ಭಾನುವಾರ ಜನತಾ ಕರ್ಫ್ಯೂ : ಎಲ್ಲಾ ಹೋಟೆಲ್ ಬಂದ್, ಚಿನ್ನದಂಗಡಿಗಳ ಸಪೋರ್ಟ್

By Suvarna News  |  First Published Mar 20, 2020, 2:04 PM IST

ದೇಶದಾದ್ಯಂತ ಮಾರ್ಚ್ 22 ರಂದು ಜನತಾ ಕರ್ಫ್ಯೂ ಹಾಕಲಾಗಿದ್ದು ಕೊರೋನಾ ವೈರಸ್ ನಿಯಂತ್ರಣದ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಹೋಟೆಲ್ , ಚಿನ್ನದ ಅಂಗಡಿಗಳು ಬಂದ್ ಆಗಲಿವೆ. 


ಬೆಂಗಳೂರು [ಮಾ.20] : ದೇಶದಲ್ಲಿ ಕೊರೋನಾ ಮಹಾಮಾರಿ ತನ್ನ ಅಟ್ಟಹಾಸ ಮೆರೆಯುತ್ತಿದ್ದು ಈ ನಿಟ್ಟಿನಲ್ಲಿ ಮಾರ್ಚ್ 22 ರಂದು ಕೇಂದ್ರ ಸರ್ಕಾರ ಜನತಾ ಕರ್ಫ್ಯೂ ಜಾರಿ ಹಿನ್ನೆಲೆ ಸಂಪೂರ್ಣ ಬಂದ್ ಆಗಲಿದೆ. 

ಇನ್ನು ಜನತಾ ಕರ್ಫ್ಯೂ ಹಿನ್ನೆಲೆ ರಾಜ್ಯದ ಎಲ್ಲೆಡೆ ಸಣ್ಣ - ಪುಟ್ಟ ಹಾಗೂ ಸ್ಟಾರ್ ಹೋಟೆಲ್ ಗಳನ್ನು ಬಂದ್ ಮಾಡಲು ಸೂಚಿಸಲಾಗಿದೆ. ರಾಜ್ಯ ಸರ್ಕಾರ ಎಲ್ಲಾ ಹೋಟೆಲ್ ಗಳನ್ನು ಬಂದ್ ಮಾಡಲು ಆದೇಶಿದಿದೆ. 

Latest Videos

undefined

ಅಂದು ಯಾರೂ ಮನೆಯಿಂದ ಹೊರಕ್ಕೆ ಬಾರದಂತೆ ಕೇಂದ್ರ ಸರ್ಕಾರ ಕರೆ ನೀಡಿದ್ದು, ಈ ನಿಟ್ಟಿನಲ್ಲಿ ಹೋಟೆಲ್ ಗಳನ್ನು ಬಂದ್ ಮಾಡಲಾಗುತ್ತಿದೆ.  ಇನ್ನು ಹಲವು ರೀತಿಯ ಮಳಿಗೆಗಳನ್ನು ಕೂಡ ಜನತಾ ಕರ್ಫ್ಯೂ ಹಿನ್ನೆಲೆ ಬಂದ್ ಮಾಡಲಾಗುತ್ತಿದೆ. 

"

ಕೊರೋನಾ ಭೀತಿ: ಮಹಾ​ರಾ​ಷ್ಟ್ರಕ್ಕೆ ಬಸ್‌ ಸಂಪೂರ್ಣ ಸ್ಥಗಿತ...

ಚಿನ್ನದ ಅಂಗಡಿ ಬಂದ್ : ಇನ್ನು ಮಾರ್ಚ್ 21 ರಿಂದಲೇ ಬೆಂಗಳೂರಿನ ಎಲ್ಲಾ ಚಿನ್ನದ ಅಂಗಡಿಗಳು 8 ದಿನಗಳ ಕಾಲ ಬಂದ್ ಆಗಲಿವೆ. ಕೊರೋನಾ ಎಫೆಕ್ಟ್ ಹಿನ್ನೆಲೆ  ಚಿನ್ನದ ಅಂಗಡಿಗಳಲ್ಲಿ ಹೆಚ್ಚು ಜನ ಸೇರಿವ ಹಿನ್ನೆಲೆ  ಚಿನ್ನದ ಅಂಗಡಿಗಳನ್ನು ಬಂದ್ ಮಾಡಲಾಗುತ್ತಿದೆ. 

ಕೊರೋನಾ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದೇವೆ: ಡಾ. ಸುಧಾಕರ್...

ಬೆಂಗಳೂರಿನ ಚಿನ್ನದ ಅಂಡಿಗಳನ್ನು ಮುಚ್ಚಲು ಜ್ಯುವೆಲರಿ ಅಸೋಸಿಯೇಷನ್ ನಿರ್ಧಾರ ಮಾಡಿದೆ. 

ದೇಶದಲ್ಲಿ ಈಗಾಗಲೇ ಕೊರೋನಾ ಸೋಂಕಿತರ ಸಂಖ್ಯೆ 200ರ ಗಡಿ ದಾಟಿದ್ದು, ಸಾವಿನ ಸಂಖ್ಯೆ 5 ಆಗಿದೆ. ಸೋಂಕು ನಿಯಂತ್ರಣ ನಿಟ್ಟಿನಲ್ಲಿ ಭಾನುವಾರ ಬಂದ್ ಮಾಡಲು ನಿರ್ಧಾರ ಮಾಡಲಾಗಿದೆ. 

"

ಮಾರ್ಚ್ 20ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!