
ಕಲಬುರಗಿ(ಅ. 08): ಆಳಂದ ತಾಲೂಕಿನ ಕಟ್ಟಕಡೆಯ ಹಳ್ಳಿ ನಿಂಬಾಳದಲ್ಲಿ ಕಳೆದ ಮೂರು ವರ್ಷಗಳಿಂದ ಸಾರಾಯಿ ಮಾರಾಟವಾಗುತ್ತಿಲ್ಲ. ಮೂರು ವರ್ಷಗಳ ಹಿಂದೆ ಈ ಗ್ರಾಮಸ್ಥರೆಲ್ಲರೂ ಸೇರಿ ಮಾಡಿಕೊಂಡಿರುವ ಒಪ್ಪಂದ ಈಗಲೂ ಮುಂದುವರೆದಿದೆ.. ಸಾರಾಯಿ ಮುಕ್ತ ಗ್ರಾಮವಾಗಿ ಯಶಸ್ವಿ ಮೂರು ವರ್ಷಗಳನ್ನು ಪೂರೈಸಿದೆ.. ಯಾರಾದರೂ ನಿಯಮ ಉಲ್ಲಂಘಿಸಿ ಕುಡಿದುಕೊಂಡು ಗ್ರಾಮಕ್ಕೆ ಬಂದ್ರೆ ಮಹಿಳೆಯರೇ ಹೊರಗೆ ಬಂದು ಪಂಚಾಯತಿ ಸೇರಿಸಿ ಛೀಮಾರಿ ಹಾಕ್ತಾರಂತೆ.
ನಿಂಬಾಳ ಗ್ರಾಮ ಸಾರಾಯಿ ಮುಕ್ತ ಗ್ರಾಮವಾಗುವುದರ ಹಿಂದಿನ ಶಕ್ತಿಯೇ ಜಡೆಯ ಶಾಂತಲಿಂಗ ಸ್ವಾಮೀಜಿ. ಮೌನ ಯೋಗಿ ಎಂದೇ ಖ್ಯಾತರಾಗಿರುವ ಸ್ವಾಮೀಜಿ ಕಂಡರೆ ಗ್ರಾಮಸ್ಥರಿಗೆಲ್ಲಾ ಒಂದು ರೀತಿಯಲ್ಲಿ ಶ್ರದ್ಧೆ, ಭಕ್ತಿ. ಗ್ರಾಮದಲ್ಲಿ ಕುಡಿತ ಚಟ ಹೆಚ್ಚಾಗುತ್ತಿರುವುದನ್ನು ಗಮನಿಸಿಸುತ್ತಿದ್ದ ಶಾಂತಲಿಂಗ ಸ್ವಾಮಿಗಳು, ಗ್ರಾಮಸ್ಥರೆಲ್ಲಾ ಕುಡಿಯೋದು ಬಿಟ್ಟರೆ ಮಾತ್ರ ಗ್ರಾಮಕ್ಕೆ ಬರ್ತಿನಿ ಎಂದು ಮೂರು ವರ್ಷಗಳ ಹಿಂದೆ ಪಟ್ಟು ಹಿಡಿದಿದ್ರಂತೆ.. ಪರಿಣಾಮ ಭಕ್ತರೆಲ್ಲಾ ಸಭೆ ಸೇರಿ ಸಾರಾಯಿ ಅಂಗಡಿ ಮುಚ್ಚಲು ನಿರ್ಧರಿಸಿದರು ಎಂದು ನಿಂಬಾಳ ಗ್ರಾಮಸ್ಥರು ಹೇಳುತ್ತಾರೆ.
ಸಾರಾಯಿ ಮುಕ್ತ ಗ್ರಾಮದ ಯಶಸ್ಸಿನ ನಂತರ ಜಡೆಯ ಶಾಂತಲಿಂಗ ಸ್ವಾಮಿಜಿ ಈಗ ಬಯಲು ಶೌಚ ಮುಕ್ತ ಗ್ರಾಮವಾಗಿಸಲು ಸೂಚನೆ ನೀಡಿದ್ದಾರೆ. ಇದೂ ಸಹ ಯಶಸ್ವಿಯಾದ್ರೆ ನಿಂಬಾಳ ಗ್ರಾಮ ಸಾರಾಯಿ ಮುಕ್ತ ಮತ್ತು ಬಯಲು ಶೌಚ ಮುಕ್ತ ಗ್ರಾಮವಾಗಿ ರಾಜ್ಯದಲ್ಲಿಯೇ ಮಾತ್ರವಲ್ಲ ದೇಶದಲ್ಲಿಯೇ ಮಾದರಿ ಎನಿಸಿಕೊಳ್ಳಲಿದೆ.
- ಶರಣಯ್ಯ ಹಿರೇಮಠ, ಸುವರ್ಣ ನ್ಯೂಸ್, ಕಲಬುರ್ಗಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.