
ಚಂಡೀಗಢ (ನ.01): ವಿಚ್ಛೇದನ ಬಳಿಕ ಹಳೆಯ ಕಹಿ ನೆನಪುಗಳನ್ನು ಮನಸ್ಸಿನಲ್ಲಿ ಇಡದೆ ಅವರ ಜತೆ ಸ್ನೇಹ ಸಂಬಂಧ ಇಟ್ಟುಕೊಳ್ಳಿ. ಈ ವಿಷಯದಲ್ಲಿ ಹೃತಿಕ್ ರೋಷನ್-ಸುಸ್ಸಾನೆ ಖಾನ್, ಇತ್ತೀಚೆಗೆ ಕೊಲೆಯಾದ ಗೌರಿ ಲಂಕೇಶ್-ಚಿದಾನಂದ ರಾಜಘಟ್ಟ ಜೋಡಿಗಳನ್ನು ಆದರ್ಶವಾಗಿ ತೆಗೆದುಕೊಳ್ಳಿ ಎಂದು ಪಂಜಾಬ್‌ನ ಪಠಾಣ್ ಕೋರ್ಟ್ ಹೇಳಿದೆ.
2015ರಲ್ಲಿ ಪಠಾಣ್‌ಕೋಟಾದ 70 ವರ್ಷದ ಮಾಜಿ ಲೆ. ಕರ್ನಲ್ ಅನಿಲ್ ಕಬೋತ್ರಾ 60 ವರ್ಷದ ಹೆಂಡತಿಯ ಕ್ರೂರತೆಯಿಂದ ಬೇಸತ್ತು ವಿಚ್ಛೇದನ ಬಯಸಿದ್ದರು. ಇವರ ಕೇಸ್ ಅನ್ನು ಗಮನಿಸಿದ ಜಿಲ್ಲಾ ನ್ಯಾಯಾಧೀಶೆ ರಮೇಶ್ ಕುಮಾರಿಗೆ ಲೆ. ಕರ್ನಲ್‌ಗೆ ಹೆಂಡತಿ ತನ್ನ ಮೇಲೆ ಸುಳ್ಳು ಅಪಾದನೆ ಮಾಡಿದ್ದಾರೆ ಎಂಬ ಅಸಮಾಧಾನವಿರುವುದು ಗಮನಕ್ಕೆ ಬಂತು.
1990ರಲ್ಲಿ ಲೆ. ಕರ್ನಲ್ ಅವಾಹಿತರಾಗಿದ್ದಾಗ ವಿಚ್ಛೇದಿತ ಮಹಿಳೆಯನ್ನು ಭೇಟಿಯಾದರು. ಇವರಿಬ್ಬರ ಪರಿಚಯ ಪ್ರೇಮಕ್ಕೆ ಬಿದ್ದು ಒಂದು ವರ್ಷ ಜತೆಯಲ್ಲಿ ಬಾಳಿದ ಬಳಿಕ 1991ರಲ್ಲಿ ಮದುವೆಯಾದರು, 1992ರಲ್ಲಿ ಇವರಿಗೆ ಹೆಣ್ಣು ಮಗು ಹುಟ್ಟಿತು. ಚೆನ್ನಾಗಿದ್ದ ಇವರ ದಾಂಪತ್ಯದಲ್ಲಿ ಸಮಸ್ಯೆ ಪುನರಾರಂಭವಾಗಿದ್ದು 2001ರಲ್ಲಿ. ತಮ್ಮ ಆಸ್ತಿಯಲ್ಲಿ ಸಮಾನ ಪಾಲನ್ನು ಹೆಂಡತಿಗೆ ನೀಡಿದ್ದ ಮಾಜಿ ಲೆ. ಕರ್ನಲ್ ಮನೆ ಮಾರಿದಾಗ ಹೆಂಡತಿಗೆ ಸಮಪಾಲು ನೀಡಬೇಕೆಂದು ಹೆಂಡತಿ ಬೇಡಿಕೆ ಮುಂದಿಟ್ಟರು. ಆಗ ಎಫ್‌ಐಆರ್ ದಾಖಲಿಸಿದ ಕರ್ನಲ್ ವಿರುದ್ಧ ವರದಕ್ಷಿಣೆ, ಕಿರುಕುಳ ಮುಂತಾದ ಸುಳ್ಳು ಕೇಸ್ ಹಾಕಲಾಯಿತು. ಇವೆಲ್ಲಾ ಸುಳ್ಳು ಆರೋಪಗಳೆಂದು ಸುಪ್ರೀಂಕೋರ್ಟ್‌ನಲ್ಲಿ ಸಾಬೀತು ಆಯಿತು.
ಹೆಂಡತಿ ತನ್ನ ಮೇಲೆ ಸುಳ್ಳು ಅಪಾದನೆ ಮಾಡಿದ್ದಕ್ಕೆ ತುಂಬಾ ಕೋಪದಿಂದ ಇರುವ ಕರ್ನಲ್ ಅವರನ್ನು ಗಮನಿಸಿ, ವಿಚ್ಛೇದನ ಬಳಿಕ ಹಳೆಯ ಕಹಿಯನ್ನು ಮರೆತು ಸ್ನೇಹಿತರಂತೆ ಬಾಳಿ ಎಂದು ಸಲಹೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.