
ಚೆನ್ನೈ(ಮಾ.21): ರಜನಿಕಾಂತ್ ಅಳಿಯ, ನಟ ಧನುಷ್ ಜನ್ಮರಹಸ್ಯ ಬಗೆಹರಿಯುವ ಲಕ್ಷಣ ಕಾಣಿಸ್ತಾ ಇದೆ. ಧನುಷ್ ಮೈಮೇಲೆ, ಅವರ ತಂದೆ-ತಾಯಿ ಎಂದು ಹೇಳಿಕೊಳ್ಳುತ್ತಿರುವವರು ಹೇಳಿದಂತೆ ಯಾವುದೇ ಮಚ್ಚೆಗಳಿಲ್ಲ ಎಂದು ವೈದ್ಯರು ನ್ಯಾಯಾಲಯಕ್ಕೆ ವರದಿ ನೀಡಿದ್ದಾರೆ.
ಕುತ್ತಿಗೆಯ ಬಲಭಾಗದಲ್ಲಿ ಧನುಷ್ಗೆ ಸಣ್ಣದೊಂದು ಹುಟ್ಟುಮಚ್ಚೆ ಇದೆ ಎಂದು ಕದಿರೇಸನ್ ಮತ್ತು ಮೀನಾಕ್ಷಿ ದಂಪತಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಚೆನ್ನೈ ಹೈಕೋರ್ಟ್ನ ಮಧುರೈ ಪೀಠ ಧನುಷ್ ಮೈಮೇಲಿನ ಹುಟ್ಟು ಮಚ್ಚೆ ಪರೀಕ್ಷೆಗೆ ಆದೇಶ ನೀಡಿತ್ತು. ರಾಜಾಜಿ ಆಸ್ಪತ್ರೆ ವೈದ್ಯರು ವರದಿಯನ್ನು ವೈದ್ಯರು ಹೈಕೋರ್ಟ್ಗೆ ಸಲ್ಲಿಸಿದ್ದಾರೆ. ವರದಿಯ ಪ್ರಕಾರ, ಧನುಷ್ ಮೈಮೇಲೆ, ಅದರಲ್ಲೂ ಕುತ್ತಿಗೆ ಬಲಭಾಗದಲ್ಲಿ ಯಾವುದೇ ಹುಟ್ಟುಮಚ್ಚೆಯಿಲ್ಲ. ನೀರು ಮತ್ತು ಸ್ಪಿರಿಟ್ನ್ನು ಮಾತ್ರ ಬಳಸಿ, ಸೂರ್ಯನ ಬೆಳಕಿನಲ್ಲಿ ಹಾಗೂ ಟಾರ್ಚ್ ಬೆಳಕಿನಲ್ಲಿ ಪರೀಕ್ಷೆ ನಡೆಸಲಾಗಿದೆ. ಈ ವರದಿಯ ಜೊತೆಯಲ್ಲೇ, ಹುಟ್ಟುಮಚ್ಚೆಯನ್ನು ಈಗಿನ ಲೇಸರ್ ಟೆಕ್ನಾಲಜಿ ಮೂಲಕ, ಗುರುತೂ ಸಿಗದಂತೆ ತೆಗೆಸಬಹುದು ಎಂದು ಕೂಡಾ ಹೇಳಲಾಗಿದೆ. ಅದನ್ನು ಕೂಡಾ ಥರ್ಮಾಸ್ಕೋಪ್ನಲ್ಲಿ ಪತ್ತೆ ಹಚ್ಚಬಹುದು ಎಂದು ವೈದ್ಯರು ತಿಳಿಸಿದ್ಧಾರೆ. ವರದಿಯನ್ನು ಅಂಗೀಕರಿಸಿರುವ ನ್ಯಾಯಾಲಯ, ವಿಚಾರಣೆಯನ್ನು ಮಾರ್ಚ್ 27ಕ್ಕೆ ಮುಂದೂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.