ಕೇಂದ್ರದ ಮುಂದಿದೆ 200ಕ್ಕೂ ಹೆಚ್ಚು ಸುಧಾರಣಾ ಕ್ರಮಗಳ ಯೋಜನೆ

By Suvarna Web Desk  |  First Published Nov 1, 2017, 5:27 PM IST

* ಉದ್ಯಮಸ್ನೇಹಿ ರಾಷ್ಟ್ರಗಳ ಪಟ್ಟಿಯಲ್ಲಿ ಟಾಪ್-50ಕ್ಕೇರುವುದು ಭಾರತದ ಗುರಿ

* ದೇಶದಲ್ಲಿ ಇನ್ನೂ ಉತ್ತಮ ಉದ್ಯಮಸ್ನೇಹಿ ವಾತಾವರಣ ನಿರ್ಮಿಸಲು ಕೇಂದ್ರ ನಿರ್ಧಾರ

* ಜಿಎಸ್'ಟಿಯಿಂದ ಮುಂದಿನ ದಿನಗಳಲ್ಲಿ ಅನುಕೂಲವಾಗುವ ವಿಶ್ವಾಸ


ಮುಂಬೈ(ನ. 01): ವಿಶ್ವಬ್ಯಾಂಕ್'ನ ಉದ್ಯಮಸ್ನೇಹಿ ರಾಷ್ಟ್ರಗಳ ಪಟ್ಟಿಯಲ್ಲಿ(Ease of doing business) 130ರಿಂದ 100ನೇ ಸ್ಥಾನಕ್ಕೆ ಜಂಪ್ ಮಾಡಿರುವ ಭಾರತ ಇದೀಗ ಟಾಪ್-50 ಪಟ್ಟಿಗೆ ಲಗ್ಗೆ ಹಾಕುವ ಗುರಿ ಹೊಂದಿದೆ. ಈ ನಿಟ್ಟಿನಲ್ಲಿ 200ಕ್ಕೂ ಹೆಚ್ಚು ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಲು ಕೇಂದ್ರ ಸರಕಾರ ಯೋಜಿಸಿದೆ. ಔದ್ಯಮಿಕ ನೀತಿ ಮತ್ತು ಪ್ರಸಾರ ಇಲಾಖೆಯ ಕಾರ್ಯದರ್ಶಿ ರಮೇಶ್ ಅಭಿಷೇಕ್ ನೀಡಿರುವ ಮಾಹಿತಿ ಪ್ರಕಾರ ಈಗಾಗಲೇ 122 ಸುಧಾರಣಾ ಕ್ರಮಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಈ ಕ್ರಮಗಳನ್ನು ಪರಿಗಣಿಸುವಂತೆ ವಿಶ್ವಬ್ಯಾಂಕ್'ಗೆ ಸರಕಾರ ಮನವಿ ಮಾಡಿಕೊಳ್ಳುತ್ತಿದೆ. ವಿಶ್ವಬ್ಯಾಂಕ್ ಈ ಸುಧಾರಣಾ ಕ್ರಮಗಳನ್ನು ತನ್ನ ಮಾನದಂಡಗಳ ಪಟ್ಟಿಗೆ ಸೇರಿಸಿಕೊಂಡರೆ ಭಾರತದ ರ್ಯಾಂಕಿಂಗ್ ಇನ್ನಷ್ಟು ಮೇಲೇರುವುದು ಖಚಿತವೆನ್ನಲಾಗಿದೆ. ಈಗ ನಡೆದಿರುವ 122 ಕ್ರಮಗಳ ಜೊತೆಗೆ ಇನ್ನೂ 90ಕ್ಕೂ ಹೆಚ್ಚು ಸುಧಾರಣಾ ಕ್ರಮಗಳ ಜಾರಿಗೆ ಸರಕಾರ ಯೋಜಿಸಿದೆ. ಇವೆಲ್ಲವನ್ನ ವಿಶ್ವಬ್ಯಾಂಕ್ ಪರಿಗಣಿಸಿದರೆ ಭಾರತವು ಉದ್ಯಮಸ್ನೇಹಿ ರಾಷ್ಟ್ರಗಳ ಪಟ್ಟಿಯಲ್ಲಿ ಟಾಪ್-50ಕ್ಕೇರುವ ಪ್ರಬಲ ವಿಶ್ವಾಸದಲ್ಲಿದೆ.

ಜಿಎಸ್'ಟಿ ಬಗ್ಗೆ ವಿಪಕ್ಷಗಳು ಟೀಕೆಗಳ ಸುರಿಮಳೆಗೈಯ್ಯುತ್ತಿದ್ದರೂ ವಿಶ್ವಬ್ಯಾಂಕ್ ಮಾತ್ರ ತೆರಿಗೆ ಸುಧಾರಣಾ ಕ್ರಮವನ್ನು ಶ್ಲಾಘಿಸಿದೆ. ಜಿಎಸ್'ಟಿಯ ಪರಿಣಾಮವನ್ನು ವಿಶ್ವಬ್ಯಾಂಕ್ ತನ್ನ ಮುಂದಿನ ಪಟ್ಟಿಯಲ್ಲಿ ಪರಿಗಣಿಸುವ ಸಾಧ್ಯತೆ ಇದೆ.

Tap to resize

Latest Videos

click me!