7 ವರ್ಷಗಳ ಕಾಲ ಭಾರತದ ಜನರನ್ನು ಕಾಡಿದ ನಿರ್ಭಯಾ ಹಂತಕರ ಗಲ್ಲು ಶಿಕ್ಷೆ ಕೊನೆಗೂ ನೆರವೇರಿದೆ. ಕೊರೋನಾ ವೈರಸ್ ಆತಂಕದ ನಡುವೆಯೂ ಹತ್ಯಾಚಾರಿಗಳ ಗಲ್ಲು ಶಿಕ್ಷೆಯನ್ನು ಜನ ಸಂಭ್ರಮಿಸಿದ್ದಾರೆ. ಇತ್ತ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್‌ನಾತ್ ರಾಜೀನಾಮೆ ನೀಡಿದ್ದರೆ, ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಮುನಿರತ್ನ ವಿರುದ್ಧದ ಅರ್ಜಿ ವಜಾಗೊಂಡಿದೆ. ಭಾರತದಲ್ಲಿ ಕೊರೋನಾ ವೈರಸ್ 5ನೇ ಬಲಿ ಪಡೆದಿದೆ.
ಹೈ ಕೋರ್ಟ್ ಮಹತ್ವದ ತೀರ್ಪು : ಮುನಿರಾಜು ವಿರುದ್ಧ ಮುನಿರತ್ನಗೆ ಗೆಲುವು
ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಮುನಿರತ್ನ ಅವರು ಆಯ್ಕೆಯಾಗಿರುವುದು ಅಸಿಂಧುಗೊಳಿಸಬೇಕು ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಪಿಎಂ ಮುನಿರಾಜುಗೌಡ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯನ್ನು ಹೈ ಕೋರ್ಟ್ ವಜಾಗೊಳಿಸಿದೆ.
7 ವರ್ಷಗಳ ಹೋರಾಟಕ್ಕೆ ಸಿಕ್ತು ನ್ಯಾಯ; ಗಲ್ಲು ಶಿಕ್ಷೆ ಪ್ರಕ್ರಿಯೆ ಹೀಗಿತ್ತು
2012 ರಲ್ಲಿ ದಿಲ್ಲಿಯಲ್ಲಿ ಚಲಿಸುವ ಬಸ್‌ನಲ್ಲಿ ಯುವತಿ ಮೇಲೆ ಭೀಕರವಾಗಿ ಅತ್ಯಾಚಾರ ಎಸಗಿ ಆಕೆಯ ಸಾವಿಗೆ ಕಾರಣವಾಗಿದ್ದ ಹಂತಕರಿಗೆ ಕೊನೆಗೂ ಗಲ್ಲು ಶಿಕ್ಷೆ ಖಾಯಂ ಆಗಿದೆ.
ಮಧ್ಯ ಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ರಾಜೀನಾಮೆ
ಜ್ಯೋತಿರಾಧಿತ್ಯ ಸಿಂಧಿತಾ ಬಣದ ಕಾಂಗ್ರೆಸ್ ಶಾಸಕರ ರಾಜೀನಾಮೆಯಿಂದ ಬಿಕ್ಕಟ್ಟಿಗೆ ಸಿಲುಕಿದ್ದ ಮಧ್ಯ ರಾಜಕೀಯ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಮಧ್ಯ ಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ವಿಶ್ವಾಸಮತ ಸಾಬಿತುಪಡಿಸುವ ಬದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಭಾರತದಲ್ಲಿ ಕೊರೋನಾಗೆ 5ನೇ ಬಲಿ : ಜೈಪುರದಲ್ಲಿ ವ್ಯಕ್ತಿ ಸಾವು
ಡೆಡ್ಲಿ ಕೊರೋನಾ ಸೋಂಕಿಗೆ ಭಾರತದಲ್ಲಿ ಐದನೇ ಬಲಿಯಾಗಿದೆ. ರಾಜಸ್ಥಾನದ ಜೈಪುರದಲ್ಲಿ ಇಟಲಿ ಮೂಲದ ಪ್ರವಾಸಿಗ ಸಾವಿಗೀಡಾಗಿದ್ದಾನೆ. ಜೈಪುರಕ್ಕೆ ಆಗಮಿಸಿದ್ದ ಇಟಲಿ ಪ್ರವಾಸಿಗ ಸಾವಿಗೀಡಾಗಿದ್ದು, ಒಟ್ಟು ಭಾರತದಲ್ಲಿ ಮಾರಣಾಂತಿಕ ಕೊರೋನಾ ಸೋಂಕಿಗೆ ಐವರು ಬಲಿಯಾದಂತಾಗಿದೆ.
ಪಾಕ್ ಪೌರತ್ವ ಪಡೆದ ಬೆನ್ನಲ್ಲೇ ಸ್ಯಾಮಿಗೆ ಕೊರೋನಾ ಶಂಕೆ..!.
