ಮಹಿಳೆಯರ ಸುರಕ್ಷತೆಗೆ ಹೊಸ ವ್ಯಾಖ್ಯಾನ ಕೊಟ್ಟ ಪಿಂಕ್ ಹೀರೋ ನಿತೀಶ್ ರಸ್ತೋಗಿ

Published : Nov 01, 2017, 06:26 PM ISTUpdated : Apr 11, 2018, 12:54 PM IST
ಮಹಿಳೆಯರ ಸುರಕ್ಷತೆಗೆ ಹೊಸ ವ್ಯಾಖ್ಯಾನ ಕೊಟ್ಟ ಪಿಂಕ್ ಹೀರೋ ನಿತೀಶ್ ರಸ್ತೋಗಿ

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಮಹಿಳಾ ಸುರಕ್ಷತೆಯು ಪ್ರಮುಖ ಸವಾಲಾಗಿದೆ. ಮಹಿಳೆಯರು ಆರಾಮವಾಗಿ ಹೊರಗೆ ಓಡಾಡುವುದು ಕಷ್ಟವಾಗಿದೆ. ರಾತ್ರಿ ಹೊತ್ತಿನಲ್ಲಂತೂ ಒಬ್ಬರೇ ಪ್ರಯಾಣ ಮಾಡುವುದು,  ಹೊರಗೆ ಓಡಾಡುವುದು ಅಪಾಯಕಾರಿಯಾಗಿಪರಿಣಮಿಸಿದೆ.

ಬೆಂಗಳೂರು (ನ.01)): ಇತ್ತೀಚಿನ ದಿನಗಳಲ್ಲಿ ಮಹಿಳಾ ಸುರಕ್ಷತೆಯು ಪ್ರಮುಖ ಸವಾಲಾಗಿದೆ. ಮಹಿಳೆಯರು ಆರಾಮವಾಗಿ ಹೊರಗೆ ಓಡಾಡುವುದು ಕಷ್ಟವಾಗಿದೆ. ರಾತ್ರಿ ಹೊತ್ತಿನಲ್ಲಂತೂ ಒಬ್ಬರೇ ಪ್ರಯಾಣ ಮಾಡುವುದು,  ಹೊರಗೆ ಓಡಾಡುವುದು ಅಪಾಯಕಾರಿಯಾಗಿಪರಿಣಮಿಸಿದೆ.

ಮಹಿಳೆಯರ ಪ್ರಯಾಣವನ್ನು ಸುರಕ್ಷಿತಗೊಳಿಸಲು, ಅವರ ಸುರಕ್ಷತೆಯ ಹಿತದೃಷ್ಟಿಯಿಂದ ಬೆಂಗಳೂರು ಮೂಲದ ಸ್ಟಾರ್ಟ್ ಅಪ್’ವೊಂದು ರೈಡ್’ಸೆಫ್ಟಿ’ ಆ್ಯಪ್ (RideSafetyApp) ಎನ್ನುವ ನೂತನ ಮೊಬೈಲ್ ಅಪ್ಲಿಕೇಶನ್ ಒಂದನ್ನು ಅಭಿವೃದ್ಧಿಪಡಿಸಿದೆ. ಖರಗ್’ಪುರ ಐಐಟಿಯಪದವೀಧರರಾದ ನಿತೀಶ್ ರಸ್ತೋಗಿ ಮತ್ತು ಗೀತ್ ಗಾರ್ಗ್ ಎನ್ನುವ ಪ್ರತಿಭೆಗಳು ಈ ಆ್ಯಪ್’ನ್ನು ತಯಾರಿಸಿದ್ದಾರೆ.

ಈ ಆ್ಯಪ್, ನೀವಿರುವ ಏರಿಯಾ ಹಾಗೂ ಸಮಯವನ್ನು ನಿಮಗೂ ಹಾಗೂ ನೀವು ಬಯಸಿದ ನಿಮ್ಮ ಕುಟುಂಬದ ಸದಸ್ಯರಿಗೆ/ ಸ್ನೇಹಿತರಿಗೆ ನಿಖರವಾಗಿ ತಿಳಿಸುತ್ತದೆ.

