
ವಾರಾಣಸಿ(ನ.06): ರಾಷ್ಟ್ರ ರಾಜಧಾನಿ ನವದೆಹಲಿ ತೀವ್ರತರವಾದ ವಾಯುಮಾಲಿನ್ಯದಿಂದ ಕಂಗಾಲಾಗಿದೆ. ಅಪರಿಶುದ್ಧ ಗಾಳಿ ದೆಹಲಿ ಮಾತ್ರವಲ್ಲದೇ ಹತ್ತಿರದ ಉತ್ತರಪ್ರದೇಶಕ್ಕೂ ಪಸರಿಸಿ ಜನರಲ್ಲಿ ಆತಂಕ ಸೃಷ್ಟಿಸಿದೆ.
ರಾಜಧಾನಿಯಲ್ಲಿ ಮಾಲಿನ್ಯ ವಿಪರೀತಕ್ಕೆ
ಈ ಮಧ್ಯೆ ವಾಯುಮಾಲಿನ್ಯದ ಪರಿಣಾಮವಾಗಿ ಪ್ರಧಾನಿ ಮೋದಿ ಸ್ವಕ್ಷೇತ್ರ ವಾರಾಣಸಿಲ್ಲಿ ದೇವರಿಗೆ ಮಾಸ್ಕ್ ಹಾಕಲಾಗಿದೆ. ಇಲ್ಲಿನ ಸಿಗ್ರಾ ಪ್ರದೇಶದಲ್ಲಿರುವ ಶಿವ-ಪಾರ್ವತಿ ದೇವಸ್ಥಾನದಲ್ಲಿ ದೇವರ ಮೂರ್ತಿಗಳಿಗೆ ಮಾಸ್ಕ್ ಹಾಕಲಾಗಿದೆ.
ರಾಜಧಾನಿ ಮಾಲಿನ್ಯ: ಸರ್ಕಾರದ ವಿರುದ್ಧ ಸುಪ್ರೀಂ
ಶಿವ, ದುರ್ಗಾ ಹಾಗೂ ಸಾಯಿಬಾಬಾ ದೇವರ ಮೂರ್ತಿಗಳಿಗೆ ಮಾಸ್ಕ್ ಹಾಕಲಾಗಿದ್ದು, ಅಪರಿಶುದ್ಧ ಗಾಳಿ ದೇವರಿಗೆ ತಾಗಬಾರದು ಎಂಬ ಕಾರಣಕ್ಕೆ ಮಾಸ್ಕ್ ಹಾಕಲಾಗಿದೆ ಎಂದು ಪೂಜಾರಿಗಳು ತಿಳಿಸಿದ್ದಾರೆ.
ಮಾಲಿನ್ಯ ಕೊಂಚ ಇಳಿಕೆ: ರಾಜಕೀಯ ಕಿತ್ತಾಟ ಏರಿಕೆ
ಈ ಕುರಿತು ಮಾಹಿತಿ ನೀಡಿರುವ ದೇವಸ್ಥಾನದ ಮುಖ್ಯ ಅರ್ಚಕ, ಚಳಿಗಾಲದಲ್ಲಿ ದೇವರಿಗೆ ಚಳಿಯಾಗಬಾರದು ಎಂಬ ಕಾರಣಕ್ಕೆ ಕಂಬಳಿ ಹೊದಿಸಲಾಗುತ್ತದೆ. ಅದರಂತೆ ಅಪರಿಶುದ್ಧ ವಾತಾವರಣದಲ್ಲಿ ದೇವರ ಮೂರ್ತಿಗಳಿಗೆ ಮಾಸ್ಕ್ ಹೊದಿಸಲಾಗಿದೆ ಎಂದು ತಿಳಿಸಿದ್ದಾರೆ.
ದಿಲ್ಲಿಯಲ್ಲಿ ಮತ್ತೆ ಸಮ-ಬೆಸ ಸಂಚಾರ; ಮಾಲಿನ್ಯ ತಡೆಗೆ ದೆಹಲಿ ಸರ್ಕಾರ ಪ್ರಯೋಗ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.