
ಬೆಂಗಳೂರು (ಅ.08): ಕಾವೇರಿ ಕಣಿವೆ ಜಲಾಶಯಗಳಲ್ಲಿನ ನೀರಿನ ಸಂಗ್ರಹ ಪ್ರಮಾಣ ಹಾಗೂ ಕೃಷಿ ಚಟುವಟಿಕೆಗಳ ಬಗ್ಗೆ ಪರಿಶೀಲನೆಗೆ ಆಗಮಿಸಿರುವ ಕೇಂದ್ರದ ತಂಡ, ಇವತ್ತೂ ಕೂಡಾ ಅಧ್ಯಯನ ನಡೆಸಲಿದೆ.
ಇವತ್ತು ಮಾರ್ಕೋನಹಳ್ಳಿ ಜಲಾಶಯ, ಹೇಮಾವತಿ ಜಲಾಶಯ ವೀಕ್ಷಣೆ ಹಾಗೂ ಆ ವ್ಯಾಪ್ತಿಯಲ್ಲಿ ಬರುವ ಅಚ್ಚುಕಟ್ಟು ಪ್ರದೇಶದ ಗ್ರಾಮಗಳಿಗೆ ತೆರಳಿ ರೈತರ ಜತೆ ಸಂವಾದ ಹಾಗೂ ಮಾಹಿತಿ ಪಡೆದು ರಾತ್ರಿ ತಮಿಳುನಾಡಿನ ಮೆಟ್ಟೂರಿಗೆ ತೆರಳಲಿದೆ.
ಬೆಳಗ್ಗೆ 9 ಗಂಟೆಗೆ: ಕೆಆರ್‌ಎಸ್‌ನಿಂದ ಹೆಲಿಕಾಪ್ಟರ್ ಮೂಲಕ ಕೆ.ಆರ್.ಪೇಟೆಗೆ ಪ್ರಯಾಣ.
ಬೆಳಗ್ಗೆ 9.30- 10: ಹೇಮಾವತಿ ಎಡದಂಡೆ ಕಾಲುವೆ, ಮೂರ್ಖನಹಳ್ಳಿ, ತೊಂಡೇಕೆರೆ ಪ್ರದೇಶಗಳ ವೀಕ್ಷಣೆ
ಬೆಳಗ್ಗೆ 10ರಿಂದ ಮಧ್ಯಾಹ್ನ 1: ಚಿನಕುರಳಿ, ಹೇಮಗಿರಿ ಮತ್ತು ಮಂಡಗೆರೆ ಅಣೆಕಟ್ಟು ಕಾಲುವೆ ಅಚ್ಚುಕಟ್ಟು ವೀಕ್ಷಿಸಿ ಹೊಳೆನರಸೀಪುರ ಮಾರ್ಗವಾಗಿ ಗೊರೂರಿಗೆ ಪ್ರಯಾಣ
ಮಧ್ಯಾಹ್ನ: ಹೇಮಾವತಿ ಡ್ಯಾಂ, ಹೇಮಾವತಿ ಬಲದಂಡೆ ಮೇಲು ಕಾಲುವೆ, ಅರಕಲಗೂಡು ಪರಿಶೀಲನೆ
ಸಂಜೆ 4.45: ಹಾಸನದಿಂದ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಪ್ರಯಾಣ
ರಾತ್ರಿ 8 ಗಂಟೆ: ರಸ್ತೆ ಮಾರ್ಗವಾಗಿ ತಮಿಳುನಾಡಿನ ಮೆಟ್ಟೂರಿಗೆ ಪ್ರಯಾಣ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.