
ಬೆಂಗಳೂರು (ನ.17): ದೇಶವನ್ನೇ ತಲ್ಲಣಗೊಳಿಸಿರೋ ನೋಟು ಬದಲಾವಣೆ ವಿಚಾರ ಕೇವಲ ದೇಶವನ್ನೇ ಅಲ್ಲ ವಿಶ್ವದಾದ್ಯಂತ ದೊಡ್ಡ ಚರ್ಚೆಗೆ ಕಾರಣವಾಗಿದೆ.
ವಿಶ್ವದ ಅತೀ ದೊಡ್ಡ ವೆಬ್ ಪೋರ್ಟಲ್ ಸಂಸ್ಥೆ ಗೂಗಲ್ ಭಾರತದ ಸಾಮಾನ್ಯ ಜನರ ಪರವಾಗಿ ನಿಂತಿದೆ. ಈಗಾಗಲೇ ಜನರು ನೋಟು ಎಕ್ಸ್‌ಚೆಂಜ್‌ಗಾಗಿ ದಿಕ್ಕೇ ಕಾಣದಾಗಿರೋ ಜನರಿಗೆ ಸಹಾಯ ಮಾಡುವ ದೃಷ್ಟಿಯಿಂದ ಹತ್ತಿರದ ಎಟಿಎಂಗಳ ಬಗ್ಗೆ ಮಾಹಿತಿ ನೀಡಲು ಮುಂದಾಗಿದೆ. ಇಂಟರ್‌ನೆಟ್ನಲ್ಲಿ ಗೂಗಲ್ ವೆಬ್ ಪೇಜ್ ಒಪನ್ ಮಾಡುತ್ತಿದ್ದಂತೆ ಫೈಂಡ್ ಆನ್ ಎಟಿಎಂ ನಿಯರ್ ಯೂ ಅಂದ್ರೆ ನಿಮ್ಮ ಹತ್ತಿರದ ಎಟಿಎಂ ಅನ್ನು ಪತ್ತೆ ಹಚ್ಚಿಕೊಳ್ಳಿ ಅನ್ನೋ ಮುಖ ಪುಟವನ್ನೇ ಬಿಡುಗಡೆ ಮಾಡಿದೆ. ಈಗಾಗಲೇ ಈ ಪೇಜ್ ಮೂಲಕ 28 ಲಕ್ಷ ಜನ ಹತ್ತಿರದ ಎಟಿಎಂಗಳನ್ನು ಹುಡುಕಿಕೊಂಡಿರೋದು ಗೂಗಲ್ ಕೆಲಸಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ನೀವು ಬಳಸುತ್ತಿರುವ ಇಂಟರ್‌ನೆಟ್ ಸರ್ವರ್ ಐಪಿ ಮೂಲಕ ನೀವಿರುವ ಜಾಗದ ಮಾಹಿತಿಯೊಂದಿಗೆ ಹತ್ತಿರದ ಎಟಿಎಂ ಅನ್ನು ಹುಡುಕಲು ಸಹಾಯ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.