ಓಲಾ, ಊಬರ್, ಮೆರುವಿನಲ್ಲಿ ಪ್ರಯಾಣಿಸುವಾಗ ನೀವಿರುವ ಸ್ಥಳವನ್ನು, ನೀವು ಹೋಗಬೇಕಿರುವ ಸ್ಥಳ ಇನ್ನೆಷ್ಟು ದೂರವಿದೆ, ಎಷ್ಟು ಸಮಯ ಹಿಡಿಯುತ್ತದೆ ಎಂಬುದೆಲ್ಲಾ ತೋರಿಸುತ್ತದೆ. ಇಲ್ಲಿ ನೀವು ಅದನ್ನು ಪದೇ ಪದೇ ಚೆಕ್ ಮಾಡುತ್ತಿರಬೇಕಾಗುತ್ತದೆ. ಆದರೆ ರೈಡ್’ಸೆಫ್ಟಿ’ ಆ್ಯಪ್ ಸ್ವಲ್ಪ ವಿಭಿನ್ನ. ನೀವು ಪದೇ ಪದೇ ಚೆಕ್ ಮಾಡುವ ಅಗತ್ಯವಿಲ್ಲ. ಅದೇ ತನ್ನಿಂತಾನೆ ಬಳಕೆದಾರರಿಗೆ ಹಾಗೂ ಅವರು ಈಗಾಗಲೇ ಆಯ್ಕೆ ಮಾಡಿರುವ  ಅವರ ಸಂಬಂಧಿಕರಿಗೆ/ ಸಂಪರ್ಕದಲ್ಲಿರುವವರಿಗೆ ಮಾಹಿತಿಯನ್ನು ರವಾನಿಸುತ್ತದೆ.

ನೀವು ನಿಮ್ಮ ಮೊಬೈಲಿನಲ್ಲಿರುವ ಪ್ಲೇ ಸ್ಟೋರ್’ಗೆ ಹೋಗಿ RideSafetyApp ಇನ್’ಸ್ಟಾಲ್  ಮಾಡಿ. ಬಳಕೆದಾರರು ತಾವು ಹೋಗಬೇಕಾಗಿರುವ ಸ್ಥಳವನ್ನು ನಮೂದಿಸಿದರೆ ಸಾಕು, ಉಳಿದಿದ್ದನ್ನು ಆ್ಯಪ್ ನೋಡಿಕೊಳ್ಳುತ್ತದೆ. ಒಂದು ವೇಳೆ ಡ್ರೈವರ್ ಸರಿಯಾದ ದಾರಿಯಲ್ಲಿ ಹೋಗದೆ, ಬೇರೆ ದಾರಿಯಲ್ಲಿ ಕರೆದುಕೊಂಡು ಹೋದರೆ ಕೂಡಲೇ ನಿಮಗೆ ಅಲರಾಂ ಸೌಂಡ್ ಕೇಳಿಸುತ್ತದೆ. ನಿಮ್ಮ ಸಂಬಂಧಿಕರಿಗೂ ಅಲರಾಂ ಹೋಗುತ್ತದೆ. ಜೊತೆಗೆ ನಿಮ್ಮ ಪ್ರಯಾಣದ ಒಟ್ಟು ಅವಧಿ, ಸ್ಪೀಡ್ ಇವೆಲ್ಲವನ್ನು ನೀವು ತಿಳಿದುಕೊಳ್ಳಬಹುದು.

RideSafetyApp ನ್ನು ಉಚಿತವಾಗಿ ಡೌನ್’ಲೋನ್ ಮಾಡಿಕೊಳ್ಳಬಹುದು. ಆಪರೇಟ್ ಮಾಡುವುದು ಕೂಡಾ ಸುಲಭ. ನಿಮ್ಮ ಪ್ರಯಾಣದ ಕಾಳಜಿಯನ್ನು RideSafetyApp ವಹಿಸುತ್ತದೆ. ಇದನ್ನು ಡೌನ್’ಲೋಡ್ ಮಾಡಿಕೊಳ್ಳಿ. ನಿಮ್ಮ ಪ್ರಯಾಣವನ್ನು ಸುರಕ್ಷಿತ,ಸುಖಕರ ಮಾಡಿಕೊಳ್ಳಿ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಿತ್ತೂರು ಕರ್ನಾಟಕಕ್ಕೆ 5 ಸಾವಿರ ಕೋಟಿ ನೀಡಿ, ಇಲ್ಲವೇ ಪ್ರತ್ಯೇಕ ರಾಜ್ಯ ಕೊಡಿ: ಶಾಸಕ ರಾಜು ಕಾಗೆ
ಪುರುಷರಿಗೆ ಮಾತ್ರವಲ್ಲ ಮೊಬೈಲ್‌ ಸೇಫ್ಟಿಗೆ ಬಂದಿದೆ ಕಾಂಡೋಮ್‌, ಏನಿದು USB ಕಾಂಡೋಮ್‌?