ಖರೀದಿ ಸಾಧ್ಯವಿಲ್ಲದ ಪರಿಣಾಮ
5.
ಪ್ರಶ್ನೆ : ಆಸ್ತಿ ಖರೀದಿಗೆ ಹಣ ವರ್ಗಾವಣೆ ಕಷ್ಟವಾಗುತ್ತಾ?
ಉತ್ತರ : ಪ್ರಾಮಾಣಿಕ ಹಣವಿದ್ದರೆ, ಈಗಲೂ ಖರೀದಿ ಮಾಡಬಹುದು
6.
ಪ್ರಶ್ನೆ : ಈಗ ಭೂಮಿ ಖರೀದಿಸುವುದು ಒಳ್ಳೆಯ ನಿರ್ಧಾರವಾ?
ಉತ್ತರ : ಇನ್ನೂ ಸ್ವಲ್ಪ ದಿನ ಕಾಯುವುದು ಒಳ್ಳೆಯದು
8.
ಪ್ರಶ್ನೆ : ಚಿನ್ನದ ಮೇಲೆ ಈಗ ಹೂಡಿಕೆ ಮಾಡಬಹುದಾ?
ಉತ್ತರ : ಈಗ ಬೇಡ. ಚಿನ್ನದ ದರ ನಂಬಿಕೆಗೆ ಅರ್ಹವಲ್ಲ
9.
ಪ್ರಶ್ನೆ : ಕಬ್ಬಿಣ, ಇಟ್ಟಿಗೆ, ಸಿಮೆಂಟ್ ದರ ಕುಸಿಯುತ್ತಾ?
ಉತ್ತರ : ಸಾಧ್ಯತೆ ಹೆಚ್ಚು
10.
ಪ್ರಶ್ನೆ : ಚಿನ್ನದ ದರ ಮುಂದೆ ಇನ್ನೂ ಏರಿಕೆಯಾಗುತ್ತಾ?
ಉತ್ತರ : ಇಲ್ಲ
11.
ಪ್ರಶ್ನೆ : ವಿಲ್ಲಾ, ಅಪಾರ್ಟ್ಮೆಂಟ್ ದರ ಕುಸಿಯುತ್ತಾ?
ಉತ್ತರ : ಭಾರಿ ಮೌಲ್ಯದ ವಿಲ್ಲಾ, ಅಪಾರ್ಟ್ಮೆಂಟ್ ದರ ಕುಸಿತ ಆಗಲ್ಲ
12.
ಪ್ರಶ್ನೆ : ಲೇ ಔಟ್, ನಿವೇಶನ ದರ ಕುಸಿಯುತ್ತಾ?
ಉತ್ತರ : ಇಲ್ಲಿ ಕಪ್ಪುಹಣದ ಓಡಾಟ ಹೆಚ್ಚಿತ್ತು. ಕುಸಿತ ಸಾಧ್ಯತೆ
13.
ಪ್ರಶ್ನೆ : ಈಗ ಷೇರು ಪೇಟೆಯಲ್ಲಿ ಹೂಡಿಕೆ ಮಾಡುವುದು ಒಳ್ಳೆಯದಾ?
ಉತ್ತರ : ಸಮಸ್ಯೆ ಇಲ್ಲ. ಷೇರುಪೇಟೆಯಲ್ಲಿ ಕಪ್ಪುಹಣ ವಹಿವಾಟು ಕಡಿಮೆ
14.
ಪ್ರಶ್ನೆ : ಚಿನ್ನದ ಮೇಲೆ ಹೂಡಿಕೆ ಬೇಡ ಏಕೆ?
ಉತ್ತರ : ಚಿನ್ನದ ದರ ಏರಿದರಷ್ಟೇ ಲಾಭ. ಆದರೆ, ಗ್ಯಾರಂಟಿ ಇಲ್ಲ
15.
ಪ್ರಶ್ನೆ : ರಿಯಲ್ ಎಸ್ಟೇಟ್ ಷೇರುಗಳನ್ನು ಖರೀದಿಸಬಹುದಾ?
ಉತ್ತರ : ತಜ್ಞರನ್ನು ಸಂಪರ್ಕಿಸಿ ಹೆಜ್ಜೆ ಇಡುವುದು ಉತ್ತಮ
16.
ಪ್ರಶ್ನೆ : ಭವಿಷ್ಯದಲ್ಲಿ ನಿವೇಶನ ಖರೀದಿ ಮಾಡಹಬುದಾ?
ಉತ್ತರ : ದರ ಕುಸಿತದ ಲಾಭ ಪಡೆದುಕೊಳ್ಳಬಹುದು. ಪ್ಲಾನ್ ಮಾಡಿ
17.
ಪ್ರಶ್ನೆ : ರಿಯಲ್ ಎಸ್ಟೇಟ್ ಉದ್ಯಮಿಗಳು ಏನು ಮಾಡಬೇಕು?
ಉತ್ತರ : ಪ್ರಾಮಾಣಿಕರಿಗೆ ನೋ ಟೆನ್ಷನ್. ಕಾಳಧನಿಕರಿಗಷ್ಟೇ ಆತಂಕ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.