
ಮುಂಬೈ(ನ.06): ಸರ್ಕಾರ ರಚನೆಯ ಹಗ್ಗ ಜಗ್ಗಾಟದಲ್ಲಿ ದಿನದೂಡುತ್ತಿರುವ ಬಿಜೆಪಿ-ಶಿವಸೇನೆ ಮೈತ್ರಿಕೂಟ ನಾಳೆ(ನ.07) ಸರ್ಕಾರ ರಚನೆಯ ಒತ್ತಡಕ್ಕೆ ಸಿಲುಕಿದೆ. ಈ ಮಧ್ಯೆ ಬಿಕ್ಕಟ್ಟು ಪರಿಹಾರಕ್ಕೆ ಹೊಸ ಸೂತ್ರ ಮುಂದಿಟ್ಟಿರುವ ಬಿಜೆಪಿ, ಶಿವಸೇನೆ ಒಪ್ಪಿಗೆಗಾಗಿ ಕಾಯುತ್ತಿದೆ.
"
ಶಿವಸೇನೆಯನ್ನು ತಣ್ಣಗಾಗಿಸಲು ಹಾಗೂ ಭರ್ತಿ ಐದು ವರ್ಷ ಅಧಿಕಾರ ತನ್ನಲ್ಲೇ ಉಳಿಸಿಕೊಳ್ಳಲು ಬಿಜೆಪಿ ಭರ್ಜರಿ ಪ್ಲ್ಯಾನ್ ಮಾಡಿದ್ದು, ಕೇಂದ್ರ ಸಚಿವ ಹಾಗೂ ಆರ್‌ಎಸ್‌ಎಸ್ ಮೊಗಸಾಲೆಯಲ್ಲಿ ರೂಪುಗೊಂಡ ನಾಯಕ ನಿತಿನ್ ಗಡ್ಕರಿ ಅವರನ್ನು ಸಿಎಂ ಮಾಡುವ ಕುರಿತು ಚಿಂತನೆ ನಡೆಸಿದೆ.
50-50 ಸೂತ್ರದಡಿ ಸರ್ಕಾರ ರಚನೆಗೆ ಪಟ್ಟು ಹಿಡಿದಿರುವ ಶಿವಸೇನೆ ದೋಸ್ತಿ ಬಿಜೆಪಿಗೆ ತೀವ್ರ ತಲೆನೋವಾಗಿ ಪರಿಣಮಿಸಿದೆ. ಶಿವಸೇನೆಯನ್ನು ಕಟ್ಟಿಹಾಕಲು ಮುಂದಾಗಿರುವ ಬಿಜೆಪಿ, ಸಿಎಂ ಪಟ್ಟಕ್ಕೆ ನಿತಿನ್ ಗಡ್ಕರಿ ಹೆಸರನ್ನು ತೇಲಿ ಬಿಟ್ಟಿದೆ.
ಇನ್ನೂ ಮುಗಿಯದ ಮಹಾ ಬಿಕ್ಕಟ್ಟು; ಅಧಿಕಾರ ಹಂಚಿಕೆಗೆ ಪಟ್ಟು ಬಿಡದ ಬಿಜೆಪಿ-ಶಿವಸೇನೆ
ಆರ್‌ಎಸ್‌ಎಸ್‌ಗೆ ಹತ್ತಿರವಾಗಿರುವ ನಿತಿನ್ ಗಡ್ಕರಿ ಹಿರಿಯ ನೇತಾರರಾಗಿದ್ದು, ಶಿವಸೇನೆ ಕೂಡ ಇವರ ಉಮೇದುವಾರಿಕೆಯನ್ನು ವಿರೋಧಿಸುವುದಿಲ್ಲ ಎಂಬ ನಂಬಿಕೆ ಬಿಜೆಪಿಗಿದೆ.
ಅಲ್ಲದೇ ಬಿಜೆಪಿ ಜೊತೆಗಿನ ಮಾತುಕತೆ ವೇಳೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕೂಡ ನಿತಿನ್ ಗಡ್ಕರಿ ಅವರನ್ನು ಸಿಎಂ ಮಾಡುವ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದಾರೆ ಎನ್ನಲಾಗಿದೆ.
ಶಿವಸೇನೆ-ಬಿಜೆಪಿ ಸರ್ಕಾರ ರಚಿಸಲಿ: ಅನುಭವಿ ಶರದ್ ಪವಾರ್ ಮಾತು ಕೇಳಲಿ!
ಮಹಾರಾಷ್ಟ್ರ ಹಾಗೂ ದೇಶದ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಿತಿನ್ ಗಡ್ಕರಿ ಸಿಎಂ ಆದರೆ ಮೈತ್ರಿಯಲ್ಲಿ ಉದ್ಭವಿಸಿರುವ ಬಿಕ್ಕಟ್ಟುಗಳೆಲ್ಲವೂ ಬಗೆಹರಿಯಲಿವೆ ಎಂಬುದು ಭಾಗವತ್ ಅಭಿಪ್ರಾಯವಾಗಿದೆ.
ನವೆಂಬರ್ 06ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ;
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.