ಅದೃಷ್ಠವಶಾತ್ ಬಹುತೇಕ ಎಲ್ಲಾ ಪ್ರಕರಣಗಳು ನೆಗೆಟಿವ್ ಎಂದು ವರದಿಯಾಗಿದೆ. ಆದರೆ ಇತ್ತೀಚೆಗಷ್ಟೇ ಪಾಕಿಸ್ತಾನದ ಗೌರವ ಪೌರತ್ವ ಪಡೆದ ಡ್ಯಾರೆನ್ ಸ್ಯಾಮಿಗೆ ಕೊರೋನಾ ವೈರಸ್ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿತ್ತು. 14 ದಿನಗಳ ಮಟ್ಟಿಗೆ ಪ್ರತ್ಯೇಕವಾಗಿದ್ದು, ಕೊನೆಗೂ ಈಗ ತವರಿಗೆ ಮರಳಿದ್ದಾರೆ.
ಬಾಲಿವುಡ್‌ಗೆ ಲಗ್ಗೆ ಇಟ್ಟ ಕೊರೋನಾ; ಸಿಂಗರ್ ಕನಿಕಾ ಕಪೂರ್‌ಗೆ ಸೋಂಕು!
ಕೊರೋನಾ ವೈರಸ್ ಭಾರತದಲ್ಲಿ ತೀವ್ರವಾಗಿ ಹರಡುತ್ತಿದೆ. ಮುನ್ನಚ್ಚೆರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಸೋಂಕು ಹತೋಟಿಗೆ ಬರುತ್ತಿಲ್ಲ. ಇದೀಗ ಬಾಲಿವುಡ್‌ಗೂ ಕೊರೋನಾ ವೈರಸ್ ಅಂಟಿಕೊಂಡಿದೆ. ಬಾಲಿವುಡ್ ಖ್ಯಾತ ಸಿಂಗರ್ ಕನಿಕಾ ಕಪೂರ್‌ಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ನಡುಕ ಹುಟ್ಟಿಸಿರುವ ಕೊರೋನಾಗೆ ತಾಯತ ಮಾರಿದವ ಅರೆಸ್ಟ್...
ದೇಶದಲ್ಲಿ ನಡುಕ ಹುಟ್ಟಿಸಿರುವ ಮಾರಕ ಕೊರೋನಾ ವೈರಸ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಇದೇ ವೇಳೆ ಕೊರೋನಾ ನಿಯಂತ್ರಣಕ್ಕೆಂದು ತಾಯತ ಮಾರುತ್ತಿದ್ದ ಬೋಗಸ್ ಸ್ವಾಮಿಜಿ ಓರ್ವರನ್ನು ಅರೆಸ್ಟ್ ಮಾಡಲಾಗಿದೆ.
ಭಾನುವಾರ ಜನತಾ ಕರ್ಫ್ಯೂ : ಎಲ್ಲಾ ಹೋಟೆಲ್ ಬಂದ್, ಚಿನ್ನದಂಗಡಿಗಳ ಸಪೋರ್ಟ್
ದೇಶದಾದ್ಯಂತ ಮಾರ್ಚ್ 22 ರಂದು ಜನತಾ ಕರ್ಫ್ಯೂ ಹಾಕಲಾಗಿದ್ದು ಕೊರೋನಾ ವೈರಸ್ ನಿಯಂತ್ರಣದ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಹೋಟೆಲ್ , ಚಿನ್ನದ ಅಂಗಡಿಗಳು ಬಂದ್ ಆಗಲಿವೆ.
ಕೊರೋನಾ ಜಾಗೃತಿ : ಮಾಸ್ಕ್ ಧರಿಸಿ ಮದುವೆಯಾದ ಜೋಡಿ
ವಿಶ್ವದಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ತಡೆಯಲು ಸಾಕಷ್ಟು ಜಾಗೃತಿ ಮೂಡಿಸಲಾಗುತ್ತಿದೆ.ಸಾವಿರಾರು ಜನರ ಪ್ರಾಣಕ್ಕೆ ಮಾರಕವಾದ ವೈರಸ್ ತಡೆಗೆ ಎಚ್ಚರ ಅಗತ್ಯವೆಂದು ಚಿಕ್ಕಬಳ್ಳಾಪುರದಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಎಚ್ಚರಿಕೆ ಮೂಡಿಸಲಾಗಿದೆ.
ಶಾರುಖ್ 'ಮನ್ನತ್' ಬಂಗಲೆ ಎದುರು ಅಗ್ನಿ ಅವಘಡ; ಯುವತಿ ಸಾವು!
ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ನಿವಾಸ ಅಂದ್ರೆ ಎಲ್ಲರಿಗೂ ಮೊದಲು ಜ್ಞಾಪಕ ಬರುವುದು ಮುಂಬೈನ 'ಮನ್ನತ್' ಬಂಗಲೆ. ಈ ಬಂಗಲೆ ಎದುರು ಆಕಸ್ಮಿಕ ಅಗ್ನಿ ಅವಘಡವೊಂದು ಸಂಭವಿಸಿದೆ. ದುರಂತವೂ ವರದಿಯಾಗಿದೆ.